ETV Bharat / entertainment

ಅಕ್ಷಯ್​​-ಪ್ರಿಯದರ್ಶನ್ ಕಾಂಬೋದಲ್ಲಿ ಹೊಸ ಸಿನಿಮಾ: ಈ ಮೂವರಲ್ಲಿ ಯಾರು ಹೀರೋಯಿನ್? - Akshay Kumar Movie Updates

author img

By ETV Bharat Karnataka Team

Published : May 14, 2024, 8:37 AM IST

Akshay Kumar Movie: ಪ್ರಿಯದರ್ಶನ್ ಹಾಗೂ ಅಕ್ಷಯ್​ ಕುಮಾರ್ ಕಾಂಬಿನೇಶನ್​ನ ಹೊಸ ಸಿನಿಮಾ ಕೆಲಸಗಳು ಸಾಗಿವೆ.

Alia Bhatt, Keerthy Suresh, Kiara Advani
ಆಲಿಯಾ ಭಟ್​, ಕೀರ್ತಿ ಸುರೇಶ್​​, ಕಿಯಾರಾ ಅಡ್ವಾಣಿ (ETV Bharat Archives)

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ನಟನೆಯ ಸಿನಿಮಾಗಳು ಒಂದಾದ ಮೇಲೊಂದರಂತೆ ಬಿಡುಗಡೆಯಾಗುತ್ತಿವೆ. ಕೆಲವು ಸಿನಿಮಾ ಕೆಲಸಗಳು ಮುಂದುವರಿದಿವೆ. ನಟನ ಕೈಯಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್​​​​ಗಳಿದ್ದು, ಹೊಸ ಯೋಜನೆಯೊಂದಕ್ಕೆ ಕೈ ಹಾಕಿದ್ದಾರಂತೆ. ಸ್ಟಾರ್ ಡೈರೆಕ್ಟರ್ ಪ್ರಿಯದರ್ಶನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚಿತ್ರರಂಗ ಸೇರಿದಂತೆ ಅಭಿಮಾನಿ ವಲಯದಲ್ಲಿ ಹರಿದಾಡುತ್ತಿದೆ.

ಅಕ್ಷಯ್​​, ಪ್ರಿಯದರ್ಶನ್ ಕಾಂಬಿನೇಶನ್​​ನಲ್ಲಿ 'ಹೇರಾ ಫೇರಿ', 'ಕಟ್ಟಾ ಮೀಠ' ಚಿತ್ರಗಳು ಮೂಡಿ ಬಂದಿದ್ದವು. ಆ ಕಾಲಕ್ಕೆ ಈ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಎನಿಸಿಕೊಂಡಿದ್ದವು. ಇದಾಗಿ 14 ವರ್ಷಗಳ ಅಂತರದ ನಂತರ ಮತ್ತೆ ಇವರಿಬ್ಬರ ಕಾಂಬಿನೇಶನ್​​ನಲ್ಲಿ ಹೊಸ ಸಿನಿಮಾ ತಯಾರಾಗುತ್ತಿದೆ. ಹಾಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾರರ್ ಕಾಮಿಡಿ ಜಾನರ್‌ನಲ್ಲಿ ಸಿನಿಮಾ ತಯಾರಾಗುತ್ತಿರುವುದರಿಂದ ಸಿನಿಪ್ರಿಯರ ಕುತೂಹಲ ತುಸು ಹೆಚ್ಚೇ ಇದೆ.

