ETV Bharat / entertainment

ವಿಭಿನ್ನ ಪ್ರೇಮಕಥೆಯ 'ಕಡಲೂರ ಕಣ್ಮಣಿ' ಟ್ರೇಲರ್​ ಅನಾವರಣ - Kadaloora Kanmani Trailer - KADALOORA KANMANI TRAILER

ಇತ್ತೀಚೆಗೆ ರಾಮ್ ಪ್ರಸನ್ನ ಹುಣಸೂರು ನಿರ್ದೇಶನದ 'ಕಡಲೂರ ಕಣ್ಮಣಿ' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.

Kadaloora Kanmani film team
'ಕಡಲೂರ ಕಣ್ಮಣಿ' ಚಿತ್ರತಂಡ (ETV Bharat)
author img

By ETV Bharat Karnataka Team

Published : Jul 16, 2024, 3:20 PM IST

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ, ವಿಭಿನ್ನ ಕಂಟೆಂಟ್​​ ಆಧರಿಸಿದ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. 'ಕಡಲೂರ ಕಣ್ಮಣಿ' ಎಂಬ ಕಂಟೆಂಟ್​ ಆಧರಿತ ಚಿತ್ರವೊಂದು ಸಿನಿಪ್ರೇಮಿಗಳೆದುರು ಬರಲು ಸಜ್ಜಾಗಿದೆ. ಇತ್ತೀಚೆಗೆ ಈ ಕಡಲೂರ ಕಣ್ಮಣಿ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ವೆಂಕಟೇಶ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು ಮಾತನಾಡಿ, ಕಡಲೂರ ಕಣ್ಮಣಿ ಒಂದು ಪ್ರೇಮಕಥಾಹಂದರ ಹೊಂದಿರುವ ಚಿತ್ರ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ಇದು ವಿಭಿನ್ನ ಪ್ರೇಮಕಥೆ ಎನ್ನಬಹುದು. ಕಡಲಿನಲ್ಲಿ ಮುತ್ತು ಸಿಗುವುದು ಎಲ್ಲರಿಗೂ ತಿಳಿದ ಸಂಗತಿ. ನನಗೂ ಸಹ ಈ ಚಿತ್ರದಲ್ಲಿ ಮೂರು ಮುತ್ತುಗಳು ಸಿಕ್ಕಿವೆ. ಅದು ನಮ್ಮ ನಾಯಕ ನಟ, ನಾಯಕಿ ಹಾಗೂ ನಿರ್ಮಾಪಕರು. ಈ ನಮ್ಮ ಚಿತ್ರ ಪ್ರೇಕ್ಷಕರಿಗೆ ಹಿಡಿಸಲಿದೆ ಎಂಬ ನಂಬಿಕೆ ಇದೆ. ಇದೇ ತಂಡದೊಂದಿಗೆ "ಕಡಲೂರ ಕಣ್ಮಣಿ"ಯ ಎರಡನೇ ಭಾಗದಲ್ಲಿ ತರುವ ಸಿದ್ಧತೆಯೂ ನಡೆಯುತ್ತಿದೆ. ಮೊದಲ ಭಾಗಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದೇನೆ ಎಂದು ತಿಳಿಸಿದರು.

Kadaloora Kanmani film team
'ಕಡಲೂರ ಕಣ್ಮಣಿ' ಚಿತ್ರತಂಡ (ETV Bharat)

ನಂತರ ಯುವನಟ ಅರ್ಜುನ್ ನಗರಕರ್ ಮಾತನಾಡಿ, ವರ್ಣಪಟಲ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿರುವ ನನಗೆ ನಾಯಕನಾಗಿ ಇದು ಚೊಚ್ಚಲ ಚಿತ್ರ. ನನ್ನ ಪಾತ್ರ ನೋಡುಗರಿಗೆ ಇಷ್ಟ ಆಗಲಿದೆ. ನನಗೆ ಅವಕಾಶ ನೀಡಿದ ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದಗಳು ಎಂದು ತಿಳಿಸಿದರು‌.

ಇದನ್ನೂ ಓದಿ: 'ಮ್ಯಾಕ್ಸ್‌' ಆಟ ಶುರು: ಆ್ಯಕ್ಷನ್​​ ಅವತಾರದಲ್ಲಿ ಅಬ್ಬರಿಸಿದ ಅಭಿನಯ ಚಕ್ರವರ್ತಿ - Sudeep Max Teaser

ನಿರ್ಮಾಪಕ ಕೊಳ ಶೈಲೇಶ್ ಆರ್ ಪೂಜಾರಿ ಮಾತನಾಡಿ, ನಾವು ಬ್ಯಾಂಕ್ ಉದ್ಯೋಗಿಗಳು. ಜೊತೆಗೆ ಆಪ್ತಮಿತ್ರರು. ರಾಮ್ ಪ್ರಸನ್ನ ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು. ನನಗೆ ಸಹ ನಿರ್ಮಾಪಕ ಮಹೇಶ್ ಕುಮಾರ್ ಎಂ ಸಾಥ್ ನೀಡಿದರು ಎಂದು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ: ಹೈದರಾಬಾದ್‌ ಡ್ರಗ್​​ ಕೇಸ್​: ನಟಿ ರಾಕುಲ್ ಪ್ರೀತ್ ಸಿಂಗ್ ಸಹೋದರ ಅಮನ್ ಸೇರಿ 10 ಮಂದಿ ಅರೆಸ್ಟ್! - Hyderabad Drug Case

ರಾಮ್ ಪ್ರೊಡಕ್ಷನ್ ಅಡಿ 'ಕಡಲೂರ ಕಣ್ಮಣಿ' ಚಿತ್ರ ನಿರ್ಮಾಣ ಆಗಿದ್ದು, ಸಾಹಸ ನಿರ್ದೇಶಕ ಚಂದ್ರು ಬಂಡೆ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಡಿಎಸ್‌ಕೆ ಸಿನಿಮಾಸ್ ಸಂಸ್ಥೆಯಡಿ ಸುನೀಲ್ ಕುಂಬಾರ್ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆಗೊಳಿಸಲಿದ್ದಾರೆ. ಇದೇ ಶುಕ್ರವಾರ, ಜುಲೈ 19 ರಂದು 'ಕಡಲೂರ ಕಣ್ಮಣಿ' ತೆರೆಗಪ್ಪಳಿಸಲಿದೆ. ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿರುವ ಈ ಸಮಯದಲ್ಲಿ ಬಿಡುಗಡೆ ಆಗುತ್ತಿರುವ 'ಕಡಲೂರ ಕಣ್ಮಣಿ' ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಈ ವಾರಾಂತ್ಯ ತಿಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.