ETV Bharat / entertainment

ಬಿಗ್​ ಬಾಸ್​ನಲ್ಲಿ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು: ತನ್ನ___ಕ್ಕೆ ತಾನೇ ಸವಾಲೆಸೆದುಕೊಂಡ ರಜತ್​​! - BIGG BOSS KANNADA

ಬಿಗ್​ ಬಾಸ್​ನಲ್ಲಿ ಸ್ಪರ್ಧಿಗಳ ಗಲಾಟೆ ತಾರಕಕ್ಕೇರಿದೆ.

fight between Rajat and dhanaraj
ಕೈ ಕೈ ಮಿಲಾಯಿಸಿಕೊಂಡ ಸ್ಪರ್ಧಿಗಳು (Photo: bigg boss team)
author img

By ETV Bharat Entertainment Team

Published : Dec 10, 2024, 5:52 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​ ಸೀಸನ್​ 11' ಈಗಾಗಲೇ 70 ದಿನಗಳನ್ನು ಪೂರೈಸಿದೆ. 11ನೇ ವಾರ ಸಾಗಿದ್ದು, ಆಟದ ಮಜಲುಗಳು ಬದಲಾಗಿವೆ. ಸ್ಪರ್ಧಿಗಳ ನಡುವಿನ ಮನಸ್ತಾಪ, ವಾದ-ವಿವಾದಗಳು, ಗಲಾಟೆ ಕೊಂಚ ಹೆಚ್ಚೇ ಎನ್ನಬಹುದು. ಇಂದಿನ ಸಂಚಿಕೆಯಲ್ಲೂ ಸ್ಪರ್ಧಿಗಳು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಅದರ ಒಂದು ನೋಟ ಪ್ರೋಮೋದಲ್ಲಿ ಸಿಕ್ಕಿದೆ.

''ಮನೆಗೆ ಬಂದ ಗೆಸ್ಟ್ಸ್ ಎದುರು ಮಕ್ಕಳಾಟ!'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನಡಿ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಳಿಸಿದ್ದಾರೆ. ಧನರಾಜ್​ ಆಚಾರ್​ ಮತ್ತು ರಜತ್​​ ಕಿಶನ್​ ನಡುವಿನ ಗಲಾಟೆಯನ್ನು ಇಲ್ಲಿ ಕಾಣಬಹುದು. ಕೈ ಕೈ ಮಿಲಾಯಿಸಿಕೊಂಡಿದ್ದು ಗಂಭೀರ ಸ್ವರೂಪ ಪಡೆಯಿತೇ? ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಅವರನ್ನು ಮನೆಯಿಂದ ಹೊರಕಳುಹಿಸಲಾಯಿತೇ? ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರಿಗೆ ಕುತೂಹಲವಿದೆ. ಸಂಪೂರ್ಣ ಸಂಚಿಕೆ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ಬಿಗ್​ ಬಾಸ್​ 50 ದಿನಗಳನ್ನು ಪೂರ್ಣಗೊಳಿಸಿದ್ದ ಸಂದರ್ಭದಲ್ಲಿ ವೈಲ್ಡ್​​ ಸ್ಪರ್ಧಿಯಾಗಿ ರಜತ್​ ಕಿಶನ್​​ ಮನೆ ಪ್ರವೇಶಿಸಿದ್ದರು. ಎಂಟ್ರಿ ಕೊಟ್ಟ ದಿನದಿಂದಲೂ ಸಖತ್​ ರೆಬೆಲ್​​ ಆಗೇ ಟಾಸ್ಕ್​ ಆಡಿದ್ದಾರೆ. ದನಿ ಏರಿಸೋ ಮೂಲಕ ಹೆಚ್ಚಿನವರ ಗಮನ ಸೆಳೆದಿದ್ದಾರೆ. ಇದೀಗ ಧನರಾಜ್​​ ಆಚಾರ್​ ಜೊತೆ ವಾದಕ್ಕಿಳಿದಿದ್ದಾರೆ.

ಕಾರ್ತಿಕ್​, ನಮ್ರತಾ ಎಂಟ್ರಿಯಿಂದ ನಾಮಿನೇಷನ್​ ಕಿಚ್ಚು ಇನ್ನೂ ಹೆಚ್ಚಾಗಿದೆ ಎಂಬ ಹಿನ್ನೆಲೆಯಲ್ಲಿ ದನಿಯುಳ್ಳ ಬಿಗ್​ ಬಾಸ್​ ಪ್ರೊಮೋದಲ್ಲಿ ಧನರಾಜ್​ ಆಚಾರ್​ ಅವರು ರಜತ್​​ ಅವರನ್ನು ನಾಮಿನೇಷನ್​ ಮಾಡಿರೋದನ್ನು ಕಾಣಬಹುದು. ''ತ್ರಿವಿಕ್ರಮ್​ ಅವರು ಹೇಳ್ತಾರೆ ವಿನ್​ ಆಗಲು ರಜತ್​​ ಅವ್ರು ಕಾರಣ ಎಂದು'' ಇದು ಹಿಡಿಸಲಿಲ್ಲ ಎಂದು ತಮ್ಮ ಕಾಣಗಳನ್ನು ಕೊಟ್ಟಿದ್ದಾರೆ. ಯಾರೋ ಕೊಟ್ಟ ರೀಸನ್​ಗೆ ನನನ್ನು ನಾಮಿನೇಟ್​ ಮಾಡೋದು ಎಷ್ಟು? ಸರಿ ಎಂದು ರಜತ್​ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: 'ACE' ಚಿತ್ರದಲ್ಲಿ ವಿಜಯ್​ ಸೇತುಪತಿಗೆ ಜೋಡಿಯಾದ ರುಕ್ಮಿಣಿ ವಸಂತ್​: 'ರುಕ್ಕು'ವಾದ್ರು ಪ್ರಿಯಾ- ಗ್ಲಿಂಪ್ಸ್ ರಿಲೀಸ್

