ETV Bharat / entertainment

ಡಿವೋರ್ಸ್ ವದಂತಿ ಮಧ್ಯೆ ಮಗಳೊಂದಿಗೆ ದೇಶಕ್ಕೆ ವಾಪಸ್ಸಾದ ಐಶ್ವರ್ಯಾ - ವಿಡಿಯೋ - Aishwarya Rai - AISHWARYA RAI

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ನ್ಯೂಯಾರ್ಕ್ ಪ್ರವಾಸ ಮುಗಿಸಿ ಮಗಳು ಆರಾಧ್ಯಳ ಜೊತೆ ಮುಂಬೈಗೆ ವಾಪಸ್ಸಾಗಿದ್ದಾರೆ. ಇಂದು ಬೆಳಗ್ಗೆ ಮುಂಬೈ ಏರ್​​ಪೋರ್ಟ್​​ನಲ್ಲಿ ಕಾಣಿಸಿಕೊಂಡರು. ಐಶ್ -​ ಅಭಿ ವಿಚ್ಛೇದನ ವದಂತಿಗಳ ಹೊರತಾಗಿಯೂ, ಬಾಲಿವುಡ್​ ಬೆಡಗಿ ಪಾಪರಾಜಿ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ಬಹಳ ಲವಲವಿಕೆಯಿಂದ ಮಾತನಾಡಿಸಿದ್ದಾರೆ. ಊಹಾಪೋಹಗಳಿಂದ ಚಿಂತಿತರಾಗಿದ್ದ ಅಭಿಮಾನಿಗಳಿಗೆ ಈ ವಿಡಿಯೋ ಸಮಾಧಾನ ತರಿಸಿದೆ.

Aaradhya and Aishwarya Rai
ಆರಾಧ್ಯ - ಐಶ್ವರ್ಯಾ ರೈ (Video grab)
author img

By ETV Bharat Entertainment Team

Published : Aug 1, 2024, 12:44 PM IST

ಮಗಳು ಆರಾಧ್ಯಳೊಂದಿಗೆ ಐಶ್ವರ್ಯಾ ರೈ (ANI)

ನಟಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ನ್ಯೂಯಾರ್ಕ್‌ ಪ್ರವಾಸ ಕೈಗೊಂಡಿದ್ದರು. ಸಾಗರೋತ್ತರ ಪ್ರದೇಶದಲ್ಲಿ ಗುಣಮಟ್ಟದ ಸಮಯ ಕಳೆದ ಮಾಜಿ ವಿಶ್ವ ಸುಂದರಿ ಮಗಳು ಆರಾಧ್ಯ ಬಚ್ಚನ್‌ ಅವರೊಂದಿಗೆ ಮುಂಬೈಗೆ ವಾಪಸ್ಸಾಗಿದ್ದಾರೆ. ತಾಯಿ ಮಗಳ ಜೋಡಿ ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಪಾಪರಾಜಿಗಳು ಇವರ ಫೋಟೋ, ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಡಿವೋರ್ಸ್ ವದಂತಿ ಉಲ್ಭಣ: ನಟ ಅಭಿಷೇಕ್ ಬಚ್ಚನ್ ಜೊತೆ ಹಾಗೂ ಐಶ್ವರ್ಯಾ ನಡುವೆ ಬಿರುಕು ಮೂಡಿವೆ ಎಂಬ ವದಂತಿಗಳು ಹೆಚ್ಚುತ್ತಿವೆ. ಇತ್ತೀಚೆಗೆ ನಡೆದ ವಿವಾಹ ಸಮಾರಂಭವೊಂದರಲ್ಲಿ, ಐಶ್ವರ್ಯಾ ಮತ್ತು ಆರಾಧ್ಯ ಬಚ್ಚನ್​ ಕುಟುಂಬದೊಂದಿಗೆ ಬಾರದೇ, ಪ್ರತ್ಯೇಕವಾಗಿ ಆಗಮಿಸಿದರು. ಪತಿ ಅಭಿಷೇಕ್​​​ ಅವರು ಅಮಿತಾಭ್​​ ಬಚ್ಚನ್, ಜಯಾ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ನಂದಾ ಸೇರಿದಂತೆ ತಮ್ಮ ಸಂಪುರ್ಣ ಕುಟುಂಬ ಸದಸ್ಯರೊಂದಿಗೆ ಬಂದಿದ್ದರು. ಅದಾಗ್ಯೂ ಕಾರ್ಯಕ್ರಮದೊಳಗೆ ದಂಪತಿ ಮತ್ತು ಮಗಳು ಒಟ್ಟಿಗೆ ಕಾಣಿಸಿಕೊಂಡಿದ್ದರೂ ಕೂಡ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರಾ ಎಂಬ ರೂಮರ್ ಮಾತ್ರ​ ಹೆಚ್ಚುತ್ತಲೇ ಇದೆ . ಈ ಊಹಾಪೋಹ ಬಹುದಿನಗಳಿಂದ ಇದ್ದು, ತಾರಾ ದಂಪತಿ ಮಾತ್ರ ಮೌನ ಮುಂದುವರಿಸಿದ್ದಾರೆ.

