ETV Bharat / education-and-career

ಹೊಸ ಭಾಷೆ ಕಲಿಯಬೇಕೇ; ಹಾಗಾದ್ರೆ ತಜ್ಞರು ನೀಡಿರುವ ಈ ಯಶಸ್ಸಿನ ಮಂತ್ರ ಪಾಲಿಸಿ - NEW LANGUAGES LEARNING

ಹೊಸ ಭಾಷೆಯೊಂದನ್ನು ಕಲಿಯುವುದು ಹೇಗೆ, ಅದರಲ್ಲಿ ಭಾಷೆ ಹಿಡಿತವನ್ನು ಸುಲಲಿತವಾಗಿ ಸಾಧಿಸುವುದು ಯಾವ ರೀತಿ ಎಂದು ಯೋಚಿಸುತ್ತಿದ್ದರೆ, ಇಲ್ಲಿನ ಕೆಲವು ಟಿಪ್ಸ್​​ ನಿಮಗೆ ಸಹಾಯಕವಾಗಬಹುದು..

want-to-learn-a-new-language-experts-share-top-tips-to-succeed
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : 2 hours ago

ಹೈದರಾಬಾದ್​: ಇಂದಿನ ಆಧುನಿಕ ಜಗತ್ತಿನಲ್ಲಿ ವೃತ್ತಿಯಲ್ಲಿ ಯಶಸ್ಸುಗಳಿಸಲು ಮಾತೃ ಭಾಷೆಯೊಂದೇ ಸಾಕಾಗುವುದಿಲ್ಲ. ಹೊಸ ಭಾಷೆಗಳು ಅನೇಕ ಅವಕಾಶಗಳನ್ನು ಅಷ್ಟೇ ನೀಡದೇ ವಿವಿಧ ಸಂಸ್ಕೃತಿ ಮತ್ತು ಕೆಲಸದ ಸ್ಥಳಗಳಲ್ಲಿ ಸುಲಭವಾಗಿ ನಿಮ್ಮನ್ನು ಬೆರೆಯುವಮತೆ ಮಾಡುತ್ತವೆ. ಹಾಗಾದ್ರೆ ಹೊಸ ಭಾಷೆಯೊಂದನ್ನು ಕಲಿಯುವುದು ಹೇಗೆ, ಅದರಲ್ಲಿ ಭಾಷೆ ಹಿಡಿತವನ್ನು ಸುಲಲಿತವಾಗಿ ಸಾಧಿಸುವುದು ಯಾವ ರೀತಿ ಎಂದು ಯೋಚಿಸುತ್ತಿದ್ದರೆ, ಇಲ್ಲಿ ಕೆಲವು ಟಿಪ್ಸ್​ ಇವೆ.

ಸಣ್ಣ ಗುರಿ ನಿರ್ಮಿಸಿ: ಆರಂಭದಲ್ಲಿ ಭಾಷೆ ಹಿನ್ನಡೆ ಅನುಭವಿಸುವುದು ಸಹಜ, ಹಾಗೆಂದು ಕುಗ್ಗಬೇಡಿ. ಸಣ್ಣ ಅಕ್ಷರ, ಪದ ಮತ್ತು ವಾಕ್ಯಗಳನ್ನು ಕಲಿಯುವ, ನಿರ್ವಹಿಸುವ ಸಣ್ಣ ಗುರಿ ಹಾಕಿಕೊಳ್ಳಿ. ಈ ಸಣ್ಣ ಸಣ್ಣ ಮೈಲಿಗಲ್ಲುಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ, ನಿಮ್ಮನ್ನು ಉತ್ತೇಜಿಸುತ್ತವೆ.

