ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರು ಇತ್ತೀಚೆಗೆ ಗಾಯಗೊಂಡಿದ್ದಾರೆ. ಆ ಸಂದರ್ಭದ ಫೋಟೋವನ್ನೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸ್ನಾಯು ನೋವು ಅನುಭವಿಸಿದ್ದ ನಟ ಊರುಗೋಲಿನ ಸಹಾಯದಿಂದ ನಿಂತಿದ್ದು, ಆ ಫೋಟೋವನ್ನು ನಿನ್ನೆ, ಬುಧವಾರ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಶಕ್ತಿಯ ಸಾರ ಮತ್ತು ಶಕ್ತಿಯುತವಾಗಿ ಕಾಣಿಸಿಕೊಳ್ಳಲು ಪುರುಷರ ಮೇಲಿರುವ ಸಾಮಾಜಿಕ ಒತ್ತಡದ ಬಗ್ಗೆ ದೀರ್ಘ ಬರಹದೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಶೇರ್ ಮಾಡಿರುವ ಫೋಟೋದಲ್ಲಿ, ಹೃತಿಕ್ ರೋಷನ್ ಊರುಗೋಲನ್ನು ಹಿಡಿದು ನಿಂತಿದ್ದಾರೆ. ಕ್ಯಾಪ್ಷನ್ನಲ್ಲಿ ಊರುಗೋಲು ಅಥವಾ ಗಾಲಿಕುರ್ಚಿಗಳನ್ನು ಅವಲಂಬಿಸಿರುವವರ ಅನುಭವಗಳ ಬಗ್ಗೆ ಮಾತು ಆರಂಭಿಸಿದ್ದಾರೆ. ತಮ್ಮ ಅಜ್ಜನ ಅನುಭವವೊಂದನ್ನು ವಿವರಿಸಿದ್ದಾರೆ. ನಮ್ಮ ತಾತಾ ಸಹ ಗಾಯಗೊಂಡಿದ್ದರು. ಅಂದು ಅವರಿಗೆ ಸಹಾಯದ ಅಗತ್ಯವಿದ್ದರೂ ಕೂಡ ಎಲ್ಲರೆದರು ಗಾಲಿಕುರ್ಚಿಯನ್ನು ಬಳಸಲು ನಿರಾಕರಿಸಿದ್ದರು. ತಾನು ಶಕ್ತಿಯುತವಾಗಿದ್ದೇನೆ ಎಂದು ತೋರಿಸಲು ಪ್ರಯತ್ನಿಸಿದ್ದರು. ತಮ್ಮ ಭಯ ಮತ್ತು ದುರ್ಬಲತೆಯನ್ನು ಮರೆಮಾಚಲು ಅಂದು ಅಜ್ಜ ನಡೆಸಿದ್ದ ಹೋರಾಟವನ್ನು ನೋಡಿದ್ದ ಹೃತಿಕ್, ಅದನ್ನೇ ಅನುಸರಿಸಲು ಮುಂದಾಗಿದ್ದಾರೆ. ದೈಹಿಕ ಶಕ್ತಿಯ ಇತಿಮಿತಿಗಳ ನಡುವೆಯೂ ಪುರುಷರು ಗಟ್ಟಿತನ ಪ್ರದರ್ಶಿಸಬೇಕು ಎಂಬುದು ಸಮಾಜದ ನಿರೀಕ್ಷೆ ಎಂದು ನಟ ಒತ್ತಿ ಹೇಳಿದ್ದಾರೆ. ನಿಮ್ಮ ಮತ್ತು ನಿಮ್ಮ 'ಇಮೇಜ್' ನಡುವಿನ ಹೋರಾಟವಿದು ಎಂದೂ ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಸಹನಟರ ಬ್ರೊಮ್ಯಾನ್ಸ್: ಸ್ಟಂಟ್ ಫೋಟೋ ಹಂಚಿಕೊಂಡ ಅಕ್ಷಯ್ ಕುಮಾರ್-ಟೈಗರ್ ಶ್ರಾಫ್
ಹೃತಿಕ್ ರೋಷನ್ ಇತ್ತೀಚೆಗೆ ಫೈಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ದೇಶಪ್ರೇಮ, ಶೌರ್ಯ ಮತ್ತು ದೃಢತೆಯ ಸುತ್ತ ಸುತ್ತುತ್ತದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಈ ಬಹುಬೇಡಿಕೆ ತಾರೆಯರು ತೆರೆ ಹಂಚಿಕೊಂಡಿದ್ದು, ಬಾಕ್ಸ್ ಆಫೀಸ್ನಲ್ಲಿಯೂ ಸಖತ್ ಸದ್ದು ಮಾಡಿದೆ. ಹೃತಿಕ್, ದೀಪಿಕಾ ಅಲ್ಲದೇ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಅವರಂತಹ ನಟರೂ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಯಶ್ ರಾಧಿಕಾ ವ್ಯಾಲಂಟೈನ್ ಡೇ: ಅಭಿಮಾನಿಗಳ ಮನಮುಟ್ಟಿದ ಫ್ಯಾಮಿಲಿ ಫೋಟೋಗಳಿವು
ಫೈಟರ್ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡಿದೆ. ಹಾಗಾಗಿ ಈ ತಾರೆಯರ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ದೀಪಿಕಾ ಪಡುಕೋಣೆ ಕೈಯಲ್ಲಿ ಮೂರ್ನಾಲ್ಕು ಬಹುನಿರೀಕ್ಷಿತ ಪ್ರಾಜೆಕ್ಟ್ಗಳಿವೆ. ಆ ಪೈಕಿ, ಕಲ್ಕಿ ಸಿನಿಮಾ 2024ರ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು, ಸಿನಿಪ್ರಿಯರು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.