ETV Bharat / entertainment

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾಗೆ ಖ್ಯಾತ ನಿರ್ದೇಶಕ ರಾಜಮೌಳಿ ನೀಡಿದ ಸಲಹೆ ಏನ್​ ಗೊತ್ತಾ? - Alia Bhatt

ಸ್ಕ್ರಿಪ್ಟ್ ಆಯ್ಕೆ ವಿಚಾರವಾಗಿ ನಿರ್ದೇಶಕ ರಾಜಮೌಳಿ ಅವರು ಕೊಟ್ಟ ಸಲಹೆಯನ್ನು ನಟಿ ಆಲಿಯಾ ಭಟ್ ಬಹಿರಂಗಪಡಿಸಿದ್ದಾರೆ.

Alia Bhatt Shares SS Rajamouli's Advice On Script Choices
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾಗೆ ಹೆಸರಾಂತ ನಿರ್ದೇಶಕ ರಾಜಮೌಳಿ ಸಲಹೆ
author img

By ETV Bharat Karnataka Team

Published : Mar 14, 2024, 7:37 AM IST

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್​​ ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿದ್ದಾರೆ. ಬಾಲಿವುಡ್​ ಅಂಗಳದಲ್ಲಿ ನಟಿ, ನಿರ್ಮಾಪಕಿಯಾಗಿ ಮಾತ್ರವಲ್ಲದೇ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜನಪ್ರಿಯ ತಾರೆ, ನಿರ್ದೇಶಕ ಎಸ್ಎಸ್ ರಾಜಮೌಳಿ ನೀಡಿರೋ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ವಿಶ್ವದಾದ್ಯಂತ ಸದ್ದು ಮಾಡಿದ ಆರ್​ಆರ್​ಆರ್​ ಸಿನಿಮಾದಲ್ಲಿ ಬಾಲಿವುಡ್​ ಬೆಡಗಿ ಆಲಿಯಾ ಭಟ್​ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಚಿತ್ರಕ್ಕೆ ನಿರ್ದೇಶಕ ಎಸ್ಎಸ್ ರಾಜಮೌಳಿ ಆ್ಯಕ್ಷನ್​ ಕಟ್​ ಹೇಳಿದ್ದರು. ಇದೀಗ ಬ್ಯುಸಿನೆಸ್​ ಮ್ಯಾಗಜಿನ್​​​ ಜೊತೆಗಿನ ಸಂದರ್ಶನದಲ್ಲಿ ತಮಗೆ ರಾಜಮೌಳಿ ಅವರು ನೀಡಿದ ಕೆಲ ಅಮೂಲ್ಯ ಸಲಹೆಗಳನ್ನು ಆಲಿಯಾ ಹಂಚಿಕೊಂಡಿದ್ದಾರೆ. ಅವರ ಈ ಬುದ್ಧಿವಂತಿಕೆಯ ಮಾತುಗಳು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದವು? ಸಿನಿಮಾಗಳ ಆಯ್ಕೆ ಮತ್ತು ಪ್ರೇಕ್ಷಕರೊಂದಿಗೆ ಬಾಂಧವ್ಯವನ್ನು ಬೆಸೆಯಲು ಹೇಗೆ ಸಹಾಯ ಮಾಡಿವೆ ಎಂಬುದನ್ನು ನಟಿ ಈ ಸಂದರ್ಶನದಲ್ಲಿ ಬಹಿರಂಗಪಡಿಸಿದರು.

ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡುವ ವಿಚಾರವಾಗಿ ಮಾತನಾಡುವ ವೇಳೆ ಆಲಿಯಾ, ಆರ್​ಆರ್​ಆರ್​ ನಿರ್ದೇಶಕ ರಾಜಮೌಳಿ ಅವರೊಂದಿಗಿನ ಮಾತುಕತೆಯನ್ನು ಉಲ್ಲೇಖಿಸಿದರು. ಸಿನಿಮಾಗಳನ್ನು ಆಯ್ಕೆ ಮಾಡುವ ಬಗ್ಗೆ ನಟಿಯು ನಿರ್ದೇಶಕರಲ್ಲಿ ಸಲಹೆ ಕೇಳಿದ್ದ ಸಂದರ್ಭ, ರಾಜಮೌಳಿ ಆಲಿಯಾಗೆ ಸಲಹೆ ನೀಡಿದ್ದರು. "ನನ್ನ ವೃತ್ತಿಜೀವನದ ಆರಂಭದಲ್ಲಿ ಪ್ರಪಂಚದಲ್ಲೇ ಅತ್ಯಂತ ಪ್ರೀತಿಪಾತ್ರ ವ್ಯಕ್ತಿಯಾಗುವುದು, ವಿಶೇಷವಾಗಿ ನಾನು ಮಾಡುವ ಸಿನಿಮಾಗಳು ಮತ್ತು ನಾನು ನಿರ್ವಹಿಸುವ ಪಾತ್ರಗಳಿಗೆ ಪ್ರೀತಿ ಗಳಿಸುವುದು ನನ್ನ ಗುರಿಯಾಗಿತ್ತು'' ಎಂಬುದನ್ನು ಆಲಿಯಾ ಉಲ್ಲೇಖಿಸಿದರು.

