ETV Bharat / entertainment

ಸೃಜನ್ ಲೋಕೇಶ್ ಜೊತೆ 'ರಾಜ ರಾಣಿ' ರೀಲೋಡೆಡ್ ಅಂತಿದ್ದಾರೆ ಅದಿತಿ ಪ್ರಭುದೇವ - Aditi Prabhudeva - ADITI PRABHUDEVA

ರಾಜ ರಾಣಿಯ ಮೂರನೇ ಸೀಸನ್​​ನ ಮೂರನೇ ತೀರ್ಪುಗಾರರಾಗಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ.

Raaja raani show
'ರಾಜ ರಾಣಿ' ಹೊಸ ಸೀಸನ್​​ (ETV Bharat)
author img

By ETV Bharat Karnataka Team

Published : Jun 8, 2024, 2:46 PM IST

ಕಿರುತೆರೆಯ ಜನಪ್ರಿಯ ಶೋಗಳಲ್ಲೊಂದಾದ ರಾಜ ರಾಣಿಯ ಮೂರನೇ ಸೀಸನ್ ಶುರುವಾಗುತ್ತಿದೆ. ಕಳೆದ ಸೀಸನ್​ಗಳ ಯಶಸ್ಸು ತಂಡದ ಉತ್ಸಾಹ ಹೆಚ್ಚಿಸಿದ್ದು, 'ರಾಜ ರಾಣಿ'ಯ ಮೂರನೇ ಸೀಸನ್​​ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. 12 ಸೆಲೆಬ್ರಿಟಿ ದಂಪತಿಗಳು ಪಾಲ್ಗೊಳ‌್ಳಲಿರುವ 'ರಾಜ ರಾಣಿ ರೀಲೋಡೆಡ್' ಹೊಸ ಸೀಸನ್ ಜೋಡಿಗಳ ಡಾನ್ಸ್​​ ಮೇಲೆ ಹೆಚ್ಚು ಒತ್ತು ನೀಡಲಿದೆ. ಎಂದಿನಂತೆ ತಮಾಷೆ, ಹರಟೆ, ಆಟ, ಭಾವನೆಗಳೆಲ್ಲಾ ಇರುತ್ತದೆಯಾದರೂ ಈ ಬಾರಿ ಜೋಡಿಗಳ ನರ್ತನ ಸಾಮರ್ಥ್ಯ ಹಿಂದಿನ ಸೀಸನ್​ಗಳಿಗೆ ಹೋಲಿಸಿದರೆ ಹೆಚ್ಚು ಆದ್ಯತೆ ಪಡೆಯಲಿದೆ.

ಮೂರನೇ ತೀರ್ಪುಗಾರರಾಗಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿರುವುದು ಈ ಹೊಸ ಸೀಸನ್​​ನ ಮತ್ತೊಂದು ಅಚ್ಚರಿ. ಈಗಾಗಲೇ ತೀರ್ಪುಗಾರರಾಗಿರುವ ಸೃಜನ್ ಲೋಕೇಶ್ ಮತ್ತು ತಾರಾ ಅವರೊಂದಿಗೆ ಅದಿತಿ ಕೂಡಿಕೊಳ್ಳಲಿದ್ದಾರೆ. ನಿರೂಪಕಿಯಾಗಿ ಅನುಪಮಾ ಗೌಡ ಮರಳಿದ್ದಾರೆ.

Srujan Lokesh
ಸೃಜನ್ ಲೋಕೇಶ್ (ETV Bharat)

ಈಗಾಗಲೇ ಹನ್ನೆರಡು ಸೆಲೆಬ್ರೆಟಿ ಜೋಡಿಗಳನ್ನು ಶೋಗೆ ಆಯ್ಕೆ ಮಾಡಲಾಗಿದ್ದು, ಟಿವಿ ಮುಖಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳ ತನಕ ಬೇರೆ ಬೇರೆ ಹಿನ್ನೆಲೆಯಿಂದ ಬಂದ ಜೋಡಿಗಳನ್ನು ನೀವು ಈ ಶೋನಲ್ಲಿ ನೋಡಬಹುದು. ಡಾನ್ಸ್ ಮತ್ತು ಗೇಮ್​​ಗಳ ಮೂಲಕ ಈ ಜೋಡಿಗಳು ತಮ್ಮ ನಡುವಿನ ಸಾಮರಸ್ಯವನ್ನು ಪರೀಕ್ಷೆಗೊಳಪಡಿಸಲಿದ್ದಾರೆ.

