ETV Bharat / education-and-career

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳಿವು; ಪದವೀಧರರಿಗೆ ಇಲ್ಲಿದೆ ಭವಿಷ್ಯ - India job market

ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಪದವೀಧರರಿಗೆ ಯಾವ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂಬ ಕುರಿತು ಲಿಂಕ್ಡ್​ಇನ್​ ವರದಿ ತಿಳಿಸಿದೆ.

these are the top jobs for fresh graduates in India job market
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳಿವು (ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ))
author img

By ETV Bharat Karnataka Team

Published : May 29, 2024, 12:11 PM IST

ನವದೆಹಲಿ: ಕಾಲಮಾನ, ಮಾರುಕಟ್ಟೆಗೆ ತಕ್ಕಂತೆ ಉದ್ಯೋಗ ಸ್ವರೂಪಗಳು ಬದಲಾಗುತ್ತಿರುತ್ತವೆ. ಅದರ ಅನುಸಾರ ಪದವೀಧರರು ಭವಿಷ್ಯ ಕಂಡುಕೊಳ್ಳುವುದು ಉತ್ತಮ. ಸದ್ಯ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳ ಬಗ್ಗೆ ವರದಿಯೊಂದು ಹೊರಬಿದ್ದಿದೆ. ಅದರ ಅನುಸಾರ ಈ ಮೂರು ಉದ್ಯೋಗಗಳಲ್ಲಿ ಪದವೀಧರರು ವಿಪುಲ ಅವಕಾಶ ಪಡೆಯಬಹುದಾಗಿದೆ. ಆ ಉದ್ಯೋಗಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಪ್ರಸ್ತುತ ಭಾರತದಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​, ಸಿಸ್ಟಂ ಇಂಜಿನಿಯರ್​, ಪ್ರೋಗ್ರಾಮಿಂಗ್​ ಅನಾಲಿಸ್ಟ್​​ ಟಾಪ್​ ಉದ್ಯೋಗಗಳಾಗಿವೆ. ಪದವೀಧರರ ಉದ್ಯೋಗ ಪ್ರವೇಶಾತಿ ಹಂತದಲ್ಲಿ ಡಿಸೈನ್​, ಅನಾಲಿಟಿಕ್ಸ್​ ಮತ್ತು ಪ್ರೋಗ್ರಾಮಿಂಗ್​ ಕೌಶಲ್ಯ ಇಂದಿಗೂ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ವರದಿಯಾಗಿದೆ.

ಈ ಹಿಂದೆ ಫ್ರೆಶರ್​​ಗಳಿಗೆ ಇದ್ದ ಆನ್​​ಲೈನ್​​ ರೋಲ್​ (ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಣೆ) ಈಗ ಇಲ್ಲ. ಇದರಲ್ಲಿ ಶೇ 15ರಷ್ಟು ಇಳಿಕೆ ಕಂಡಿದೆ. ಇದೇ ವೇಳೆ ಹೈಬ್ರೀಡ್​ (ಮನೆ ಮತ್ತು ಕಚೇರಿ ಎರಡು ಕಡೆಯಿಂದ ಕಾರ್ಯ ನಿರ್ವಹಣೆ) ಉದ್ಯೋಗಗಳು ಶೇ. 52ರಷ್ಟು ಏರಿಕೆ ಕಂಡಿದೆ ಎಂದಿದ್ದಾರೆ.

ಈ ಉದ್ಯೋಗದ ತಾಜಾ ಪದವೀಧರರಿಗೆ ಆಯ್ಕೆ ಮಾಡಲು ಮತ್ತು ಮುಂದುವರಿಸಲು ಸಾಕಷ್ಟು ಕೆಲಸದ ವ್ಯವಸ್ಥೆಗಳ ಅವಕಾಶವನ್ನು ಒದಗಿಸುತ್ತದೆ ಎಂದು ವೃತ್ತಿಪರ ನೆಟ್‌ವರ್ಕ್ ಲಿಂಕ್ಡ್‌ಇನ್ ವರದಿ ಹೇಳಿದೆ.

