ಬಹುಭಾಷಾ ನಟಿ ಇಲಿಯಾನಾ ಡಿ'ಕ್ರೂಜ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಮೌನ ವಹಿಸುತ್ತಾ ಬಂದಿದ್ದಾರೆ. ಸಂಗಾತಿ ಮೈಕೆಲ್ ಡೋಲನ್ ಬಗ್ಗೆ ದೀರ್ಘಕಾಲದವರೆಗೆ ಯಾವುದೇ ವಿಚಾರ ಹಂಚಿಕೊಂಡಿರಲಿಲ್ಲ. ಮೈಕೆಲ್ ಡೋಲನ್ ಅವರು ನಟಿಯ ಬಾಯ್ಫ್ರೆಂಡ್, ಇತ್ತೀಚೆಗೆ ಮದುವೆ ಆಗಿದ್ದಾರೆ ಎನ್ನುವ ಊಹಾಪೋಹಗಳಿತ್ತು. ಅದಾಗ್ಯೂ ನಟಿ ಇತ್ತೀಚೆಗೆ ಮೈಕೆಲ್ ಅವರೊಂದಿಗಿನ ತಮ್ಮ ವಿವಾಹವನ್ನು ಖಚಿತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಬಹುಭಾಷಾ ಅಭಿನೇತ್ರಿ, ಪತಿ ಬಗ್ಗೆ ತಮ್ಮ ಅಪಾರ ಮೆಚ್ಚುಗೆ, ಕೃತಘ್ಞತೆಗಳನ್ನ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಪರಿಚಿತರಾದಾಗಿನಿಂದಲೂ ಡೋಲನ್ ಅಪಾರ ಬೆಂಬಲ ನೀಡುತ್ತಾ ಬಂದಿದ್ದಾರೆಂದು ನಟಿ ತಿಳಿಸಿದರು. ತಮ್ಮ ಪ್ರಯಾಣವನ್ನು ವಿವರಿಸುತ್ತಾ, "ವೈವಾಹಿಕ ಜೀವನ ಸುಂದರವಾಗಿ ಸಾಗುತ್ತಿದೆ. ನಾನು ಅವರ ಯಾವ ಗುಣವನ್ನು ಹೆಚ್ಚು ಇಷ್ಟಪಡುತ್ತೇನೆಂಬುದನ್ನು ಹೇಳುವುದು ನಿಜವಾಗಿಯೂ ಕಷ್ಟ. ನಾನು ಯೋಚಿಸಬೇಕು. ಏಕೆಂದರೆ ನಾನು ಪ್ರತೀ ಬಾರಿ ಉತ್ತರ ಕೊಟ್ಟಾಗ ಏನಾದರೂ ಬಾಕಿ ಉಳಿದಿರುತ್ತದೆ ಎಂದು ನನಗನಿಸುತ್ತದೆ'' ಎಂದು ತಿಳಿಸಿದರು.
"ಅವರು ನನ್ನ ಕೆಟ್ಟ ಸಮಯಗಳಲ್ಲಿ, ಅದರಲ್ಲೂ ನನ್ನ ತೀರಾ ಕೆಟ್ಟ ಸಮಯಗಳಲ್ಲಿ ನನ್ನೊಂದಿಗಿದ್ದರು. ಸಂಪೂರ್ಣ ಬೆಂಬಲ ನೀಡಿದ್ದರು. ನನ್ನ ಕೆಲ ಉತ್ತಮ ಸಮಯಗಳಲ್ಲಿಯೂ ಜೊತೆಗಿದ್ದರು. ಅದು ನಿರಂತರ... ಮೊದಲ ದಿನದಿಂದಲೂ. ಅವರು ಪ್ರೀತಿಯ ಬೆಂಬಲ, ನಿರಂತರ, ಸ್ಥಿರ. ಇದು ದೋ ಔರ್ ದೋ ಪ್ಯಾರ್‌ನ ಡೈಲಾಗ್ನಂತಿದೆ'' ಎಂದು ವರ್ಣಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಸೂಪರ್ ಸ್ಟಾರ್ಸ್ ಸಿನಿಮಾಗಳಿಗೆ ಬಿಡುಗಡೆ ಭಾಗ್ಯ ಯಾವಾಗ? - Sandalwood Star movies
ಇದಕ್ಕೂ ಮೊದಲು ಇಲಿಯಾನಾ, ಡೋಲನ್ ಜೊತೆಗಿನ ಫೋಟೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿ, ತಮ್ಮ ಬಾಳಿನಲ್ಲಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದರು. 'ನಾನು ನನಗೇನೆ ದಯೆ ತೋರುವುದನ್ನು ಮರೆತುಹೋದ ದಿನಗಳಲ್ಲಿ, ಈ ಸುಂದರ ವ್ಯಕ್ತಿ ನನ್ನೊಂದಿಗಿದ್ದರು. ನಾನು ಬ್ರೇಕ್ ಆಗುತ್ತಿದ್ದೇನೆಂದು ಅವರಿಗನಿಸಿದಾಗ ನನ್ನೊಂದಿಗಿದ್ದರು. ಕಣ್ಣೀರು ಒರೆಸಿದರು. ನನ್ನನ್ನು ನಗಿಸಲು ಹಾಸ್ಯ ಮಾಡಿದರು. ಆ ಕ್ಷಣಗಳಲ್ಲಿ ನನಗೆ ಬೇಕಾಗಿರುವುದು ಪ್ರೀತಿಯ ಅಪ್ಪುಗೆ ಎಂದು ತಿಳಿದಾಗ ನನ್ನನ್ನು ಅಪ್ಪಿಕೊಂಡರು" ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ ನಟ ಗುರುಚರಣ್ ಸಿಂಗ್ ನಾಪತ್ತೆ: ದೂರು ದಾಖಲಿಸಿದ ತಂದೆ - Gurucharan Singh Missing
ಜೋಡಿಯ ಪ್ರಯಾಣ 2023ರಲ್ಲಿ ಪ್ರಾರಂಭವಾಯಿತು. ಆಗಸ್ಟ್‌ನಲ್ಲಿ ಮಗ ಕೋವಾ ಫೀನಿಕ್ಸ್ ಡೋಲನ್ ಜನಿಸಿದ. ಇಲಿಯಾನಾ ವೈಯಕ್ತಿಕ ಜೀವನದ ಜೊತೆಗೆ, ವೃತ್ತಿಜೀವನವನ್ನೂ ಸಂಬಾಳಿಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ದೋ ಔರ್ ದೋ ಪ್ಯಾರ್ ಚಿತ್ರದಲ್ಲಿ ವಿದ್ಯಾ ಬಾಲನ್ ಮತ್ತು ಪ್ರತೀಕ್ ಗಾಂಧಿ ಜೊತೆ ಕಾಣಿಸಿಕೊಂಡಿದ್ದಾರೆ.