ETV Bharat / entertainment

'ಫಸ್ಟ್ ಬಾಲ್​ನಲ್ಲಿ ಸಿಕ್ಸರ್ ಹೊಡೆದವರು ನಾವು': ಅ.16ಕ್ಕೆ 'ಮಾಫಿಯಾ' ನಿಮ್ಮ ಮುಂದೆ - MAFIA RELEASE DATE ANNOUNCED

ನಟ ಪ್ರಜ್ವಲ್ ದೇವರಾಜ್ ಅಭಿನಯದ, ಲೋಹಿತ್ ನಿರ್ದೇಶನದ 'ಮಾಫಿಯಾ' ಸಿನಿಮಾ ಅಕ್ಟೋಬರ್​ 16ರಂದು ತೆರೆ ಕಾಣಲಿದೆ.

ಅ.16ಕ್ಕೆ ಮಾಫಿಯಾ ರಿಲೀಸ್​
ಅ.16ಕ್ಕೆ ಮಾಫಿಯಾ ರಿಲೀಸ್​ (Bangalore Kumar films)
author img

By ETV Bharat Karnataka Team

Published : Oct 13, 2024, 2:18 PM IST

ಪ್ರಜ್ವಲ್ ದೇವರಾಜ್ ನಟನೆಯ​ 'ಮಾಫಿಯಾ' ಸಿನಿಮಾ ಅಕ್ಟೋಬರ್ 16ರಂದು ಬಿಡುಗಡೆಯಾಗಲಿದೆ. ವಿಜಯದಶಮಿಯಂದು (ನಿನ್ನೆ) ಚಿತ್ರತಂಡ ಬಿಡುಗಡೆ ದಿನವನ್ನು ಘೋಷಿಸಿತು.

ಟೀಸರ್​ನಿಂದ ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ 'ಮಾಫಿಯಾ'ದಲ್ಲಿ ಪ್ರಜ್ವಲ್​ ದೇವರಾಜ್ ತಮ್ಮ ಪಾತ್ರಕ್ಕೆ ಡಬ್ಬಿಂಗ್​ ಮಾಡುವ ಮೂಲಕ ಚಿತ್ರದ ರಿಲೀಸ್ ಡೇಟ್​ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ.

ಅ.16ಕ್ಕೆ ಮಾಫಿಯಾ ರಿಲೀಸ್​ (Bangalore Kumar films)

ಮಮ್ಮಿ ಚಿತ್ರದ ನಿರ್ದೇಶಕ ಲೋಹಿತ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ನಾಯಕಿ ನಟಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ನಟ ಶೈನ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ.

ಪಾಂಡಿಕುಮಾರ್​ ಛಾಯಾಗ್ರಹಣ, ಅನೂಪ್ ಸೀಳಿನ್​ ಸಂಗೀತವಿದ್ದು, ಜಾಲಿ ಬಾಸ್ಟಿನ್‌ ಸಾಹಸ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್.ಬಿ. ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 35ನೇ ಸಿನಿಮಾ ಇದಾಗಿದೆ.

ಇದನ್ನೂ ಓದಿ: ದರ್ಶನ್​​ ಭೇಟಿಗಾಗಿ ಟೆಡ್ಡಿಬೇರ್​ ಧರಿಸಿ ಬಳ್ಳಾರಿ ಜೈಲಿಗೆ ಬಂದ ಶಿವಮೊಗ್ಗದ ಅಭಿಮಾನಿ

ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಆ್ಯಕ್ಷನ್ ಪ್ರಿನ್ಸ್ ಕಮಾಲ್​: 'ಮಾರ್ಟಿನ್' ಗಳಿಸಿದ್ದೆಷ್ಟು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.