ETV Bharat / entertainment

ಎ.ಆರ್ ರೆಹಮಾನ್ ಬೆನ್ನಲ್ಲೇ ವಿಚ್ಛೇದನ ಘೋಷಿಸಿದ ಮೋಹಿನಿ: ವದಂತಿಗಳನ್ನುದ್ದೇಶಿಸಿ ವಕೀಲರು ಹೇಳಿದ್ದಿಷ್ಟು - AR RAHMAN

ಸಂಗೀತ ದಿಗ್ಗಜ ಎ.ಆರ್ ರೆಹಮಾನ್​​ ಬೆನ್ನಲ್ಲೇ ಅವರ ಬಾಸ್ ವಾದಕರಾದ ಮೋಹಿನಿ ಡೇ ಕೂಡಾ ಪತಿ ಮಾರ್ಕ್ ಹರ್ಟ್​ಸಚ್‌ನಿಂದ ಬೇರೆಯಾಗುತ್ತಿರುವುದಾಗಿ ಅನೌನ್ಸ್ ಮಾಡಿದ್ರು. ಇದು ಹಲವು ವದಂತಿಗಳಿಗೆ ಎಡೆಮಾಡಿಕೊಟ್ಟಿದೆ.

Oscar-winning composer AR Rahman
ಸಂಗೀತ ದಿಗ್ಗಜ ಎ.ಆರ್ ರೆಹಮಾನ್ (Photo: IANS)
author img

By ETV Bharat Entertainment Team

Published : Nov 21, 2024, 5:36 PM IST

ಎರಡು ದಿನಗಳ ಹಿಂದೆ (ನವೆಂಬರ್ 19) ಸಂಗೀತ ದಿಗ್ಗಜ ಎ. ಆರ್ ರೆಹಮಾನ್​​ ಮತ್ತು ಸೈರಾ ಬಾನು ದಂಪತಿ 29 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್​ಸ್ಟಾಪ್​ ಇಡುತ್ತಿರುವುದಾಗಿ ಘೋಷಿಸಿದರು. ಅವರ ಅನೌನ್ಸ್​​​ಮೆಂಟ್​ ಬೆನ್ನಲ್ಲೇ, ರೆಹಮಾನ್ ಅವರ ಬಾಸ್ ವಾದಕರಾದ ಮೋಹಿನಿ ಡೇ ಕೂಡಾ ಪತಿ ಮಾರ್ಕ್ ಹರ್ಟ್​ಸಚ್‌ನಿಂದ ಬೇರೆಯಾಗುತ್ತಿರುವುದಾಗಿ ಅನೌನ್ಸ್ ಮಾಡಿದ್ರು. ಇವರು ಎ.ಆರ್ ರೆಹಮಾನ್​​ ಜೊತೆ ವಿಶ್ವದಾದ್ಯಂತ 40ಕ್ಕೂ ಹೆಚ್ಚು ಶೋಗಳಲ್ಲಿ ಭಾಗಿಯಾಗಿದ್ದಾರೆ. ಇಬ್ಬರ ವಿಚ್ಛೇದನ ಒಂದೇ ಸಮಯ ಘೋಷಣೆಯಾದ ಹಿನ್ನೆಲೆ, ಏನಾದ್ರು ಲಿಂಕ್​ ಇದೆಯಾ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು.

ಇದೀಗ, ರೆಹಮಾನ್ ಅವರ ವಕೀಲರಾದ ವಂದನಾ ಶಾ ಅವರು ಈ ಊಹಾಪೋಹಗಳನ್ನು ನಿರಾಕರಿಸಿದ್ದಾರೆ. ರೆಹಮಾನ್ ಮತ್ತು ಮೋಹಿನಿ ತಮ್ಮ ವಿಚ್ಛೇದನಗಳನ್ನು ಕೆಲವೇ ಗಂಟೆಗಳ ಅಂತರದಲ್ಲಿ ಘೋಷಿಸಿದ ಹಿನ್ನೆಲೆ, ಇಬ್ಬರ ಸಂಬಂಧದ ಸುತ್ತ ಊಹಾಪೋಹಗಳು ಎದ್ದಿದ್ದವು.

