ETV Bharat / entertainment

ಶಿವರಾಜ್​ಕುಮಾರ್ ಸಿನಿಪಯಣಕ್ಕೆ 38ರ ಸಂಭ್ರಮ; ಸರ್ವರಿಗೂ ಧನ್ಯವಾದ ಅರ್ಪಿಸಿದ ಹ್ಯಾಟ್ರಿಕ್ ಹೀರೋ

'ಆನಂದ್' ಸಿನಿಮಾ ಮೂಲಕ ನಾಯಕ ನಟನಾಗಿ ವೃತ್ತಿಜೀವನ ಆರಂಭಿಸಿದ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಅವರು ಚಿತ್ರರಂಗದಲ್ಲಿ 38 ವರ್ಷ ಪೂರೈಸಿದ್ದಾರೆ.

38 years to Shiva Rajkumar cinema journey
ಶಿವ ರಾಜ್​ಕುಮಾರ್ ಸಿನಿಪಯಣಕ್ಕೆ 38ರ ಸಂಭ್ರಮ
author img

By ETV Bharat Karnataka Team

Published : Feb 20, 2024, 8:27 AM IST

ಕನ್ನಡ ಚಿತ್ರರಂಗದ ಹೆಸರಾಂತ ನಟ ಡಾ. ಶಿವ ರಾಜ್​​​ಕುಮಾರ್ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ನಿರ್ಮಾಪಕರ ಹಾಟ್ ಫೇವರಿಟ್​ ಆಗಿರುವ ಮುತ್ತುರಾಜ ಕ್ಲಾಸ್, ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ. ಬಹುಶಃ ಡಾ. ರಾಜ್‌ಕುಮಾರ್ ಅವರನ್ನು ಹೊರತುಪಡಿಸಿದರೆ, ವಿವಿಧ ಪಾತ್ರಗಳನ್ನು ನಿರ್ವಹಿಸಿದ, ಹೊಸ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಅಂದರೆ ಅದು ಶಿವಣ್ಣ. ಇವರು ಸಿನಿಮಾ ವೃತ್ತಿಜೀವನ ಆರಂಭಿಸಿ 38 ವರ್ಷಗಳಾಗಿವೆ.

1986ರ ಫೆಬ್ರವರಿ 19ರಂದು, ಶಿವಣ್ಣ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡರು. 'ಆನಂದ್' ರೂಪದಲ್ಲಿ ಸಿನಿ ಅಖಾಡಕ್ಕಿಳಿದರು. ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ 'ಆನಂದ್' ಚಿತ್ರವನ್ನು ಮಗನಿಗಾಗಿ ಪಾರ್ವತಮ್ಮ ರಾಜ್​ಕುಮಾರ್ ನಿರ್ಮಾಣ ಮಾಡಿದ್ದರು. ಆ ಕಾಲಕ್ಕೆ ಗಲ್ಲಾಪಟ್ಟಿಗೆಯಲ್ಲಿ ಸದ್ದು ಮಾಡಿದ್ದ 'ಆನಂದ್', ಕನ್ನಡಿಗರ ಆನಂದವನ್ನು ಇಮ್ಮಡಿಗೊಳಿಸಿತ್ತು. ಇನ್ನೂ, ಶಂಕರ್ ಗಣೇಶ್ ಸಂಗೀತ ಹಾಗೂ ಚಿ ಉದಯ ಶಂಕರ್ ಸಾಹಿತ್ಯದಲ್ಲಿ ಬಂದ ಹಾಡುಗಳು ಇಂದಿಗೂ ಜನಪ್ರಿಯ. ವಿಶೇಷವಾಗಿ ಟುವ್ವಿ..ಟುವ್ವಿ ಹಾಡು ಅಭಿಮಾನಿಗಳ ಮೆಚ್ಚಿನ ಸಾಂಗ್ಸ್​ ಲಿಸ್ಟ್​ನಲ್ಲಿದೆ.

ಆನಂದ್ ಚಿತ್ರದ ನಂತರ ಬಂದ ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಸಿನಿಮಾಗಳು ಶಿವಣ್ಣ ಅವರಿಗೆ 'ಹ್ಯಾಟ್ರಿಕ್ ಹೀರೋ' ಪಟ್ಟವನ್ನು ತಂದು ಕೊಟ್ಟವು. ಜನುಮದ ಜೋಡಿ, ನಮ್ಮೂರ ಮಂದಾರ ಹೂವೇ, ಓಂ, ಜೋಗಿ, ಎಕೆ47, ಕಡ್ಡಿಪುಡಿ, ಟಗರು, ಹೀಗೆ ಒಂದಾ - ಎರಡಾ ಅನೇಕ ಸಿನಿಮಾಗಳು ಶಿವಣ್ಣ ಅವರ ವರ್ಚಸ್ಸನ್ನು ಹೆಚ್ಚಿಸಿದವು. ಈ ನಾಲ್ಕು ದಶಕದಲ್ಲಿ ಸರಿಸುಮಾರು 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡು, ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿರುವ ನಟ ಶಿವ ರಾಜ್​ಕುಮಾರ್​, ''38 ವರ್ಷಗಳ ಸುದೀರ್ಘ ಪಯಣದಲ್ಲಿ ಜೊತೆ ಇದ್ದವರಿಗೆಲ್ಲ ಧನ್ಯವಾದಗಳು. ನಿಮ್ಮ ಪ್ರೀತಿಗೆ ಚಿರಋಣಿ. ನಿಮ್ಮ ಶಿವು'' ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