ಈ ನಡುವೆ ಸಿನಿಮಾದ ನಾಯಕಿ ಯಾರು ಎಂಬ ಪ್ರಶ್ನೆ ಹೆಚ್ಚು ಚರ್ಚಿತ ವಿಷಯವಾಗಿದೆ. ಚಿತ್ರಕ್ಕೆ ಮೂವರು ನಾಯಕಿಯರ ಹೆಸರು ಪರಿಗಣನೆಯಲ್ಲಿದೆ. ಸೌತ್​ ಸಿನಿಮಾ ಇಂಡಸ್ಟ್ರಿಯ ಕೀರ್ತಿ ಸುರೇಶ್, ಬಿಟೌನ್ ಸುಂದರಿಯರಾದ ಆಲಿಯಾ ಭಟ್ ಮತ್ತು ಕಿಯಾರಾ ಅಡ್ವಾಣಿ ಹೆಸರುಗಳು ಮುಂಚೂಣಿಯಲ್ಲಿವೆ. ಯಾವುದೇ ಅಧಿಕೃತ ಮಾಹಿತಿ ಇರದಿದ್ದರೂ ಈ ನಾಯಕಿಯರ ಹೆಸರುಗಳು ಟ್ರೆಂಡಿಂಗ್​ನಲ್ಲಿವೆ.

ಈಗಾಗಲೇ ನಾಯಕ ಹಾಗೂ ನಿರ್ದೇಶಕರು ಆಲಿಯಾ ಭಟ್ ಅವರನ್ನು ಓಕೆ ಮಾಡಿದ್ದಾರೆ. ಈ ಯೋಜನೆ ಓಕೆಯಾಗದಿದ್ದರೆ, ಚಿತ್ರತಯಾರಕರು ಅಕ್ಷಯ್‌ಗಾಗಿ ಕಿಯಾರಾ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮತ್ತೊಂದೆಡೆ, ದಕ್ಷಿಣದ ಸ್ಟಾರ್ ನಟಿ ಕೀರ್ತಿ ಸುರೇಶ್ ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳೂ ಇವೆ. ಈಗಾಗಲೇ ಬಾಲಿವುಡ್ ನಟ ವರುಣ್ ಧವನ್ ಜೊತೆ 'ಬೇಬಿ ಜಾನ್' ಎಂಬ ಹಿಂದಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕೀರ್ತಿ ಈ ಸಿನಿಮಾಗೂ ಡೇಟ್ಸ್ ಫಿಕ್ಸ್ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದು ನಿಜವಾದರೆ ಕೀರ್ತಿ ಸುರೇಶ್​​ ಬಾಲಿವುಡ್​​ ನಟರೊಂದಿಗೆ ಎರಡು ಚಿತ್ರಗಳಲ್ಲಿ ಕಾಣಿಸಿಕೊಳ್ಳುವರು. ಎಲ್ಲದಕ್ಕೂ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಅರ್ಮಾನ್ ಮಲಿಕ್​ ದನಿಯಲ್ಲಿ ಮೂಡಿಬಂತು ಡಾಲಿಯ 'ಕೋಟಿ' ಚಿತ್ರದ ಚೊಚ್ಚಲ ಗೀತೆ - Kotee Movie Song

ಒಟ್ಟಾರೆ ಚಿತ್ರತಂಡ ಈ ಮೂವರು ನಾಯಕಿಯರನ್ನು ಸಂಪರ್ಕಿಸಿದ್ದು, ಸ್ಕ್ರಿಪ್ಟ್ ಯಾರಿಗೆ ಇಷ್ಟವಾಗುತ್ತದೆ, ಯಾರ ಡೇಟ್ಸ್ ಶೂಟಿಂಗ್​ಗೆ ಹೊಂದಿಕೆಯಾಗಲಿದೆ ಎಂಬುದನ್ನು ನೋಡಿಕೊಂಡು ಅಂತಿಮ ನಿರ್ಧಾರ ಹೊರಬೀಳಲಿದೆ.

ಇದನ್ನೂ ಓದಿ: ಕೇನ್ಸ್‌ ಫಿಲ್ಮ್​ ಫೆಸ್ಟಿವಲ್​ನಲ್ಲಿ ಟಾಲಿವುಡ್​ನ ಬಹುನಿರೀಕ್ಷಿತ 'ಕಣ್ಣಪ್ಪ' ಟೀಸರ್ ಬಿಡುಗಡೆಗೆ ಸಿದ್ದತೆ - Kannappa Film Big Update

ETV Bharat Logo

Copyright © 2024 Ushodaya Enterprises Pvt. Ltd., All Rights Reserved.