ETV Bharat / entertainment

ಧನರಾಜ್​​ ಆಚಾರ್​​​ಗೆ ಹೊಡೆದ ರಜತ್​​: ಇವರನ್ನು ಮನೆಯಿಂದ ಹೊರಕಳುಹಿಸಬೇಕಾ! ಏನಂತೀರಿ? - DHANARAJ VS RAJATH FIGHT

ಧನರಾಜ್​​ ಆಚಾರ್​ ಮತ್ತು ರಜತ್​ ಕಿಶನ್​​ ಜಗಳ ತಾರಕಕ್ಕೇರಿದೆ.

Fight between Dhanaraj and Rajath
ಧನರಾಜ್​​ ಆಚಾರ್​ ರಜತ್​ ಕಿಶನ್​​ ಫೈಟ್​ (Photo: Bigg Boss Team)
author img

By ETV Bharat Entertainment Team

Published : Dec 13, 2024, 2:05 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​ ಸೀಸನ್​​ 11'ರ ಈ ಅವಧಿಯಲ್ಲಿ ಧನರಾಜ್​​ ಆಚಾರ್​ ಮತ್ತು ರಜತ್​ ಕಿಶನ್​​ ಅವರ ಜಗಳ ತಾರಕಕ್ಕೇರಿದೆ. ಮೊನ್ನೆಯಷ್ಟೇ ಮಾತಿಗೆ ಮಾತು ಬೆಳೆದಿತ್ತು. ಸಂಭಾವ್ಯ ಅನಾಹುತವನ್ನು ಮನೆಯ ಇತರೆ ಸ್ಪರ್ಧಿಗಳು ತಡೆದು, ಪರಿಸ್ಥಿತಿಯನ್ನು ನಿಭಾಯಿಸಿದ್ದರು.

ಆದರೆ ಇಂದು ದೊಡ್ಡ ಜಗಳ ನಡೆದೇ ಬಿಟ್ಟಿದೆ. ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್​​ ಕಿಶನ್​ ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಧನರಾಜ್​​ ಆಚಾರ್ ಮೈಮೇಲೆ ಎಗರಿದ್ದು, ಪರಿಸ್ಥಿತಿ ಮತ್ತಷ್ಟು ​​​ತಾರಕಕ್ಕೇರಿದೆ. ರಜತ್ ಹೊಡೆಯಲು ಹೋಗಿದ್ದಾರೆ, ಪರಿಸ್ಥಿತಿ ನಿಭಾಯಿಸಲು ಮನೆಯವರು ಹರಸಾಹಸ ಪಟ್ಟಿದ್ದಾರೆ. ಒಂದೆರಡು ಪೆಟ್ಟು ಬಿದ್ದಂತೆ ತೋರಿದ್ದು, ಸಂಪೂರ್ಣ ಸಂಚಿಕೆ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ.

ಈಗಾಗಲೇ ಹೊಡೆದಾಟಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕನ್ನಡ ಬಿಗ್​ ಬಾಸ್​​ ಮನೆಯಿಂದ ಹೊರ ಕಳುಹಿಸಲಾಗಿದೆ. ಇಲ್ಲಿ ಹೊಡೆದಾಟಕ್ಕೆ ಅವಕಾಶವಿಲ್ಲ. ಇದು ಮನೆಯ ಮುಖ್ಯ ನಿಯಮಗಳಲ್ಲೊಂದು. ಸದ್ಯ ರಜತ್​ ಕಿಶನ್​ ಅವರ ಸರದಿ. ನಿಯಮ ಉಲ್ಲಂಘನೆ ಹಿನ್ನೆಲೆ ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್​​ ಕಿಶನ್​ ಅವರನ್ನು ಬಿಗ್​ ಬಾಸ್​ ಹೊರ ಕಳುಹಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಷಯ ಚರ್ಚೆಗೆ ಬರೋದಂತೂ ಖಚಿತ ಎಂಬುದು ಪ್ರೇಕ್ಷಕರ ದೃಢ ವಿಶ್ವಾಸ. ಆದ್ರೆ ಮನೆಯಿಂದ ಹೊರ ಕಳುಹಿಸೋದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಇದನ್ನೂ ಓದಿ: ನಟ ಅಲ್ಲು ಅರ್ಜುನ್​ ಪೊಲೀಸ್​ ವಶಕ್ಕೆ!

