ETV Bharat / entertainment

'ಫೈರ್'​ ಕಮಿಟಿಯಿಂದ ಕೇವಲ ನಟಿಯರಿಗಲ್ಲ, ನಟರಿಗೂ ಸಹಾಯ: ಸಂಗೀತಾ ಭಟ್ - FIRE Committee - FIRE COMMITTEE

ಮಲಯಾಳಂ ಚಿತ್ರರಂಗದಂತೆ ಕರ್ನಾಟಕದಲ್ಲಿ ಫೈರ್ ಕಮಿಟಿಯಿಂದ ಹೊಸ ನಟಿ ಹಾಗು ನಟರಿಗೆ ಸಹಾಯವಾಗಲಿದೆ ಎಂದು 'ಎರಡನೇ ಸಲ' ಸಿನಿಮಾ ಖ್ಯಾತಿಯ ನಟಿ ಸಂಗೀತಾ ಭಟ್ ತಿಳಿಸಿದ್ದಾರೆ.

ನಟಿ ಸಂಗೀತಾ ಭಟ್
ನಟಿ ಸಂಗೀತಾ ಭಟ್ (ETV Bharat)
author img

By ETV Bharat Entertainment Team

Published : Sep 6, 2024, 10:35 AM IST

ನಟಿ ಸಂಗೀತಾ ಭಟ್ (ETV Bharat)

ಹೇಮಾ ಕಮಿಟಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದೇ ಮಾದರಿಯ ಕಮಿಟಿಯನ್ನು ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ರಚಿಸಬೇಕೆಂದು ಆಗ್ರಹಿಸಿ ಫೈರ್​ ಫಿಲ್ಮ್​​ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ (FIRE) ಸದಸ್ಯರು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.

ಗುರುವಾರ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ತಾರೆಯರ ಬಳಗ ಮನವಿ ಪತ್ರ ಸಲ್ಲಿಸಿತು. ಫೈರ್​ ನಿಯೋಗದ ಸದಸ್ಯರಾದ ನಟ ಚೇತನ್​, ನಟಿ ಶೃತಿ ಹರಿಹರನ್​, ನೀತು ಶೆಟ್ಟಿ ಅವರಿದ್ದ ನಿಯೋಗ ಕೇರಳದ ನ್ಯಾ.ಹೇಮಾ ಕಮಿಟಿ ಮಾದರಿಯಲ್ಲಿ ಕರ್ನಾಟದಲ್ಲೂ ಕಮಿಟಿ ರಚಿಸಬೇಕು. ಈ ಮೂಲಕ ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆಗಳನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಈ ಕುರಿತು 'ಎರಡನೇ ಸಲ' ಸಿನಿಮಾ ಮೂಲಕ ಗಮನ ಸೆಳೆದ ನಟಿ ಸಂಗೀತಾ ಭಟ್ ಕೂಡಾ ಧ್ವನಿ ಎತ್ತಿದ್ದಾರೆ. ಈ ಹಿಂದೆ 'ಮೀ ಟೂ' ಪ್ರಕರಣದಲ್ಲಿ ಸಂಗೀತ ಭಟ್ ಆರೋಪ ಮಾಡಿದ್ದರು. "ಮಲಯಾಳಂ ಚಿತ್ರರಂಗದಂತೆ ಕರ್ನಾಟಕದಲ್ಲಿ ಫೈರ್ ಕಮಿಟಿಯಿಂದ ಮುಂದಿನ ದಿನಗಳಲ್ಲಿ ಬರುವ ಹೊಸ ನಟಿ ಹಾಗು ನಟರಿಗೆ ಸಹಾಯವಾಗಲಿದೆ. ಕೇವಲ ಲೈಂಗಿಕ ದೌರ್ಜನ್ಯ ಮಾತ್ರವಲ್ಲದೆ ಚಿತ್ರರಂಗದಲ್ಲಿ ಕೆಲವು ನಟಿಯರಿಗೆ ಸಂಭಾವನೆ ವಿಚಾರದಲ್ಲಿ ಅನ್ಯಾಯವಾದಾಗ ಈ ಕಮಿಟಿಯಿಂದ ಉಪಯೋಗವಾಗುತ್ತದೆ" ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ 'ಹೆಬ್ಬುಲಿ' ಹಾಗು 'ರಾಬರ್ಟ್' ಚಿತ್ರಗಳ ನಿರ್ಮಾಪಕ ಉಮಾಪತಿ ಗೌಡ ಕೈ ಜೋಡಿಸಿದ್ದಾರೆ. ಈಗಾಗಲೇ ಯಾರಿಗೆ ತೊಂದರೆಯಾಗಿದೆಯೋ ಅವರಿಗೆ ಈ ಕಮಿಟಿಯಿಂದ ಉಪಯೋಗವಾಗಲಿದೆ. ನಟ, ನಟಿಯರ ವೈಯಕ್ತಿಕ ಜೀವನ ಅವರಿಗೆ ಬಿಟ್ಟದ್ದು. ಆದರೆ ಎಲ್ಲರೂ ಕೂಡ ಸುರಕ್ಷತೆಯಲ್ಲಿರಬೇಕು" ಎಂದು ಹೇಳಿದ್ದಾರೆ.

ಫೈರ್ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ ಅರ್ಜಿಗೆ ಸಂಘಟನೆಯ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾ, ರಮ್ಯಾ, ಐಂದ್ರಿತಾ ರೇ, ಸುದೀಪ್, ನಟ ಕಿಶೋರ್, ವಿನಯ್ ರಾಜ್ ಕುಮಾರ್, ದಿಗಂತ್ ಮಂಚಾಲೆ, ನಿರ್ದೇಶಕ ಸಿಂಪಲ್ ಸುನಿ, ಹಿರಿಯ ನಟ ಶರತ್ ಲೋಹಿತಾಶ್ವ, ಗೀತರಚನೆಕಾರ ಕವಿರಾಜ್, ಮೇಘಾನ ಗಾಂವ್ಕರ್, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಚೈತ್ರಾ ಜೆ.ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧಾ ಶ್ರೀನಾಥ್, ನಿಶ್ವಿಕಾ ನಾಯ್ಡು ಸೇರಿದಂತೆ 153 ಮಂದಿ ಸಹಿ ಹಾಕಿರುವ ಮನವಿ ಪತ್ರವನ್ನು ಸಿಎಂಗೆ ನೀಡಲಾಗಿದೆ.

ಇದನ್ನೂ ಓದಿ: ದರ್ಶನ್​ ಭೇಟಿಯಾದ ವಿಜಯಲಕ್ಷ್ಮಿ: ಜೈಲು ಮುಂದೆ ಮಹಿಳಾ ಅಭಿಮಾನಿಯ ಹೈಡ್ರಾಮಾ - Vijayalakshmi met Darshan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.