ಮಾತನಾಡುವ ಅಭ್ಯಾಸ: ನೀವು ಕಲಿತ ಭಾಷೆಯನ್ನು ಮಾತನಾಡುವುದರ ಕಡೆ ಗಮ ನೀಡಿ. ಸ್ಥಳೀಯ ಭಾಷಿಕರೊಂದಿಗೆ ನೀವು ಸಂಕೋಚ ಬಿಟ್ಟು ಮಾತನಾಡಿ. ಈ ವೇಳೆ ತಪ್ಪಾದರೂ ಸರಿ, ಅದು ಕಲಿಕೆಯ ಪ್ರಗತಿಯ ಹಂತ ಎಂದು ತಿಳಿಯಿರಿ.

ತೆರೆದುಕೊಳ್ಳಿ: ಭಾಷೆ ಕಲಿಕೆಯಲ್ಲಿ ನೆರವಾಗುವುದು ಸಿನಿಮಾ ನೋಡುವುದು ಮತ್ತು ಸಂಗೀತ ಕೇಳುವ ಅಭ್ಯಾಸ ರೂಢಿಸಿಕೊಳ್ಳಿ. ಸುದ್ದಿ ಪತ್ರಿಕೆ ಅಥವಾ ಟಿವಿಗಳು ನಿಮಗೆ ಹೊಸ ಶಬ್ಧ ಕಲಿಸುವಲ್ಲಿ ಸಹಾಯ ಮಾಡುತ್ತವೆ. ಹಾಗೇ ಶಬ್ದಕೋಶದ ಸಹಾಯ ಪಡೆಯುವುದನ್ನು ಮರೆಯಬೇಡಿ.

ಭಾಷೆ ಬಳಕೆ ವಿಸ್ತರಿಸಿ: ಪ್ರತಿನಿತ್ಯ ಒಂದು ಹೊಸ ಭಾಷೆ, ವಾಕ್ಯವನ್ನು ಕಲಿಯುವ ನಿರ್ಧಾರ ಮಾಡಿ. ಇದು ನಿಮ್ಮ ಶಬ್ದ ಜ್ಞಾನದ ಜೊತೆಗೆ ಭಾಷೆ ಕಲಿಯುವ ಆಸಕ್ತಿ ಮತ್ತು ಉತ್ಸಾಹ ಹೆಚ್ಚಿಸುತ್ತದೆ.

ಬರೆಯುವ ಅಭ್ಯಾಸ: ಬರವಣಿಗೆಯು ಕಲಿಕೆಯ ಪ್ರಮುಖ ಹಂತ ಚಟುವಟಿಕೆ ಆಗಿದೆ. ಈ ಹಿನ್ನೆಲೆ ಅವುಗಳನ್ನು ಪದಗಳಲ್ಲಿ ವ್ಯಕ್ತಪಡಿಸಿ, ಶಬ್ದಗಳ ವೃದ್ಧಿ, ವಾಕ್ಯ ರಚನೆ ಮತ್ತು ಒಟ್ಟಾರೆ ಭಾಷೆ ಸುಲಲಿತದ ಅಭ್ಯಾಸ ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ.

ತಂತ್ರಜ್ಞಾನದ ಸಹಾಯ: ಹೊಸ ಭಾಷೆ ಕಲಿಯುವ ಆ್ಯಪ್​ಗಳನ್ನು ಡೌನ್​ ಲೋಡ್​ ಮಾಡಿ, ಅದರಿಂದ ಪಾಠ ಕಲಿಯಬಹುದು. ಇದು ನಿಮ್ಮ ಅಭ್ಯಾಸ ಮತ್ತು ಕೌಶಲ್ಯ ವೃದ್ಧಿಸಲು ಸಹಾಯ ಮಾಡುತ್ತದೆ.

ಸ್ಥಳೀಯರೊಂದಿಗೆ ಮಾತನಾಡಿ: ನೀವು ಕಲಿಯಬೇಕು ಎಂಬ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ಸ್ಥಳೀಯರೊಂದಿಗೆ ಮಾತನಾಡಿ, ಇದರಿಂದ ನಿಮ್ಮ ಸರಳತೆ ಹಾಗೂ ತಪ್ಪಾದ ಕ್ಷಣವೇ ಅದನ್ನು ತಿದ್ದುವ ಕೆಲಸ ಆಗುತ್ತದೆ.