ಧನರಾಜ್​ ಅವರು ಕಳಪೆ ಕೊಟ್ಟಿದ್ದೇ ತಡ, ರಜತ್​ ಫುಲ್​ ರಾಂಗ್​ ಆಗಿದ್ದಾರೆ. ಮೊನ್ನೆ ನೀನು ಮಾಡಿದ್ದು ಸರಿಯೇ? ನನ್ನ ಮುಖ ಮುಟ್ಟಿದ್ದೇನು ಸಾಫ್ಟ್​​​ ಆಗಿರಲಿಲ್ಲ ಎಂದು ಧನರಾಜ್​ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಧನರಾಜ್​ ನನಗೆ ಗೊತ್ತು ನಾನು ಎಷ್ಟು ಸಾಫ್ಟ್​ ಆಗಿ ವರ್ತಿಸಿದ್ದೇನೆಂದು ಅಂತಾ ತಿಳಿಸಿದ್ದಾರೆ. ಅಸಮಧಾನಗೊಂಡ ರಜತ್​, ಮಗುವನ್ನು ಮುಟ್ಟಿದಂತೆ ನನ್ನನ್ನು ಮುಟ್ಟಿದಾ?. ನಾನೇನು ನಿನ್ನೆ ಹುಟ್ಬಿದ್ದು ಇವತ್​​ ಬಂದಿಲ್ಲ ಕಣೋ ಬಿಗ್​ ಬಾಸ್​ಗೆ. ನಿನ್​ ಮುಖ ಮೂತಿ ಹೊಡೆದಾಕ್​ಬಿಟ್ಟೇ ಆಚೆ ಹೋಗ್ಬೇಕಿತ್ತು ಎಂದು ತಿಳಿಸಿದ್ದಾರೆ. ಹೊಡಿರಿ, ತಾಕತ್​​ ಇದ್ರೆ ಮುಟ್ಟಿ ತೋರಿಸಿ ಎಂದು ಧನರಾಜ್​​ ತಿಳಿಸುತ್ತಿದ್ದಂತೆ, ರಜತ್​​ ಎಗರಿದ್ದಾರೆ. ಇವರನ್ನು ತಡೆಯಲು ಇಡೀ ಮನೆ ಮಂದಿ ಮುಂದೆ ಬಂದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು: ತನ್ನ___ಕ್ಕೆ ತಾನೇ ಸವಾಲೆಸೆದುಕೊಂಡ ರಜತ್​​!

ಮೊನ್ನೆ ಮಾತಿಗೆ ಮಾತು ಬೆಳೆದು ಧನರಾಜ್​ ಒಂದು ಹೆಜ್ಜೆ ಮುಂದೆ ಹೋಗಿದ್ದರು. ರಜತ್​ ಅವರ ಗಲ್ಲ ಹಿಡಿದಿದ್ದರು. ಇದರಿಂದ ರಜತ್​ ಕೆರಳಿದ್ದರು. ಅಂದು ಕೂಡಾ ಹೊಡೆದಾಟಕ್ಕೆ ಮುಂದಾದಂತೆ ತೋರಿತ್ತು. ಅಂದು ಕ್ಯಾಪ್ಟನ್​ ಗೌತಮಿ ಮತ್ತು ಉಗ್ರಂ ಮಂಜು ಇವರನ್ನು ತಡೆದಿದ್ದರು. ಆದ್ರಿಂದು ರಂಪಾಟ ನಡೆದೇ ಬಿಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.