Local Bank Officer Jobs in Union Bank of India : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಲಾಗಿದೆ. ದೇಶಾದ್ಯಂತ ಸುಮಾರು 1500 ಹುದ್ದೆಗಳು ಖಾಲಿ ಇವೆ ಎಂದು ತಿಳಿದು ಬಂದಿದೆ. ಪದವಿ ವಿದ್ಯಾರ್ಹತೆ ಹೊಂದಿದ್ದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು.
ಆಯ್ಕೆ ಆದರೆ ಮೊದಲ ತಿಂಗಳಿಂದಲೇ 77 ಸಾವಿರ ಸಂಬಳ: ಆಯ್ಕೆಯಾದರೆ ಮೊದಲ ತಿಂಗಳಿನಿಂದ ಸುಮಾರು 77 ಸಾವಿರ ರೂ. ತದನಂತರ ಇನ್ನೂ ಹೆಚ್ಚಿನ ಸಂಬಳ ಪಡೆಯಬಹುದು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ಥಳೀಯ ಭಾಷೆಯ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಅದಕ್ಕಾಗಿಯೇ ಆ ನೇಮಕಾತಿಗಳಿಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವುದು, ಬರೆಯುವುದು ಮತ್ತು ಓದುವುದು ಕಡ್ಡಾಯವಾಗಿದೆ. ಈ ನೇಮಕಾತಿಗಳು ಬ್ಯಾಂಕಿನ ಸೇವೆಗಳನ್ನು ದೂರದ ಪ್ರದೇಶಗಳಿಗೆ ವಿಸ್ತರಿಸಲು ಸಹಾಯ ಮಾಡುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾದರೆ ಪ್ರೊಬೇಷನರಿ ಅಧಿಕಾರಿಗಳಂತೆಯೇ ಬಡ್ತಿಯೂ ಇರುತ್ತದೆ. ವೇತನ ಶ್ರೇಣಿ ಇಬ್ಬರಿಗೂ ಒಂದೇ ಆಗಿರುತ್ತದೆ. ಅಭ್ಯರ್ಥಿಗಳು ಯಾವುದೇ ರಾಜ್ಯದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರು ಹತ್ತು ವರ್ಷಗಳ ಅವಧಿಗೆ ಆ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಾರೆ. ಸೇರಿದ ಮೊದಲ ತಿಂಗಳಿನಿಂದ 48,480 ಮೂಲ ವೇತನ ಇರಲಿದ್ದ, ಇತರ ಎಲ್ಲ ಭತ್ಯೆ ಸೇರಿದಂತೆ ಸುಮಾರು 77 ಸಾವಿರ ರೂ. ಸಂಬಳವನ್ನು ಪಡೆದುಕೊಳ್ಳಬಹುದು.
ಪರೀಕ್ಷೆ ನಡೆಯುವುದು ಹೇಗೆ?: ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮದಲ್ಲಿ ಪ್ರಶ್ನೆಗಳಿರುತ್ತವೆ . ಇಂಗ್ಲಿಷ್ ವಿಭಾಗದಲ್ಲಿ ಪ್ರಶ್ನೆಗಳು ಇಂಗ್ಲಿಷ್‌ನಲ್ಲಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ ಅಂಕದ ಕಾಲು ಭಾಗವನ್ನು ಕಳೆಯಲಾಗುತ್ತದೆ. ಪ್ರತಿ ವಿಭಾಗದಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆಯಬೇಕು. ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಮೆರಿಟ್ ಮತ್ತು ಮೀಸಲಾತಿಯ ಆಧಾರದ ಮೇಲೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ, ಪ್ರತಿ ಹುದ್ದೆಗೆ ಮೂವರನ್ನು ಆಯ್ಕೆ ಮಾಡಲಾಗುತ್ತದೆ. ಹತ್ತನೇ ಅಥವಾ ಇಂಟರ್ ನಲ್ಲಿ ಆ ರಾಜ್ಯದ ಭಾಷೆಯನ್ನು ಓದಿದವರಿಗೆ ಭಾಷಾ ಪ್ರಾವೀಣ್ಯತೆ ಪರೀಕ್ಷೆ ನಡೆಸಲಾಗುತ್ತದೆ.