ಕ್ರಿಯಾತ್ಮಕವಾಗಿರಿ: ಹಾಡು ಬರೆಯುವುದು, ಹಾಸ್ಯ ಸೃಷ್ಟಿಸುವ ಅಥವಾ ಸಣ್ಣ ಕಥೆ ರೂಪದಲ್ಲಿ ಭಾಷೆ ಕಲಿಕೆ ಅಭ್ಯಾಸವನ್ನು ಮೋಜಿನ ರೀತಿ ಆನಂದಿಸಬಹುದು. ಇವು ನಿಮ್ಮನ್ನು ಕಲಿಕೆಗೆ ಪ್ರೋತ್ಸಾಹಿಸುವ ಜೊತೆಗೆ ಅದರಲ್ಲಿನ ಏಕತಾನತೆಯನ್ನು ಹೋಗಲಾಡಿಸುತ್ತವೆ.

ಸ್ಥಳೀಯ ಮಾತುಗಾರರನ್ನು ಅನುಕರಿಸಿ: ಭಾಷೆ ಕಲಿಯುವಾಗ ಆ ಭಾಷೆಯನ್ನು ಸ್ಥಳೀಯರು ಹೇಗೆ, ಸುಲಲಿತವಾಗಿ ಉಚ್ಛಾರಣೆ ಮಾಡುತ್ತಾರೆ ಎಂಬುದನ್ನು ಗಮನಿಸಿ ಮತ್ತು ಅನುಕರಿಸಿ.

ನಾಚಿಕೆಯಿಂದ ಹೊರಬನ್ನಿ; ಹೊಸ ಭಾಷೆ ಕಲಿಯುವಾಗ ಎಲ್ಲಿ ತಪ್ಪಾಗುತ್ತದೆ ಎಂಬ ಮುಜುಗರ ಸಾಮಾನ್ಯವಾಗಿ ಅನೇಕರಲ್ಲಿ ಬೇರೂರಿರುತ್ತದೆ. ಇಂತಹ ನಾಚಿಕೆ, ಭಯಗಳನ್ನು ಬಿಟ್ಟು, ಯಾರು ಏನು ಅಂದುಕೊಂಡಾರು ಎಂಬುದನ್ನು ಬಿಟ್ಟು ಭಾಷೆ ಮಾತನಾಡಲು ಆರಂಭಿಸಿ.

ಪ್ರಗತಿ ಸಂಭ್ರಮಿಸಿ: ಭಾಷೆ ಕಲಿಕೆಯಲ್ಲಿ ನೀವು ಹಾಕಿಕೊಂಡ ಸಣ್ಣ ಗುರಿ ತಲುಪಿದಾಗ ಅದನ್ನು ಉತ್ಸಾಹದಿಂದ ಸಂಭ್ರಮಿಸಿ. ಇದು ನಿಮ್ಮ ಆತ್ಮವಿಶ್ವಾಸ ಮತ್ತು ಕಲಿಕೆಯತ್ತ ಮತ್ತಷ್ಟು ಪ್ರೋತ್ಸಾಹಿಸುತ್ತದೆ.

ನೆನಪಿಡಿ: ಹೊಸ ಭಾಷೆ ಕಲಿಕೆಗೆ ನಿರಂತರತೆ ಮತ್ತು ಪ್ರಯತ್ನ ಅಗತ್ಯ. ಜೊತೆಗೆ ಸಾಂಸ್ಕೃತಿಕ ಅರ್ಥೈಸಿಕೊಳ್ಳುವಿಕೆ, ಉದ್ಯೋಗ ಅವಕಾಶ ಮತ್ತು ವೈಯಕ್ತಿಕ ಬೆಳವಣಿಗೆ ಕೂಡ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ.

ಇದನ್ನೂ ಓದಿ: SBI ನೇಮಕಾತಿ: ಬರೋಬ್ಬರಿ 13,735 ಜೂನಿಯರ್​ ಅಸೋಸಿಯೇಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.