38 years to Shiva Rajkumar cinema journey
ಶಿವ ರಾಜ್​ಕುಮಾರ್ ಸಿನಿಪಯಣಕ್ಕೆ 38ರ ಸಂಭ್ರಮ

ವಯಸ್ಸು 60+ ಆದರೂ ಸಿನಿವಯಲಯದಲ್ಲಿ ಸಕ್ರಿಯರಾಗಿದ್ದಾರೆ. ಒಂದಾದ ಬಳಿಕ ಒಂದು ಸಿನಿಮಾದಂತೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಶಿವಣ್ಣ ಸದ್ಯ 'ಕರಟಕ ದಮನಕ' ಚಿತ್ರದ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಜೊತೆಗೆ ಭೈರತಿ ರಣಗಲ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಬೆನ್ನಲ್ಲೇ ವಿಮಾನ ಅಪಘಾತದಿಂದ ಪಾರಾದ 'ಮಾರ್ಟಿನ್'​ ಚಿತ್ರತಂಡ: ಧ್ರುವ ಸರ್ಜಾ ಹೇಳಿದ್ದಿಷ್ಟು!

ಕನ್ನಡ ಚಿತ್ರರಂಗದಲ್ಲಿ 38 ವರ್ಷ ಪೂರೈಸಿರುವ ಶಿವಣ್ಣ ಅವರಿಗೀಗ ಅಕ್ಕ ಪಕ್ಕದ ರಾಜ್ಯದಲ್ಲಿಯೂ ಬೇಡಿಕೆ ಇದೆ. ಜೈಲರ್, ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಲ್ಲಿನ ಶಿವಣ್ಣ ಅವರ ಅಭಿನಯಕ್ಕೆ ಅಲ್ಲಿನ ಸಿನಿಪ್ರೇಮಿಗಳು ಫಿದಾ ಆಗಿದ್ದಾರೆ. ತೆಲುಗಿನಲ್ಲಿ ರಾಮ್ ಚರಣ್ ಜೊತೆ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂ ಚಿತ್ರರಂಗ ಕೂಡ ಶಿವಣ್ಣ ಅವರಿಗೆ ರತ್ನಗಂಬಳಿ ಹಾಕಿ ಸ್ವಾಗತ ಕೊರಿದೆ. ಕನ್ನಡದಲ್ಲಿ '45', 'ನೀ ಸಿಗೋವರೆಗೂ' ಸೇರಿ ಅರ್ಧ ಡಜನ್​ಗೂ ಹೆಚ್ಚಿನ ಸಿನಿಮಾಗಳೂ ಶಿವಣ್ಣ ಅವರ ಕೈಯಲ್ಲಿವೆ.

ಇದನ್ನೂ ಓದಿ: ಕೆರೆಬೇಟೆ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸಾಥ್

ಒಟ್ಟಿನಲ್ಲಿ ಸಖತ್​ ಯಂಗ್​​ ಸ್ಟಾರ್ಸ್​​ಗಳಿಗೇನೆ ಅಚ್ಚರಿಯಾಗುವಂತೆ ಆ್ಯಕ್ಟೀವ್ ಆಗಿರುವ ಹ್ಯಾಟ್ರಿಕ್ ಹೀರೋ ಚಿತ್ರರಂಗಕ್ಕೆ ಬಂದು 38 ವರ್ಷಗಳಾದರೂ ಇಂದಿಗೂ ಅದೇ ಚಾರ್ಮ್ ಹಾಗೂ ಫಾರ್ಮ್ ಕಾಪಾಡಿಕೊಂಡು ಬಂದಿದ್ದಾರೆ. ಲವರ್ ಬಾಯ್, ಆ್ಯಕ್ಷನ್ ಹೀರೋ ಸೇರಿದಂತೆ ಭಿನ್ನ-ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಾ ಬಂದಿರುವ ಸೆಂಚುರಿ ಸ್ಟಾರ್ ಭಾರತೀಯ ಚಿತ್ರರಂಗದ ಪಾಲಿಗೆ ಅಕ್ಷರಶಃ ಎವರ್ ಗ್ರೀನ್ ಹೀರೋ ಅಂದ್ರೆ ತಪ್ಪಿಲ್ಲ. ಸರಳ ವ್ಯಕ್ತಿತ್ವದ ಈ ನಟ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಪ್ರೇಕ್ಷಕರನ್ನು ರಂಜಿಸಲಿ ಅನ್ನೋದು ಅಭಿಮಾನಿಗಳ ಆಶಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.