ETV Bharat / entertainment

ಕಿರಣ್ ​ರಾಜ್ ಅಭಿನಯದ​ 'ಭರ್ಜರಿ ಗಂಡು' ಟ್ರೇಲರ್ ಔಟ್​​ - Bharjari Gandu

ನಟ ಕಿರಣ್ ​ರಾಜ್ ಅಭಿನಯದ 'ಭರ್ಜರಿ ಗಂಡು' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

bharjari-gandu
'ಭರ್ಜರಿ ಗಂಡು' ಚಿತ್ರ ತಂಡ
author img

By ETV Bharat Karnataka Team

Published : Mar 18, 2024, 11:18 AM IST

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ 'ಕನ್ನಡತಿ' ಧಾರಾವಾಹಿ​ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ​ರಾಜ್​ ಹೊಸ ಗ್ರಾಮೀಣ ಸೊಗಡಿನ ಚಿತ್ರಕಥೆಯೊಂದಿಗೆ ಬರುತ್ತಿದ್ದಾರೆ. ಈ ಚಿತ್ರಕ್ಕೆ 'ಭರ್ಜರಿ ಗಂಡು' ಎಂದು ಟೈಟಲ್​​​ ಇಡಲಾಗಿದೆ. ಪ್ರಸಿದ್ಧ್​ ನಿರ್ದೇಶನದ ಈ ಚಿತ್ರದ ಟ್ರೇಲರ್​ ಆನಂದ್​​ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಚಿತ್ರದ ಕುರಿತು ನಿರ್ದೇಶಕ ಪ್ರಸಿದ್ಧ್ ಮಾತನಾಡಿ, "ರತ್ನ ಮಂಜರಿ ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ಸ್ನೇಹಿತ ಛಾಯಾಗ್ರಾಹಕ ಕಿಟ್ಟಿ ಕೌಶಿಕ್​​ ಅವರು ನಾಯಕ ಕಿರಣ್​ರಾಜ್ ಸೇರಿದಂತೆ ಸಾಕಷ್ಟು ಜನ ಕಲಾವಿದರನ್ನು ಈ ಚಿತ್ರಕ್ಕಾಗಿ ನನಗೆ ಪರಿಚಯಿಸಿದರು. ಚಾಕೊಲೇಟ್ ಬಾಯ್ ಎಂದೇ ಖ್ಯಾತರಾಗಿರುವ ಕಿರಣ್​ ರಾಜ್, ಈ ಚಿತ್ರದ ಮೂಲಕ ಆಕ್ಷನ್​ ಹೀರೋ ಆಗುವುದಂತೂ ಖಚಿತ. ಅಷ್ಟು ಅದ್ಭುತವಾಗಿ ಸಾಹಸ ಮಾಡಿದ್ದಾರೆ. ಭರ್ಜರಿ ಗಂಡು ಗ್ರಾಮೀಣ ಸೊಗಡಿನ ಕಥೆ. ಬರೀ ಪ್ರೀತಿಗಷ್ಟೇ ಸೀಮಿತವಾಗದ ನಾಯಕ ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುದೇ ಕಥಾಹಂದರ" ಎಂದರು.

  • " class="align-text-top noRightClick twitterSection" data="">

ಬಳಿಕ, ಕಿರಣ್​ ರಾಜ್ ಮಾತನಾಡುತ್ತಾ, "ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಪ್ರಸಿದ್ದ್ ಅವರು ಬರೆದಿರುವ ಕಥೆ ಚೆನ್ನಾಗಿದೆ. ನಾನು ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದೇನೆ" ಎಂದು ತಿಳಿಸಿದರು.

ಯಶ ಶಿವಕುಮಾರ್​ ನಾಯಕಿಯಾಗಿ​ ಅಭಿನಯಿಸಿದ್ದಾರೆ. ಇವರೊಂದಿಗೆ ಕಲಾವಿದರಾದ ರಾಕೇಶ್​ ರಾಜ್​, ರೋಹಿತ್​ ನಾಗೇಶ್, ಸೌರಭ್ ಕುಲಕರ್ಣಿ ತಾರಾಗಣದಲ್ಲಿದ್ದಾರೆ.

ಕಿಟ್ಟಿ ಕೌಶಿಕ್​ ಛಾಯಾಗ್ರಾಹಣವಿದ್ದು, ಗುಮ್ಮೆನೇನಿ ವಿಜಯ್​ ಸಂಗೀತ ನಿರ್ದೇಶನವಿದೆ. ಪ್ರಸಿದ್ದ್ ಫಿಲಂಸ್, ಅನಿಲ್ ಕುಮಾರ್ ಹಾಗೂ ಮದನ್ ಗೌಡ ನಿರ್ಮಿಸಿದ್ದಾರೆ‌. ರಮೇಶ್ ಗೌಡ ಮತ್ತು ಸುದರ್ಶನ್ ಸುಂದರರಾಜ್ ಈ ಚಿತ್ರದ ಸಹ ನಿರ್ಮಾಪಕರು. 'ಭರ್ಜರಿ ಗಂಡು' ಏಪ್ರಿಲ್ 5ಕ್ಕೆ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಶೀಘ್ರದಲ್ಲೇ 'ಪುಷ್ಪ 2' ಸಾಂಗ್​ ರಿಲೀಸ್​: ಅಲ್ಲು ಅರ್ಜುನ್​, ರಶ್ಮಿಕಾ ಅಭಿಮಾನಿಗಳಲ್ಲಿ ಕುತೂಹಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.