ಸಿನಿಮಾ ಮಾತ್ರವಲ್ಲದೇ ಪರೋಪಕಾರಿ ಚಟುವಟಿಕೆಗಳಿಂದ ಹೆಸರುವಾಸಿ ಆಗಿರುವ ಬಹುಭಾಷಾ ನಟ ಸೋನು ಸೂದ್ ಇತ್ತೀಚೆಗೆ ತಮ್ಮ ಸೂದ್ ಚಾರಿಟಿ ಫೌಂಡೇಶನ್ ಮೂಲಕ ಆಂಧ್ರಪ್ರದೇಶಕ್ಕೆ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ಡೊನೇಟ್ ಮಾಡಿದ್ದಾರೆ. ಈ ಮೂಲಕ ಸಮಾಜ ಸೇವೆ ವಿಚಾರದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ನಟನ ಈ ನಡೆಗೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಧನ್ಯವಾದ ಅರ್ಪಿಸಿದ್ದಾರೆ.
ಸಮಾಜ ಸೇವೆ ಮುಂದುವರಿಸಲು ಬಯಸುತ್ತೇನೆ : ಸೋಮವಾರ ಸಚಿವಾಲಯದಲ್ಲಿ ನಡೆದ ದೇಣಿಗೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನು ಸೂದ್, ಜನರಿಗೆ ಸಹಾಯ ಮಾಡುವ ಮನೋಭಾವ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಶುರುವಾಯಿತು. ಅದನ್ನು ಮುಂದುವರಿಸಲು ಬಯಸುತ್ತೇನೆ ಎಂದರು. ಜೊತೆಗೆ, ತೆಲುಗು ಜನರ ಬಗ್ಗೆ ತಮ್ಮ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದರು. ತೆಲುಗು ಮಂದಿ ತಮ್ಮ ಪ್ರಯಾಣದ ಅವಿಭಾಜ್ಯ ಅಂಗವೆಂದು ಒತ್ತಿ ಹೇಳಿದರು.
Thank you so much @ncbn sir, for your kind words. It was a pleasure meeting you too. I am glad our initiative resonates with you. I truly appreciate your support as we continue our efforts in uplifting communities through our organisation. @XiaomiIndia https://t.co/aJ139dzyDQ
— sonu sood (@SonuSood) February 4, 2025
ನಾಯ್ಡು 'ದೂರದೃಷ್ಟಿಯ ನಾಯಕ' : ನಟ ಸೋನು ಸೂದ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು 'ದೂರದೃಷ್ಟಿಯ ನಾಯಕ' ಎಂದು ಬಣ್ಣಿಸಿದರು. 'ಅವರು ಯಾವಾಗಲೂ ಸಾಮಾನ್ಯ ಜನರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅನೇಕರಿಗೆ ಸ್ಫೂರ್ತಿ. ಸಾರ್ವಜನಿಕ ಕಲ್ಯಾಣಕ್ಕಾಗಿ ಮುಂಚೂಣಿಯಲ್ಲಿರುತ್ತಾರೆ. ಆಂಧ್ರಪ್ರದೇಶದ ಅಭಿವೃದ್ಧಿಗೆ ನನ್ನಿಂದ ಸಾಧ್ಯವಾದಷ್ಟು ಕೊಡುಗೆ ನೀಡಲು ನಾನು ಬಯಸುತ್ತೇನೆ. ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಈ ಆಂಬ್ಯುಲೆನ್ಸ್‌ಗಳು, ಆರೋಗ್ಯ ಸೌಲಭ್ಯಗಳು ಕಡಿಮೆ ಇರುವ ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಗಳ ದೂರದ ಪ್ರದೇಶಗಳಲ್ಲಿ ಸೇವೆಗಳನ್ನು ಒದಗಿಸುತ್ತವೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯದ ಕುರಿತು ಸುಳ್ಳು ಮಾಹಿತಿ: ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಪುತ್ರಿ, ಗೂಗಲ್‌ಗೆ ನೋಟಿಸ್
ನಾನು ಕೃತಜ್ಞ : 'ನಾನೋರ್ವ ಕಾಮನ್ ಮ್ಯಾನ್. ಆಂಧ್ರಪ್ರದೇಶ ನನ್ನ ಎರಡನೇ ಮನೆ. ನನ್ನ ಪತ್ನಿ ಇಲ್ಲಿಯವರೇ. ತೆಲುಗು ಜನರು ನನಗೆ ತುಂಬಾನೇ ಪ್ರೀತಿ ನೀಡಿದ್ದಾರೆ. ಈ ಹಿನ್ನೆಲೆ, ಅವರಿಗೆ ಕೃತಜ್ಞನಾಗಿದ್ದೇನೆ' ಎಂದ ನಟ, ಶೀಘ್ರದಲ್ಲೇ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡುವುದಾಗಿಯೂ ತಿಳಿಸಿದರು.
ಇದನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನ 2025: ಶಿವಣ್ಣ To ಸಂಜಯ್ ದತ್ - ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೋನು ಸೂದ್ ಅವರ ಸಮಾಜ ಸೇವೆಯನ್ನು ಶ್ಲಾಘಿಸಿದರು. ಸೋನು ಸೂದ್ ಅವರ ಈ ದಾನಧರ್ಮದ ಕಾರ್ಯ ದೂರದ ಪ್ರದೇಶಗಳಲ್ಲಿನ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಕಾಲಿಕ ಸೇವೆ ಒದಗಿಸುತ್ತದೆ. ಇತರರಿಗಾಗಿ ಕೆಲಸ ಮಾಡುವ ಅವರ ಉತ್ಸಾಹವನ್ನು ನಾನು ಮೆಚ್ಚುತ್ತೇನೆ. ಈ ಉಪಕ್ರಮವು ತುರ್ತು ವೈದ್ಯಕೀಯ ಸೇವೆಗಳು ಸಾರ್ವಜನಿಕರನ್ನು ಶೀಘ್ರವೇ ತಲುಪಲಿವೆ ಎಂದು ತಿಳಿಸಿದರು.