'ರಾಜ ರಾಣಿ ರೀಲೋಡೆಡ್' ಶುರುವಾಗುತ್ತಿರುವ ಬಗ್ಗೆ ಮಾತನಾಡಿದ ವಯಾಕಾಮ್ 18 ಪ್ರಾದೇಶಿಕ ಮನರಂಜನೆಯ ಕ್ಲಸ್ಟರ್ ಹೆಡ್ ಸುಷ್ಮಾ ರಾಜೇಶ್, 'ರಾಜ ರಾಣಿ ರೀಲೋಡೆಡ್ ಹಲವು ಹೊಸ ಪ್ರಯೋಗಗಳ ಜೊತೆಗೆ ಪ್ರಾದೇಶಿಕತೆಯ ಸೊಗಡನ್ನು ಮೈಗೂಡಿಸಿಕೊಂಡು ರಸಭರಿತವಾಗಿ ಮೂಡಿಬರಲಿದೆ' ಎಂದು ಹೇಳಿದರು.

ಅದಿತಿ ಪ್ರಭುದೇವ
ಅದಿತಿ ಪ್ರಭುದೇವ (ETV Bharat)

ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಕೂಡ ಈ ಹೊಸ ಸೀಸನ್​​ ಬಗ್ಗೆ ಉತ್ಸಾಹದ ಮಾತುಗಳನ್ನಾಡಿ, ಡಾನ್ಸ್ ಕೇಂದ್ರಿತ ಹೊಸ ಫಾರ್ಮೆಟ್ ಮತ್ತು ಹೊಸ ತೀರ್ಪುಗಾರರಾಗಿ ಅದಿತಿ ಸೇರ್ಪಡೆಯಾಗಿರುವುದು ಈ ಬಾರಿ ರಾಜ ರಾಣಿಗೆ ಹೊಸ ಚೈತನ್ಯ ತಂದುಕೊಟ್ಟಿದೆ ಎಂದು ಹೇಳಿದರು.

ಇದನ್ನೂ ಓದಿ: 'ಉತ್ತರಕಾಂಡ'ದ ವೀರವ್ವ ಪಾತ್ರದಲ್ಲಿ ಜಾಕಿ ಬೆಡಗಿ ಭಾವನಾ‌ ಮೆನನ್; ಪೋಸ್ಟರ್ ರಿಲೀಸ್ - Bhavana Poster

ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್​​​ನಡಿಯಲ್ಲಿ ರಾಜ ರಾಣಿ ಶೋ ನಿರ್ಮಾಣಗೊಳ‌್ಳುತ್ತಿದೆ. ವೈಟ್ ಗೋಲ್ಡ್ ಅರ್ಪಿಸುವ ಈ ಶೋನ ಸಹ ಪ್ರಾಯೋಜಕರು ಅಮೃತ್ ನೋನಿ. ಜೊತೆಗೆ ಸ್ಪೆಷಲ್ ಪಾರ್ಟ್ನರ್ ಆಗಿ ಸ್ವಸ್ತಿಕ್ ತುಪ್ಪ, ಭೀಮಾ ಜ್ಯೂಯೆಲ್ಲರ್ಸ್, ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಸೋಪು, ಸಂಗೀತ ಮೊಬೈಲ್ಸ್ ಈ ಜನಪ್ರಿಯ ಕಾರ್ಯಕ್ರಮದ ಜೊತೆ ಕೈ ಜೋಡಿಸಿವೆ.

ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್​ಗೆ ಡಾಲಿ ನಟನೆಯ 'ಕೋಟಿ' ಚಿತ್ರದ ಮೊದಲ‌ ಟಿಕೆಟ್ - Kotee First Ticket

ರಾಜ ರಾಣಿ ರೀಲೋಡೆಡ್- ಸೀಸನ್ 3 ಇದೇ ಜೂನ್ 8ರಿಂದ ಆರಂಭಗೊಳ್ಳಲಿದ್ದು, ಸಂಚಿಕೆಗಳು ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರಗೊಳ್ಳಲಿವೆ. ಜೂನ್ 8ರ ರಾತ್ರಿ ಏಳೂವರೆಗೆ ಮೊದಲ ಸಂಚಿಕೆಯನ್ನು ಆರಂಭಿಸಲಿರುವ ರಾಜರಾಣಿ ರೀಲೋಡೆಡ್ ಅನ್ನು ನೀವು ಕಲರ್ಸ್ ಕನ್ನಡ ಚಾನಲ್ ಹಾಗೂ ಜಿಯೊ ಸಿನಿಮಾ ಆ್ಯಪ್ ನಲ್ಲೂ ವೀಕ್ಷಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.