"ಸಿನಿ ಕೆಲಸಗಳಿಗೆ ಯಾವುದೇ ಸೂತ್ರವಿಲ್ಲ, ಆದರೆ ನಮ್ಮ ಕೆಲಸದ ಮೇಲೆ ಪ್ರೀತಿ ಇರಬೇಕು. ಏನನ್ನೇ ಮಾಡಿದರೂ ಬಹಳ ಪ್ರೀತಿಯಿಂದ ಮಾಡಬೇಕು. ಸಿನಿಮಾ ನಿಮ್ಮ ನಿರೀಕ್ಷೆ ತಲುಪದಿದ್ದರೂ, ನಿಮ್ಮ ಕಣ್ಣುಗಳಲ್ಲಿನ ಆ ಪ್ರೀತಿ ಪ್ರೇಕ್ಷಕರೊಂದಿಗೆ ಕನೆಕ್ಟ್​ ಆಗುತ್ತದೆ. ಪ್ರೇಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಇದು ಸಹಕಾರಿ ಆಗುತ್ತದೆ'' ಎಂದು ರಾಜಮೌಳಿಯವರು ಸಲಹೆ ನೀಡಿದ್ದರು ಎಂದು ಇದೇ ವೇಳೆ ಆಲಿಯಾ ತಿಳಿಸಿದರು.

ಇದನ್ನೂ ಓದಿ: ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತ: ಆಟೋ ಚಾಲಕನಿಗೆ ಗಾಯ

ಒಂದು ದಶಕದಿಂದ ಆಲಿಯಾ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನಾ ಸಾಮರ್ಥ್ಯದಿಂದ ಅಪಾರ ಜನಪ್ರಿಯತೆ ಸಂಪಾದಿಸಿದ್ದಾರೆ. ನಟನೆಯ ಜೊತೆಗೆ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್‌ ಎಂಬ ಬ್ಯಾನರ್​​ ಹೊಂದಿದ್ದಾರೆ. 'ಡಾರ್ಲಿಂಗ್ಸ್' ಆಲಿಯಾ ಭಟ್​ ನಿರ್ಮಾಣದ ಚೊಚ್ಚಲ ಚಿತ್ರ. ಆಲಿಯಾ ನಿರ್ಮಿಸಿ, ನಟಿಸುತ್ತಿರುವ ಮತ್ತೊಂದು ಚಿತ್ರ 'ಜಿಗ್ರಾ'. ಕರಣ್ ಜೋಹರ್ ಜೊತೆಗೆ ಸಹ-ನಿರ್ಮಾಪಕಿಯಾಗಿ ಈ ಪ್ರೊಜೆಕ್ಟ್​ನಲ್ಲಿ ಕೈ ಜೋಡಿಸಿದ್ದಾರೆ. ವಾಸನ್ ಬಾಲಾ ನಿರ್ದೇಶನದ ಈ ಚಿತ್ರದಲ್ಲಿ ವೇದಾಂಗ್ ರೈನಾ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇನ್ನೂ, ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಅಂಡ್ ವಾರ್ ಸಿನಿಮಾದಲ್ಲಿ ರಣ್​​ಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಜೊತೆಗೆ ಕಾಣಿಸಿಕೊಳ್ಳಲು ಆಲಿಯಾ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಮಾಲಿವುಡ್​ಗೆ ಅನುಷ್ಕಾ ಶೆಟ್ಟಿ ಎಂಟ್ರಿ: ಪ್ಯಾನ್​​ ಇಂಡಿಯಾವಲ್ಲದೇ, ಕೊರಿಯನ್​ನಲ್ಲೂ ಸಿನಿಮಾ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.