ETV Bharat / entertainment

ಐಶ್ವರ್ಯಾ ರೈ - ಅಭಿಷೇಕ್​​ ಬಚ್ಚನ್ ವಿಚ್ಛೇದನ ವದಂತಿ; ಎಲ್ಲಾ ಗಾಸಿಪ್​ಗೆ ಬ್ರೇಕ್​ ಹಾಕಿತು ಆ ಒಂದು ರಿಂಗ್​! - Aishwarya Abhishek - AISHWARYA ABHISHEK

ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್​​ ವಿಚ್ಛೇದನ ವದಂತಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಆದ್ರೆ ಇಂತಹ ಆಧಾರರಹಿತ ಊಹಾಪೋಹಗಳಿಗೆ ಕಿವಿಗೊಡದ ಪವರ್​ಫುಲ್​ ಸೆಲೆಬ್ರಿಟಿ ಕಪಲ್​ ತಮ್ಮ ಸುಖಸಂಸಾರ ಮುಂದುವರಿಸಿದ್ದಾರೆ. ಇದೀಗ ಐಶ್ವರ್ಯಾ ರೈ ಪರೋಕ್ಷವಾಗಿ ವದಂತಿಗೆ ಫುಲ್​​ಸ್ಟಾಪ್​ ಇಡುವ ಕೆಲಸ ಮಾಡಿದ್ದಾರೆ.

Abhishek Bachchan Aishwarya Rai
ಅಭಿಷೇಕ್​​ ಬಚ್ಚನ್ - ಐಶ್ವರ್ಯಾ ರೈ ಬಚ್ಚನ್ (Photo: ANI)
author img

By ETV Bharat Karnataka Team

Published : Sep 23, 2024, 1:21 PM IST

ಹೈದರಾಬಾದ್: ಭಾರತೀಯ ಚಿತ್ರರಂಗದ ಜನಪ್ರಿಯ ತಾರಾ ದಂಪತಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್​​ ವಿಚ್ಛೇದನ ಪಡೆಯಲಿದ್ದಾರಾ? ಎಂಬ ವದಂತಿಗಳು ಬಹಳ ದಿನಗಳಿಂದ ಇವೆ. ​ಆದ್ರೆ ಸೆಲೆಬ್ರಿಟಿ ಕಪಲ್​ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಸುಖಸಂಸಾರ ಸಾಗಿಸುತ್ತಿದ್ದಾರೆ. ವಿಚ್ಛೇದನ ಊಹಾಪೋಹಗಳ ನಡುವೆ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ತಮ್ಮ ವೆಡ್ಡಿಂಗ್​​ ರಿಂಗ್​​ ಧರಿಸಿ ಕಾಣಿಸಿಕೊಂಡರು. ಈ ಮೂಲಕ ಪತಿ ಅಭಿಷೇಕ್ ಬಚ್ಚನ್ ಅವರೊಂದಿಗಿನ ಸಂಬಂಧದ ಸುತ್ತಲಿರುವ ವದಂತಿಗಳಿಗೆ ಫುಲ್​ ಸ್ಟಾಪ್​​ ಇಟ್ಟರು.

ಈ ಊಹಾಪೋಹಗಳು ನಿನ್ನೆ ಮೊನ್ನೆಯದ್ದಲ್ಲ. ಹಲವು ತಿಂಗಳಿನಿಂದ ಕೇಳಿಬರುತ್ತಿದೆ. ಅದರಲ್ಲೂ ಇತ್ತೀಚೆಗಷ್ಟೇ ಐಶ್ವರ್ಯಾ ಸೈಮಾ 2024 ಕಾರ್ಯಕ್ರಮದಲ್ಲಿ ಉಂಗುರವಿಲ್ಲದೇ ಕಾಣಿಸಿಕೊಂಡ ನಂತರ ವದಂತಿಗಳು ಉಲ್ಭಣಗೊಂಡಿದ್ದವು. ಸಮಾರಂಭದಲ್ಲಿ ಮಗಳು ಆರಾಧ್ಯ ಅವರೊಂದಿಗೆ ಕಾಣಿಸಿಕೊಂಡಿದ್ದು, ಅಭಿಷೇಕ್ ಜೊತೆಗಿರಲಿಲ್ಲ. ಐಶ್ವರ್ಯಾ ಅದೆಲ್ಲೇ ಹೋಗಲಿ, ಹೆಚ್ಚಾಗಿ ವೆಡ್ಡಿಂಗ್​​ ರಿಂಗ್ ಧರಿಸಿರುತ್ತಾರೆ. ಆದ್ರೆ ಇತ್ತೀಚಿನ ಕಾರ್ಯಕ್ರಮಕ್ಕೆ ಉಂಗರವಿಲ್ಲದೇ ಬಂದಿದ್ದು, ವದಂತಿಗೆ ಪುಷ್ಟಿ ನೀಡಿತ್ತು.​​​