ಸಂದರ್ಶನ: ಸಂದರ್ಶನವು 100 ಅಂಕಗಳನ್ನು ಹೊಂದಿರುತ್ತದೆ. ಅರ್ಹತೆ ಪಡೆಯಲು, ಎಸ್‌ಟಿ, ಎಸ್‌ಸಿ, ಒಬಿಸಿ, ದಿವ್ಯಾಂಗರು ಶೆ 35ರಷ್ಟು ಅಂಕಗಳನ್ನು ಪಡೆಯಬೇಕಾಗುತ್ತದೆ. ಇತರ ವರ್ಗಗಳ ಅಭ್ಯರ್ಥಿಗಳು ಶೇ 40ರಷ್ಟು ಅಂಕಗಳನ್ನು ಪಡೆದಿರಲೇಬೇಕು. ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಅಂಕಗಳ ಆಧಾರದ ಮೇಲೆ ಅಂತಿಮ ನೇಮಕಾತಿ ನಡೆಯಲಿದೆ. ಪರೀಕ್ಷೆಯ ಅಂಕಗಳನ್ನು 80 ಕ್ಕೆ ಇಳಿಸಲಾಗುತ್ತದೆ ಮತ್ತು ಸಂದರ್ಶನದ ಅಂಕಗಳು 20 ಆಗಿರುತ್ತದೆ ಹಾಗೂ ಎಲ್ಲ ಅಂಕಗಳನ್ನು ಒಟ್ಟುಗೂಡಿಸಿ ಅರ್ಹತೆ, ಮೀಸಲಾತಿ ಮತ್ತು ರಾಜ್ಯಕ್ಕೆ ಅನುಗುಣವಾಗಿ ಹುದ್ದೆಗಳನ್ನು ಹಂಚಲಾಗುತ್ತದೆ. ಪರೀಕ್ಷಾರ್ಥವಾಗಿ ಎರಡು ವರ್ಷ ಸೇವೆ ಸಲ್ಲಿಸಬೇಕು.
ಪ್ರಮುಖ ವಿವರಗಳು
ಹುದ್ದೆ: ಸ್ಥಳೀಯ ಬ್ಯಾಂಕ್ ಅಧಿಕಾರಿ
ಖಾಲಿ ಹುದ್ದೆಗಳು: ದೇಶಾದ್ಯಂತ 1500 ಹುದ್ದೆಗಳು.
ಅರ್ಹತೆ: ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಹತ್ತನೇ ಅಥವಾ ಇಂಟರ್‌ನಲ್ಲಿ ಸ್ಥಳೀಯ ಭಾಷೆಯನ್ನು ಓದಿರಬೇಕು.
ವಯಸ್ಸು: 1 ಅಕ್ಟೋಬರ್ 2024 ಕ್ಕೆ ಇಪ್ಪತ್ತು ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಗರಿಷ್ಠ 30 ವರ್ಷಗಳನ್ನು ಮೀರಬಾರದು. ಎಸ್‌ಸಿ ಮತ್ತು ಎಸ್‌ಸಿಗಳಿಗೆ ಐದು ವರ್ಷ, ಒಬಿಸಿಗಳಿಗೆ ಮೂರು ವರ್ಷ ಮತ್ತು ಅಂಗವಿಕಲರಿಗೆ ಹತ್ತು ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ಸಾಮಾನ್ಯ, EWS, OBCಗಳು ರೂ.850 ಆಗಿರುತ್ತದೆ. ಎಸ್ಟಿ, ಎಸ್ಸಿ, ದಿವ್ಯಾಂಗರಿಗೆ ಕೇವಲ 175 ರೂ.
ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 13.11. 2024
ಪರೀಕ್ಷೆಯ ದಿನಾಂಕ: ಪ್ರಕಟಿಸಲಾಗಿಲ್ಲ
ವೆಬ್ಸೈಟ್ : https://www.unionbankofindia.co.in/ ಇಲ್ಲಿಗೆ ಭೇಟಿ ನೀಡಿ, ಕ್ಲಿಕ್ ಮಾಡಿ ಅಪ್ಲೈ ಮಾಡಿ