ವಿಚ್ಛೇದನ ವದಂತಿ ಉಲ್ಭಣಗೊಂಡಿದ್ದೇಕೆ? ವಿಚ್ಛೇದನ ಪ್ರಕರಣಗಳ ಕುರಿತ ಪೋಸ್ಟ್ ಒಂದನ್ನು ಇತ್ತೀಚೆಗಷ್ಟೇ ಅಭಿಷೇಕ್ ಲೈಕ್​ ಮಾಡಿದ್ದರು. ಹಾಗಾಗಿ ಈ ವದಂತಿಗಳು ಉಲ್ಭಣಗೊಂಡವು. ಈ ಪೋಸ್ಟ್ ಐಶ್ವರ್ಯಾ ಅವರ ಆಪ್ತ ಸ್ನೇಹಿತ ಡಾ. ಝಿರಾಕ್ ಮಾರ್ಕರ್ ಅವರ ಉಲ್ಲೇಖವನ್ನು ಒಳಗೊಂಡಿತ್ತು.

ಐಶ್ವರ್ಯಾರ ಸಾರ್ವಜನಿಕ ನೋಟ ಹೀಗಿದೆ: ಬಹುದಿನಗಳಿಂದ ಸದ್ದು ಮಾಡುತ್ತಿರುವ ವದಂತಿಗಳ ಹೊರತಾಗಿಯೂ, ಐಶ್ವರ್ಯಾ ಮುಂಬೈಗೆ ಹಿಂದಿರುಗಿದಾಗ ಲವಲವಿಕೆಯಿಂದ ಕಾಣಿಸಿಕೊಂಡರು. ಪಾಪರಾಜಿಗಳೊಂದಿಗೆ ಸಖತ್​​ ಪಾಸಿಟಿವ್​​ ಆಗಿ ಮಾತನಾಡಿದರು. ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಟಿಯ ನಮ್ರತೆಯ ನೋಟ ಗಮನ ಸೆಳೆದಿದೆ. ಸಿಬ್ಬಂದಿಗೆ "ಗಾಡ್​ ಬ್ಲೆಸ್​​​" ಮತ್ತು ಪಾಪರಾಜಿಗಳಿಗೆ "ಥ್ಯಾಂಕ್​ ಯೂ" ಎಂದು ಹೇಳುವುದು ಸೇರಿದಂತೆ ಮಾಜಿ ವಿಶ್ವ ಸುಂದರಿಯ ಫ್ರೆಂಡ್ಲಿ ನಡೆನುಡಿ ಸಾರ್ವಜನಿಕರಿಂದ ಪ್ರಶಂಸೆ ಗಳಿಸಿದವು.

ಇದನ್ನೂ ಓದಿ: ಕೌಚರ್ ವೀಕ್ 2024: ಗ್ರ್ಯಾಂಡ್ ಫಿನಾಲೆಯಲ್ಲಿ ಗಮನ ಸೆಳೆದ ವಿಕ್ಕಿ ಕೌಶಲ್- ರಶ್ಮಿಕಾ ಮಂದಣ್ಣ ಜೋಡಿ - ICW 2024

ಅಭಿಮಾನಿಗಳ ವಿಶ್ವಾಸ: ಐಶ್ವರ್ಯಾ ಅವರ ಸಂತೋಷ, ಸಕಾರಾತ್ಮಕ ನಡವಳಿಕೆಯು ಅವರ ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ಎಲ್ಲವೂ ಸರಿಯಾಗಿದೆ ಎಂಬ ಭರವಸೆ ಮೂಡಿಸಿರುವಂತೆ ತೋರುತ್ತಿದೆ. ಅಮ್ಮ ಮಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ವಯನಾಡ್ ಭೂಕುಸಿತ ದುರಂತ ಕಂಡು ದುಃಖ ವ್ಯಕ್ತಪಡಿಸಿದ ನಟ ಸೂರ್ಯ, ರಶ್ಮಿಕಾ, ವಿಜಯ್​ - Film industry mourns disaster

ETV Bharat Logo

Copyright © 2024 Ushodaya Enterprises Pvt. Ltd., All Rights Reserved.