ಗುಗ್ಗು ನನ್ ಮಗ ಎಂದು ರಜತ್​ ಕಾಮೆಂಟ್​ ಮಾಡುತ್ತಿದ್ದಂತೆ, ನಿಮ್ಮ ಲೆವೆಲ್​ ಏನು ಎಂಬುದು ನನಗೆ ತಿಳಿದಿದೆ ಎಂದು ಧನರಾಜ್​ ತಿಳಿಸಿದ್ದಾರೆ. ಕೆರಳಿದ ರಜತ್​, ನಾನ್​ ಎಂಥಾ ತಲೆ ಕೆಟ್​​ ನನ್ ಮಗ ಅನ್ನೋದು ನಿನಗಿನ್ನೂ ಗೊತ್ತಿಲ್ಲ, ನನ್ ಹತ್ರ ಈ ಆಟಗಳನ್ನು ಆಡಬೇಡ ಎಂದು ತಿಳಿಸಿದ್ದಾರೆ. ಅದಕ್ಕೆ ನಾನ್​ ಆಟ ಆಡೋಕೆ ಬಂದಿರೋದ್​ ಇಲ್ಲಿಗೆ ಎಂದು ಧನರಾಜ್​ ಕುಳಿತಲ್ಲಿಂದ ಎದ್ದು ಬಂದಿದ್ದಾರೆ. ಮಗು ಅಂತಾ ಹೇಳೋದು ಇದಿಕ್ಕೆ ಕಣೋ, ಪಾಪು ನೀನು ಎಂದು ರಜತ್​ ಕಾಮೆಂಟ್​ ಮಾಡಿದ್ದಾರೆ. ಪ್ರತಿಕ್ರಿಯೆಯಾಗಿ ಅಂಕಲ್​ ಎಂದು ಧನರಾಜ್​ ಅವರು ರಜತ್ ಕೆನ್ನೆ ಹಿಡಿದಿದ್ದಾರೆ. ಹೀಗೆ ಮಾತಿಗೆ ಮಾತು ಆರಂಭವಾಗಿ ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಇದನ್ನು ಬಿಡಿಸಲು ಕ್ಯಾಪ್ಟನ್​ ಗೌತಮಿ ಜಾಧವ್​ ಮತ್ತು ಉಗ್ರಂ ಮಂಜು ಮುಂದಾಗಿದ್ದಾರೆ. ​​

ಇದನ್ನೂ ಓದಿ: 5 ದಿನದಲ್ಲಿ 900 ಕೋಟಿ: ಇದು 'ಪುಷ್ಪ'ರಾಜನ ವ್ಯವಹಾರ; ಆರ್​ಆರ್​ಆರ್​, ಕಲ್ಕಿ ದಾಖಲೆ ಮೀರಿಸಿದ ಸಿನಿಮಾ

"ತನ್ನದೇ ಚಾಲೆಂಜ್‍‍ನಲ್ಲಿ ರಜತ್ ಕಿಶನ್‍‍ನ ಸೋಲಿಸ್ತಾರಾ ಚೈತ್ರಾ?" ಎಂಬ ಕ್ಯಾಪ್ಷನ್​ನೊಂದಿಗೆ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ರಜತ್​​ ಕಿಶನ್​ ತಮ್ಮ ಗಂಡಸ್ತನಕ್ಕೆ ತಾವೇ ಸವಾಲೆಸೆದುಕೊಂಡಿದ್ದಾರೆ. ಅಡುಗೆ ಕೆಲಸ ಮತ್ತು ಪಾತ್ರೆ ತೊಳಿಯುವ ಕೆಲಸಕ್ಕೆ ಚೈತ್ರಾ ಮತ್ತು ರಜತ್​ ನಡುವೆ ಚರ್ಚೆ ನಡೆದಿದೆ. ನಾನು ಈ ಕೆಲಸ ಮಾಡೋದಿಲ್ಲವೆಂದು ಇಬ್ಬರೂ ವಾದ-ವಿವಾದ ಮಾಡಿಕೊಂಡಿದ್ದಾರೆ. "ನೀನ್​ ನನ್ನ ಕೈಯಿಂದ ಪಾತ್ರೆ ತೊಳಿಸ್ಬಿಟ್ರೆ, ನಾನು ತೊಳ್ದ್​​​ಬಿಟ್ರೆ ಗಂಡ್ಸೇ ಅಲ್ಲ ಅಂದ್ಕೋ" ಎಂದು ಚೈತ್ರಾ ಬಳಿ ರಜತ್​ ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.