ಇದೀಗ ಪ್ಯಾರಿಸ್ ಫ್ಯಾಷನ್ ಈವೆಂಟ್‌ನಲ್ಲಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಉಂಗುರ, ತಾರಾ ದಂಪತಿಯ ವೈವಾಹಿಕ ಜೀವನದ ಕುರಿತ ಚರ್ಚೆ ಸೃಷ್ಟಿಸಿದೆ. ದಂಪತಿ ಸಾರ್ವಜನಿಕವಾಗಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿರುವುದು ಊಹಾಪೋಹಗಳ ಉಲ್ಬಣಕ್ಕೆ ಪ್ರಮುಖ ಕಾರಣ. ಈ ವರ್ಷಾರಂಭದಲ್ಲಿ ಅಂಬಾನಿ ವಿವಾಹದಲ್ಲಿ ಸಂಪೂರ್ಣ ಬಚ್ಚನ್​​ ಕುಟುಂಬ ಭಾಗವಹಿಸಿತ್ತು. ಆದ್ರೆ ಐಶ್ವರ್ಯಾ ಮತ್ತು ಆರಾಧ್ಯ ಪ್ರತ್ಯೇಕವಾಗಿ ಆಗಮಿಸಿದ್ದರು. ಇದು ವದಂತಿಗಳಿಗೆ ಮತ್ತಷ್ಟು ಇಂಬು ನೀಡಿತ್ತು.

2007ರಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ಐಶ್​ ಮತ್ತು ಅಭಿ ತಮ್ಮ ಖಾಸಗಿ ಜೀವನವನ್ನು ಸಾರ್ವಜನಿಕ ಗಮನದಿಂದ ದೂರವಿಟ್ಟಿದ್ದಾರೆ. ವಾರ್ಷಿಕೋತ್ಸವ ಮತ್ತು ಜನ್ಮದಿನ ಸೇರಿದಂತೆ ವಿಶೇಷ ಸಂದರ್ಭಗಳಷ್ಟೇ ಕೆಲ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಊಹಾಪೋಹಗಳ ಹೊರತಾಗಿಯೂ, ಐಶ್ವರ್ಯಾ ಮತ್ತು ಅಭಿಷೇಕ್ ಇಬ್ಬರೂ ಮೌನ ವಹಿಸಿದ್ದಾರೆ. ಈ ಬಗ್ಗೆ ಇನ್ನೂ ಯಾವುದೇ ರೀತಿಯಲ್ಲಿ ಬಹಿರಂಗ ಹೇಳಿಕೆಯನ್ನು ನೀಡಿಲ್ಲ.

ಇದನ್ನೂ ಓದಿ: ಶಿವಣ್ಣನ ಪಾದ ಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ: 'ದೊಡ್ಮನೆಗಳ ದೊಡ್ಡತನ'ವೆಂದ ನೆಟ್ಟಿಗರು - Aaradhya Touches Shivrajkumar Feet

ಐಶ್ವರ್ಯಾ ಇತ್ತೀಚೆಗೆ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ 2024 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2ರಲ್ಲಿನ ಅಮೋಘ ಅಭಿನಯಕ್ಕೆ ಅತ್ಯುತ್ತಮ ನಟಿ (ಕ್ರಿಟಿಕ್ಸ್) ಪ್ರಶಸ್ತಿಯನ್ನು ಗೆದ್ದುಕೊಂಡರು. ಮಗಳು ಆರಾಧ್ಯ ನಟಿಯೊಂದಿಗೆ ಕಾಣಿಸಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ವಿಡಿಯೋಗಳು ಸಖತ್​​ ಸದ್ದು ಮಾಡಿವೆ.

ಇದನ್ನೂ ಓದಿ: ಐಶ್ವರ್ಯಾ ರೈ ಆಸ್ಪತ್ರೆಗೆ ರವಾನಿಸಲು ಅನಿಲ್​ ಅಂಬಾನಿಯ ಪ್ರೈವೇಟ್​ ಜೆಟ್​​ ತರಿಸಿದ್ದ ಅಮಿತಾಭ್​ ಬಚ್ಚನ್​​ - Amitabh Aishwarya

ವಿಡಿಯೋಗಳ ಪೈಕಿ ಕರುನಾಡ ಚಕ್ರವರ್ತಿ ಶಿವರಾಜ್​​​ಕುಮಾರ್​ ಜೊತೆಗಿನ ವಿಡಿಯೋ ಸಾಕಷ್ಟು ಗಮನ ಸೆಳೆದಿತ್ತು. ಪ್ರಶಸ್ತಿ ಸ್ವೀಕರಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಮಗಳು ಆರಾಧ್ಯ ತಾಯಿಯನ್ನು ಅಪ್ಪಿಕೊಂಡಿದ್ದಾರೆ. ಅದೇ ವೇಳೆ ಕನ್ನಡದ ಖ್ಯಾತ ನಟ ಶಿವರಾಜ್​ಕುಮಾರ್ ಅವರ ಎಂಟ್ರಿ ಆಗಿದೆ. ಐಶ್ವರ್ಯಾ ರೈ ಹ್ಯಾಟ್ರಿಕ್​ ಹೀರೋನೊಂದಿಗೆ ಮಾತುಕತೆ ನಡೆಸಿದ್ದಾರೆ. ಪುತ್ರಿ ಆರಾಧ್ಯ ಅವರನ್ನು ಪರಿಚಯ ಮಾಡಿಕೊಡುತ್ತಿದ್ದಂತೆ, ಆರಾಧ್ಯ ಶಿವಣ್ಣನ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯ ಅವರ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಈ ಒಂದು ಸುಂದರ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.