ಬ್ಯಾಚುಲರ್ ಪದವಿ ಹೊಂದಿರುವ ಯುವ ವೃತ್ತಿಪರರಿಗೆ ಯುಟಿಲಿಟಿ ಉದ್ಯೋಗಗಳು ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ತೈಲ, ಅನಿಲ ಮತ್ತು ಗಣಿಗಾರಿಕೆ, ರಿಯಲ್ ಎಸ್ಟೇಟ್, ಸಲಕರಣೆ ಬಾಡಿಗೆ ಸೇವೆಗೆ ಮತ್ತು ಗ್ರಾಹಕ ಸೇವೆಗಳ ಉದ್ಯಮಗಳಲ್ಲಿ ಕೂಡ ಫ್ರೆಶರ್​ ಪದವೀಧರರನ್ನು ನೇಮಕ ಮಾಡುತ್ತಿದೆ. ಇನ್ನು ಪದವಿ ಇಲ್ಲದ ಅಭ್ಯರ್ಥಿಗಳಿಗೂ ಶಿಕ್ಷಣ, ತಂತ್ರಜ್ಞಾನ ಮತ್ತು ಮಾಹಿತಿ ಹಾಗೂ ಮಾಧ್ಯಮ ವಲಯದಲ್ಲಿ ಸಾಕಷ್ಟು ಅವಕಾಶಗಳು ಲಭ್ಯವಾಗುತ್ತಿವೆ.

ಇಂದು ಅನೇಕ ಕೌಶಲ್ಯಗಳನ್ನು ಕೈಗಾರಿಕೆಗಳಾದ್ಯಂತ ವರ್ಗಾಯಿಸಬಹುದಾಗಿದೆ. ಎಐ ಅಭಿವೃದ್ಧಿಯು ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ಹೆಚ್ಚು ಟೆಕ್ ಸಂಬಂಧಿತ ಅವಕಾಶವನ್ನು ಸೃಷ್ಟಿಸುತ್ತಿದೆ. ಇದರಿಂದ ಈ ಕೌಶಲ್ಯ ಹೊಂದಿರುವ ಅನೇಕ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ವೃತ್ತಿಪರರ ಹುಡುಕಾಟಕ್ಕೆ ಕೂಡ ಪ್ರಮುಖ ಕಂಪನಿಗಳು ಮುಂದಾಗಿವೆ ಎಂದು ಲಿಂಕ್ಡ್​ಇನ್​ ಸಂಸ್ಥೆಯ ಭಾರತದ ಸೀನಿಯರ್​ ಮ್ಯಾನೇಜಿಂಗ್​​ ಎಡಿಟರ್​ ಆಗಿರುವ ನಿರಜಿತಾ ಬ್ಯಾನರ್ಜಿ ತಿಳಿಸಿದ್ದಾರೆ.

ಸಾಫ್ಟ್​ವೇರ್​ ಇಂಜಿನಿಯರ್ಸ್​ ಮತ್ತು ಡೇಟಾ ಅನಾಲಿಸ್ಟ್​ನಲ್ಲಿ ಸ್ನಾತಕೋತ್ತರ ಪದವೀಧರರ ನೇಮಕ ನಡೆಸಲಾಗುತ್ತಿದೆ. ಪದವಿ ಇಲ್ಲದವರೂ ಕೂಡ ಸಾಫ್ಟ್​​ವೇರ್​ ಇಂಜಿನಿಯರ್​, ಸೆಕ್ರೆಟರಿ ಮತ್ತು ಡಿಸೈನ್​ ಇಂಜಿನಿಯರಿಂಗ್​ನಲ್ಲಿ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ ಎಂದು ವರದಿ ವಿವರಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು; ಓದಿದ್ದು ನೆನಪಿನಲ್ಲಿ ಉಳಿಯಬೇಕು ಎಂದರೆ ಏನು ಮಾಡಬೇಕು, ಇಲ್ಲಿವೆ ಟಿಪ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.