ETV Bharat / entertainment

'ಆರಾಮ್​ ಅರವಿಂದ್ ಸ್ವಾಮಿ' ಟ್ರೇಲರ್​ ರಿಲೀಸ್​​: ಕೇವಲ 99 ರೂ.ಗೆ ಸಿನಿಮಾ ನೋಡಿ - AARAM ARVINDASWAMY

ಅನೀಶ್ ತೇಜೇಶ್ವರ್ ಹಾಗೂ ಮಿಲನಾ ನಾಗರಾಜ್ ಅಭಿನಯದ 'ಆರಾಮ್​ ಅರವಿಂದ್ ಸ್ವಾಮಿ' ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ.

Aaram Arvindaswamy Poster
'ಆರಾಮ್​ ಅರವಿಂದ್ ಸ್ವಾಮಿ' ಪೋಸ್ಟರ್ (Photo: Film Poster)
author img

By ETV Bharat Entertainment Team

Published : Nov 12, 2024, 6:19 PM IST

ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'ಆರಾಮ್​ ಅರವಿಂದ್ ಸ್ವಾಮಿ'. ‌ಅನೀಶ್ ತೇಜೇಶ್ವರ್ ಹಾಗೂ ಮಿಲನಾ ನಾಗರಾಜ್ ಅಭಿನಯದ ಈ ಚಿತ್ರದ ಅಧಿಕೃತ ಟ್ರೇಲರ್ ಅನಾವರಣಗೊಂಡಿದೆ.

ಕಾಮಿಡಿ ಜೊತೆಗೆ ಎಮೋಷನ್, ಆ್ಯಕ್ಷನ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ರಿಲೀಸ್​ ಮಾಡಲಾಗಿದೆ. 2 ನಿಮಿಷ 14 ಸೆಕೆಂಡ್ ಇರುವ ಆರಾಮ್ ಅರವಿಂದ್ ಸ್ವಾಮಿ ಟ್ರೇಲರ್ ಸಖತ್​ ಎಂಟರ್​​ಟೈನ್ಮೆಂಟ್​ ಆಗಿ ಮೂಡಿಬಂದಿದೆ. ನೋಡಲು ಫುಲ್ ಆರಾಮ್ ಆಗಿ ಕಾಣುವ ಅರವಿಂದ್ ಸ್ವಾಮಿ ಬದುಕಲ್ಲಿ ಕೇವಲ ಚಿಂತೆಗಳೇ ತುಂಬಿವೆ. ಪ್ರೀತಿ, ಮದುವೆ, ಹಣ, ಫ್ಯಾಮಿಲಿ ಸುತ್ತ ಕಥೆ ಸಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆರಾಮ್ ಅರವಿಂದ್ ಸ್ವಾಮಿ ಪಕ್ಕಾ ಫ್ಯಾಮಿಲಿ ಎಂಟರ್​ಟೈನರ್ ಚಿತ್ರ.

ಆರಾಮ್ ಅರವಿಂದ್ ಸ್ವಾಮಿ ಇದೇ ತಿಂಗಳ 22 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಟಿಕೆಟ್ ಅನ್ನು ಕೇವಲ 99 ರೂಪಾಯಿ ಮಾಡುವ ಮೂಲಕ ಸಿನಿ ಪ್ರೇಕ್ಷಕರಿಗೆ ಭರ್ಜರಿ ಆಫರ್ ನೀಡಿದೆ. ಆದರೆ ಈ ಒಂದು ಆಫರ್ ಸಿನಿಮಾ ಥಿಯೇಟರ್‌ನಲ್ಲಿರೋವರೆಗೂ ಇರೋದಿಲ್ಲ ಬಿಡಿ. ಆದ್ರೆ ಮೂರು ದಿನ ಇರೋದಂತೂ ಗ್ಯಾರಂಟಿ ನೋಡಿ. ಅಂದರೆ ಸಿನಿಮಾ ರಿಲೀಸ್ ಆದ ಮೂರು ದಿನ ಮಾತ್ರ ಈ ಒಂದು ಆಫರ್ ಇರುತ್ತದೆ. ಆಮೇಲೆ ಎಂದಿನಂತೆ ಟಿಕೆಟ್ ದರ ಇರಲಿದೆ.

ಇದನ್ನೂ ಓದಿ: 'ಟಾಕ್ಸಿಕ್' ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪ: ಎಫ್ಐಆರ್ ದಾಖಲಿಸಿದ ಅರಣ್ಯ ಇಲಾಖೆ

ಆರಾಮ್ ಅರವಿಂದ್ ಸ್ವಾಮಿ ಝಲಕ್ ನೋಡ್ತಿದ್ರೆ ಅನೀಶ್ ತೇಜೇಶ್ವರ್​​ ಅವರಿಗೆ ಫುಲ್​ ಮಾರ್ಕ್ಸ್ ನೀಡುವ ಎಲ್ಲಾ ಲಕ್ಷಣಗಳು ಕಾಣ್ತಿವೆ. ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಮಾಸ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಅನೀಶ್ ಈ ಸಿನಿಮಾ ಮೂಲಕ ರೊಮ್ಯಾಂಟಿಕ್ ಹೀರೋ ಆಗಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ 'ಮುಂದೆ ಹೇಗೋ ಏನೋ' ಎಂಬ ಹಾಡು ಅನಾವರಣಗೊಂಡಿತ್ತು.

ಇದನ್ನೂ ಓದಿ: ಶಾರುಖ್ ಖಾನ್‌ಗೆ ಜೀವ ಬೆದರಿಕೆ: ಛತ್ತೀಸ್‌ಗಢದ ವಕೀಲ ಅರೆಸ್ಟ್

ಹೀಗೆ ಪ್ರಚಾರ ಸಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ವೈವಿಬಿ ಶಿವಸಾಗರ್ ಅವರ ಕ್ಯಾಮರಾ ಕೈಚಳಕ, ಉಮೇಶ್‌ ಆರ್‌. ಬಿ ಸಂಕಲನ ಈ ಚಿತ್ರಕ್ಕಿದೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಮ್‌ ಗಣಿ ಬಿಕಾಂ ಪಾಸ್‌, ಗಜಾನನ ಆಂಡ್‌ ಗ್ಯಾಂಗ್‌ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಅಭಿಷೇಕ್‌ ಶೆಟ್ಟಿ ಆ್ಯಕ್ಷನ್‌ ಕಟ್‌ ಹೇಳಿರುವ ಮೂರನೇ ಚಿತ್ರ ಇದಾಗಿದ್ದು, ಇದೇ ತಿಂಗಳ 22ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.