ETV Bharat / entertainment

8 ದಿನದಲ್ಲಿ ₹100 ಕೋಟಿ ದಾಟಿದ ಮೊದಲ ಮಲಯಾಳಂ ಸಿನಿಮಾ 'ಆಡುಜೀವಿತಂ' - The Goat Life

ಪೃಥ್ವಿರಾಜ್ ಸುಕುಮಾರನ್ ಅವರ ಇತ್ತೀಚಿನ ಗೋಟ್​​ ಲೈಫ್ ಚಿತ್ರ ​​ಶೀಘ್ರವೇ 100 ಕೋಟಿ ರೂಪಾಯಿ ದಾಟಿದ ಮಲಯಾಳಂ ಸಿನಿಮಾವಾಗಿ ಹೊರಹೊಮ್ಮಿದೆ.

Aadujeevitham
ಆಡುಜೀವಿತಂ
author img

By ETV Bharat Karnataka Team

Published : Apr 6, 2024, 1:27 PM IST

ಗೋಟ್​​ ಲೈಫ್​​ ಎಂದು ಕರೆಯಲ್ಪಡುವ ಮಲಯಾಳಂ ಚಿತ್ರ 'ಆಡುಜೀವಿತಂ' ಬಾಕ್ಸ್ ಆಫೀಸ್​ ವಿಚಾರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಬ್ಲೆಸ್ಸಿ ನಿರ್ದೇಶನದ ಈ ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಗೋಟ್​ ಲೈಫ್ ಬಿಡುಗಡೆಯಾದ ಕೇವಲ ಎಂಟು ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ದಾಖಲೆ ಬರೆದಿದೆ. ಸಿನಿಮಾದ ಈ ಸಾಧನೆ ಮಲಯಾಳಂ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದ್ದು, 'ಮಂಜುಮ್ಮೆಲ್ ಬಾಯ್ಸ್ ' ಚಿತ್ರದ ದಾಖಲೆಯನ್ನು ಮುರಿದಿದೆ.

  • " class="align-text-top noRightClick twitterSection" data="">

ನಾಯಕ ನಟ ಪೃಥ್ವಿರಾಜ್ ಸುಕುಮಾರನ್ ಅವರೇ ಈ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ, ಈ ಅಭೂತಪೂರ್ವ ಯಶಸ್ಸಿಗೆ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಚಿತ್ರ ಜಾಗತಿಕವಾಗಿ 100 ಕೋಟಿ ರೂಪಾಯಿ ಗಳಿಸಿದೆ ಎಂದು ತಿಳಿಸಿದ ನಟ ಅಪಾರ ಬೆಂಬಲಕ್ಕಾಗಿ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ. ಸೂಪರ್ ಸ್ಟಾರ್ ಶೇರ್ ಮಾಡಿದ ಪೋಸ್ಟ್​​ಗೆ ಅಭಿಮಾನಿಗಳು ಪ್ರತಿಕ್ರಿಯಿಸಿ, ಅಭಿನಂದನೆ ತಿಳಿಸಿದ್ದಾರೆ. ಈ ಸಾಧನೆ ಮಲಯಾಳಂ ಚಿತ್ರರಂಗದಲ್ಲಿ ಒಂದು ಪ್ರಮುಖ ಕ್ಷಣವೆಂದು ಕೊಂಡಾಡುತ್ತಿದ್ದಾರೆ.

'ಆಡುಜೀವಿತಂ' ಬಿಡುಗಡೆಯಾದ ಎಂಟನೇ ದಿನಕ್ಕೆ 100 ಕೋಟಿ ರೂ. ಕಲೆಕ್ಷನ್​ನ ಮೈಲಿಗಲ್ಲನ್ನು ತಲುಪಿದರೆ, ಚಿದಂಬರಂ ನಿರ್ದೇಶನದ 'ಮಂಜುಮ್ಮೆಲ್ ಬಾಯ್ಸ್' ತನ್ನ ಒಂಬತ್ತನೇ ದಿನ ಈ ಸಾಧನೆ ಮಾಡಿತ್ತು. ಈ ಹಿಂದೆ, '2018: ಎವ್ರಿಒನ್​​ ಈಸ್ ಎ ಹೀರೋ' ಚಿತ್ರ ಕೂಡ ಜಾಗತಿಕವಾಗಿ ಶೀಘ್ರ 100 ಕೋಟಿ ಗಳಿಸಿದ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಗಮನಾರ್ಹ ವಿಚಾರವೆಂದರೆ ಈ ಮೂರೂ ಚಿತ್ರಗಳು ಜೀವನದ ಹೋರಾಟ ಎದುರಿಸಿ, ಬದುಕುಳಿಯುವ ಕಥೆಯನ್ನು ಆಧರಿಸಿದೆ.

ಇದನ್ನೂ ಓದಿ: ಅಪ್ಪ ಎಂಬ ದೇವರ ಸತ್ಯ ಕಥೆ 'ಅಪ್ಪ ಐ ಲವ್ ಯೂ': ಮುಂದಿನ ಶುಕ್ರವಾರ ತೆರೆಗೆ - Appa I Love You

ಆಡುಜೀವಿತಂ ಚಿತ್ರದಲ್ಲಿ ಅಮಲಾ ಪೌಲ್, ಕೆ ಆರ್ ಗೋಕುಲ್, ಜಿಮ್ಮಿ ಜೀನ್-ಲೂಯಿಸ್, ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿಸಿದ್ದಾರೆ. ಬೆನ್ಯಾಮಿನ್ ಅವರ ಕಾದಂಬರಿ ಆಧರಿಸಿದ ಚಿತ್ರವಿದು. ಕಥೆಯು ಕೇರಳದ ನಜೀಬ್ ಎಂಬ ವ್ಯಕ್ತಿಯ ಸುತ್ತ ಸುತ್ತುತ್ತದೆ. ಅವರು ಉತ್ತಮ ಜೀವನ ನಡೆಸುವ ಉದ್ದೇಶದಿಂದ ಗಲ್ಫ್‌ಗೆ ವಲಸೆ ಹೋಗುತ್ತಾರೆ. ಆದರೆ ಮೇಕೆ ಮೇಯಿಸಲು ಒತ್ತಾಯಿಸುಲ್ಪಡುತ್ತಾರೆ. ಚಿತ್ರವು ನಜೀಬ್‌ನ ಹೋರಾಟಗಳು ಮತ್ತು ತಪ್ಪಿಸಿಕೊಂಡು ಮನೆಗೆ ಹಿಂದಿರುಗುವ ಅವನ ಬಯಕೆಯನ್ನು ಚಿತ್ರಿಸಿದೆ. 'ಆಡುಜೀವಿತಂ' ಕಥೆ ಮತ್ತು ನಾಯಕ ನಟ ಪೃಥ್ವಿರಾಜ್ ಸುಕುಮಾರನ್ ಅವರ ನಟನೆಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಪ್ರೇಕ್ಷಕರ ಮನ ಗೆದ್ದ 'ಆಡುಜೀವಿತಂ': ಚಿತ್ರಕ್ಕಾಗಿ 16 ವರ್ಷ ಮುಡಿಪಿಟ್ಟ ಪೃಥ್ವಿರಾಜ್ ಸುಕುಮಾರನ್! - Aadujeevitham

ETV Bharat Logo

Copyright © 2024 Ushodaya Enterprises Pvt. Ltd., All Rights Reserved.