ಸುದ್ದಿವಾಹಿನಿಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ, "ಈ ವಿಚ್ಛೇದನಗಳ ನಡುವೆ ಯಾವುದೇ ಕನೆಕ್ಷನ್​ ಇಲ್ಲ. ಸೈರಾ ಮತ್ತು ರೆಹಮಾನ್ ಪರಸ್ಪರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ರೆಹಮಾನ್ ಮತ್ತು ಸೈರಾ ಇಬ್ಬರೂ ಅಗಾಧವಾಗಿ ಯೋಚಿಸಿದ ನಂತರವೇ ನಿರ್ಧಾರ ಕೈಗೊಂಡಿದ್ದಾರೆಂದು ವಕೀಲೆ ವಂದನಾ ಶಾ ಒತ್ತಿ ಹೇಳಿದರು.

ದಂಪತಿಯ ಪ್ರತ್ಯೇಕತೆಯು ಭಾವನಾತ್ಮಕ ಸವಾಲುಗಳನ್ನು ಆಧರಿಸಿದೆ. ಡಿವೋರ್ಸ್​ಗೆ ಸಂಬಂಧಿಸಿದಂತೆ ಹಣಕಾಸಿನ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ವಕೀಲರು ತಿಳಿಸಿದ್ದಾರೆ. ಈ ಸವಾಲಿನ ಸಮಯದಲ್ಲಿ ರೆಹಮಾನ್ ಮತ್ತು ಸೈರಾ ಇಬ್ಬರ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದರು.

AR Rahman's daughter shares cryptic post
ರೆಹಮಾನ್ ಪುತ್ರಿಯ ಪೋಸ್ಟ್ (Photo: Instagram)

ಮತ್ತೊಂದೆಡೆ ಪುತ್ರಿ ರಹೀಮಾ, ತಂದೆ ತಾಯಿಯ ವಿಚ್ಛೇದನ ಘೋಷಣೆಯ ನಂತರ 'ಕಷ್ಟ'ದ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪ್ರಶಾಂತ ಭೂದೃಶ್ಯದ ಚಿತ್ರದೊಂದಿಗೆ "ಪ್ರತೀ ಕಷ್ಟಗಳ ನಡುವೆಯೂ ಸುಲಭವಿದೆ. ನಿಮ್ಮ ಭಗವಂತ ನಿಮಗೆ ಎಲ್ಲವನ್ನೂ ನೀಡಲಿದ್ದಾನೆ ಮತ್ತು ನೀವು ತೃಪ್ತರಾಗಲಿದ್ದೀರಿ" ಎಂದಿದೆ. ಇನ್ನು ರೆಹಮಾನ್, ತಮ್ಮ ಪೋಸ್ಟ್​​ನಲ್ಲಿ ಪ್ರತ್ಯೇಕತೆಯ ನೋವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಇದು ತಮ್ಮನ್ನು 'ಛಿದ್ರಗೊಳಿಸುವ' ನಿರ್ಧಾರ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ಸಿಂಗಲ್​ ಆಗಿರುತ್ತೇನೆಂದು ಅನಿಸುತ್ತದೆಯೇ? ಲವ್​ ಲೈಫ್​ ಬಗ್ಗೆ ಬಾಯ್ಬಿಟ್ಟ ವಿಜಯ್​ ದೇವರಕೊಂಡ

ರೆಹಮಾನ್ ಅವರ ಪೋಸ್ಟ್‌ನಲ್ಲಿ, 29 ವರ್ಷಗಳ ದಾಂಪತ್ಯ ನಡೆಸಿರುವ "ನಾವು ಗ್ರ್ಯಾಂಡ್​ ತರ್ಟಿ ಆಚರಿಸಲು ಆಶಿಸಿದ್ದೆವು. ಆದ್ರಿದು ಅಂತ್ಯ ತಲುಪಿದೆ. ಹೃದಯ ಛಿದ್ರಗೊಂಡಿದೆ. ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಸ್ನೇಹಿತರಿಗೆ ಧನ್ಯವಾದಗಳು'' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: 'AI ಅಥವಾ ಎ.ಆರ್.ರೆಹಮಾನ್'​? ಸಂಗೀತ ನಿರ್ದೇಶಕನ ಡಿವೋರ್ಸ್​ ಪೋಸ್ಟ್‌ಗೆ ಟೀಕೆ, ಯಾಕೆ ಗೊತ್ತಾ?

ರೆಹಮಾನ್​ ಸೈರಾ 1995ರಲ್ಲಿ ಮದುವೆಯಾದರು. ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ. ಮಂಗಳವಾರ ಸಂಜೆ ತಮ್ಮ ವಿಚ್ಛೇದನವನ್ನು ಘೋಷಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.