ETV Bharat / entertainment

ಶಾರುಖ್​ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ ಹೆಸರಲ್ಲಿ ಫೇಕ್​​ ಆಫರ್ ಲೆಟರ್​​: ಎಚ್ಚರ ವಹಿಸುವಂತೆ ಸೂಚನೆ - Red Chillies Entertainment

author img

By ETV Bharat Karnataka Team

Published : Jun 6, 2024, 9:44 AM IST

ಶಾರುಖ್​ ಖಾನ್​ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ 'ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್‌' ಹೆಸರಲ್ಲಿ ಫೇಕ್​​ ಜಾಬ್​​ ಆಫರ್ ಲೆಟರ್ ವೈರಲ್​ ಆಗಿದ್ದು, ಪ್ರೊಡಕ್ಷನ್​ ಹೌಸ್​​ ನೋಟಿಸ್​ ಶೇರ್ ಮಾಡಿದೆ.

Shah Rukh Khan
ಶಾರುಖ್ ಖಾನ್ (File Photo, IANS)

ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಅವರು ದೇಶ ಮಾತ್ರವಲ್ಲದೇ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೋಟ್ಯಂತರ ಕಟ್ಟಾ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೋಡಲು, ಮಾತನಾಡಿಸಲು, ಅವರೊಂದಿಗೆ ಒಂದೆರೆಡು ನಿಮಿಷವಾದರೂ ಕಳೆಯಲು, ಫೋಟೋ - ವಿಡಿಯೋ ಕ್ಲಿಕ್ಕಿಸಿಕೊಳ್ಳಲು ಇಚ್ಛಿಸುತ್ತಾರೆ. ನಟನನ್ನು ನೋಡಲು, ಅವರೊಂದಿಗೆ ಕೆಲಸ ಮಾಡೋ ವಿಶೇಷ ಅವಕಾಶವನ್ನು ಯಾರೂ ಕಳೆದುಕೊಳ್ಳುವುದಿಲ್ಲ. ಇದನ್ನೇ ದುರುಪಯೋಗಪಡಿಸಿಕೊಳ್ಳೋ ಗುಂಪುಗಳು ಸಹ ಇವೆ.

ಇತ್ತೀಚೆಗೆ ಶಾರುಖ್​ ಖಾನ್​ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ 'ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌'ನಲ್ಲಿ ಕೆಲಸ ಇದೆ ಎಂಬ ಆಫರ್​ ಲೆಟರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆ ನೋಟಿಸ್ ಜಾರಿ ಮಾಡಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.

ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ನೋಟಿಸ್ ಪೋಸ್ಟ್ ಮಾಡೋ ಮೂಲಕ ಜನರಿಗೆ ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿಕೊಂಡಿದೆ. 'ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಹೆಸರಲ್ಲಿ ಫೇಕ್​​​ ಆಫರ್​​ ಲೆಟರ್​ಗಳು ವಿವಿಧ ಸೋಷಿಯಲ್​ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ, ವಿಶೇಷವಾಗಿ ವಾಟ್ಸ್​ಆ್ಯಪ್​​ನಲ್ಲಿ ವೈರಲ್​​ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಯಾವುದೇ ನೇಮಕಾತಿ ನೀತಿ ಅಥವಾ ಯಾವುದೇ ಉದ್ಯೋಗ ಅವಕಾಶಗಳ ಬಗ್ಗೆ ವಾಟ್ಸ್​​ಆ್ಯಪ್​ ಅಥವಾ ಇನ್ಯಾವುದೇ ಇತರ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ನೀಡುವುದಿಲ್ಲ ಎಂಬುದನ್ನು ನಾವು ಹೇಳಲು ಬಯಸುತ್ತೇವೆ. ಆಫರ್​ಗಳನ್ನು ನಮ್ಮ ಅಧಿಕೃತ ಚಾನೆಲ್‌ಗಳ ಮೂಲಕ ಮಾತ್ರ ಒದಗಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 9 ವರ್ಷಗಳ ಕಾಲ ಸತತ ಹಿನ್ನಡೆ, ಹಣವಿಲ್ಲದೇ ಫುಟ್​​ಪಾತ್​​​ನಲ್ಲಿ ಮಲಗಿದ್ದ ಈ ವ್ಯಕ್ತಿಯೀಗ ಬರೋಬ್ಬರಿ 6,300ಕೋಟಿ ರೂಗಳ ಸರದಾರ!; ಯಾರೀತ? - Indias Richest Actor

ಈ ರೀತಿ ಫೇಕ್​ ಆಫರ್ ಲೆಟರ್ ವೈರಲ್​ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಪ್ರೊಡಕ್ಷನ್​ ಹೌಸ್ 2023ರ ಡಿಸೆಂಬರ್​​​​ನಲ್ಲಿ ಕೂಡ ಇದೇ ರೀತಿಯ ನೋಟಿಸ್ ನೀಡಿತ್ತು. ಡಂಕಿ ಬಿಡುಗಡೆಗೂ ಮುನ್ನ, ಸೂಪರ್‌ ಸ್ಟಾರ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನಿಂದ ಜೈಪುರಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳುವ ಆಹ್ವಾನ ಪತ್ರಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆ ಸಂದರ್ಭ ಕೂಡ ಸೋಷಿಯಲ್​ ಮೀಡಿಯಾ ಮೂಲಕ ಹೇಳಿಕೆ ನೀಡಿದ ಸಂಸ್ಥೆ, ಈ ಆಮಂತ್ರಣ ನಕಲಿ ಎಂದು ಖಚಿತಪಡಿಸಿತ್ತು.

ಇದನ್ನೂ ಓದಿ: ಸಾನಿಯಾ ಮಿರ್ಜಾ 'ಲವ್​ ಇಂಟ್ರೆಸ್ಟ್​​' ರೋಲ್ ಪ್ಲೇ ಮಾಡಲಿಚ್ಛಿಸಿದ ಎಸ್​​ಆರ್​ಕೆ: ಪ್ರೀತಿ​ ಹುಡುಕಬೇಕೆಂದ ಕ್ರೀಡಾಪಟು - Sania Mirza

ಇನ್ನೂ ನಟನ ಸಿನಿಮಾ ವಿಚಾರ ಗಮನಿಸುವುದಾದರೆ, 2023ರಲ್ಲಿ ಬಂದ ಪಠಾಣ್​​​, ಜವಾನ್​, ಡಂಕಿ ಸಿನಿಮಾಗಳು ಸೂಪರ್​ ಡುಪರ್​ ಹಿಟ್​​ ಆಗಿವೆ. ಅಭಿಮಾನಿಗಳು ಮುಂದಿನ ಚಿತ್ರಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್‌ನ ಸಹ-ನಿರ್ಮಾಣದಲ್ಲಿ 'ಕಿಂಗ್'​​ ಚಿತ್ರ ಮೂಡಿಬರಲಿದ್ದು, ಮೊದಲ ಬಾರಿಗೆ ಪುತ್ರಿ ಸುಹಾನಾ ಖಾನ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.