ವಾರಾಣಸಿ: ದಕ್ಷಿಣ ಭಾರತದ ಬೆಡಗಿ, 'ಬಾಹುಬಲಿ' ಸಿನಿಮಾ ನಟಿ ತಮನ್ನಾ ಭಾಟಿಯಾ ಕಾಶಿ ವಿಶ್ವನಾಥನ ದರ್ಶನ ಪಡೆದರು. ಶನಿವಾರ ಧರ್ಮನಗರ ವಾರಣಾಸಿಗೆ ಆಗಮಿಸಿದ ಅವರು ವಿಶ್ವನಾಥನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ದೇಗುಲದ ಬಳಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು ಅದನ್ನು ತಮ್ಮ ಅಧಿಕೃತ ಇನ್ಸ್ಟ್ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಾರಾಣಸಿಯಲ್ಲಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣ ನಡೆಯುವ ಪ್ರದೇಶಕ್ಕೂ ಅವರು ಭೇಟಿ ನೀಡಿದರು. ಆದರೆ ಮುಂಬರುವ ಸಿನಿಮಾದ ಶೀರ್ಷಿಕೆ, ತಮ್ಮ ಪಾತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಮಾಡಿರುವ ಪೋಸ್ಟ್ಗಳಲ್ಲಿ ಒಂದು ವಿಶ್ವನಾಥನಿಗೆ ಪೂಜೆ ಸಲ್ಲಿಸುವುದು, ಮತ್ತೊಂದು ನದಿ ತಟದಲ್ಲಿ, ಇನ್ನೂ 2 ಫೋಟೋಗಳು ದೇವಾಲಯದ ಆವರಣದಲ್ಲಿರುವುದು, ಹಾಗೆಯೇ ದೇಗುಲದ ಗೋಡೆಗಳಲ್ಲಿನ ಚಿತ್ರಗಳನ್ನು ತೆಗೆದಿದ್ದಾರೆ. ಈ ಚಿತ್ರಗಳಿಗೆ 'ಹರ್ ಹರ್ ಮಹಾದೇವ್' ಎಂದು ಬರೆದಿದ್ದಾರೆ. ಒಟ್ಟಾರೆ ವಾರಾಣಸಿಯ ಸೌಂದರ್ಯವನ್ನು ತಮನ್ನಾ ಸವಿದಿದ್ದಾರೆ. ಈ ಸಂದರ್ಭದಲ್ಲಿ ತಮನ್ನಾ ತಿಳಿ ಹಸಿರು ಬಣ್ಣದ ಕುರ್ತಿ ಧರಿಸಿದ್ದರು.
ದಕ್ಷಿಣ ಚಿತ್ರರಂಗವಲ್ಲದೇ ಬಾಲಿವುಡ್ನಲ್ಲಿಯೂ ತಮ್ಮ ನಟನೆಯಿಂದ ಅನೇಕ ಅಭಿಮಾನಿಗಳನ್ನು ತಮನ್ನಾ ಗಳಿಸಿದ್ದಾರೆ. 2023ರಲ್ಲಿ ರಿಲೀಸ್ ಆಗಿ ಹಿಟ್ ಆಗಿರುವ ರಜಿನಿಕಾಂತ್ ಮುಖ್ಯಭೂಮಿಕೆಯ 'ಜೈಲರ್'ನಲ್ಲಿ ಕಾವಾಲಯ್ಯ ಸಾಂಗ್ಗೆ ತಮನ್ನಾ ನೃತ್ಯ ವ್ಯಾಪಕ ಜನಪ್ರಿಯತೆ ಗಳಿಸಿತ್ತು.
'ಲಸ್ಟ್ ಸ್ಟೋರೀಸ್ 2' ವೆಬ್ಸಿರೀಸ್ನಲ್ಲಿ ಲವ್ ಬರ್ಡ್ಸ್ ಎಂದೇ ಹೇಳಲಾಗುತ್ತಿರುವ ತಮನ್ನಾ ಮತ್ತು ವಿಜಯ್ ವರ್ಮಾ ಒಟ್ಟಿಗೆ ನಟಿಸಿದ್ದರು. ಕಾಜೋಲ್, ನೀನಾ ಗುಪ್ತಾ, ಮೃಣಾಲ್ ಠಾಕೂರ್, ಅಂಗದ್ ಬೇಡಿ, ಅಮೃತಾ ಶುಭಾಷ್, ತಿಲೋಟಮಾ ಶೋಮ್, ಕುಮುದ್ ಮಿಶ್ರಾ ಸೇರಿದಂತೆ ಹಲವರು ಈ ಸೀರಿಸ್ನಲ್ಲಿ ನಟಿಸಿದ್ದಾರೆ. ನಟಿಯ ಮುಂದಿನ ಚಿತ್ರಗಳಿಗೆ ಅಭಿಮಾನಿಗಳು ಕಾಯಬೇಕಿದೆ.
ಇದನ್ನೂ ಓದಿ: ಐವರು ಅಭಿಮಾನಿಗಳಿಂದ 'ಯುವ' ಚಿತ್ರದ 'ಒಬ್ಬನೇ ಶಿವ ಒಬ್ಬನೇ' ಹಾಡು ಬಿಡುಗಡೆ