ETV Bharat / education-and-career

NITK ಸುರತ್ಕಲ್ ನೇಮಕಾತಿ: ತಿಂಗಳಿಗೆ ₹70 ಸಾವಿರ ವೇತನ ನೀಡುವ ಹುದ್ದೆಗಳಿವು - NITK Recruitment - NITK RECRUITMENT

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

nitk-recruitment-for-short-term-contract-and-deputation-post
ಎನ್​ಐಟಿಕೆ ಸುರತ್ಕಲ್ (ETV Bharat)
author img

By ETV Bharat Karnataka Team

Published : Sep 4, 2024, 11:59 AM IST

ಬೆಂಗಳೂರು: ಮಂಗಳೂರಿನ ಸುರತ್ಕಲ್​ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ (ಎನ್​ಐಟಿಕೆ)ದಲ್ಲಿ ಖಾಲಿ ಇರುವ ಹಲವು ಗುತ್ತಿಗೆ ಮತ್ತು ಡೆಪ್ಯುಟೇಶನ್ (ನಿಯೋಜನೆ) ಹುದ್ದೆಗಳಿಗೆ ವಿಶೇಷ ಕೌಶಲ್ಯ ಹೊಂದಿರುವ ಸಮರ್ಥ ಮತ್ತು ಅನುಭವಿ ವೃತ್ತಿಪರರಿಂದ ಅರ್ಜಿ‌ ಆಹ್ವಾನಿಸಲಾಗಿದೆ.

ಒಪ್ಪಂದದ ಹುದ್ದೆಗಳು: ಖಾತೆ ಅಧಿಕಾರಿ [1], ಆಂತರಿಕ ಲೆಕ್ಕ ಪರಿಶೋಧನಾ ಅಧಿಕಾರಿ [1], ಕಾನೂನು ಅಧಿಕಾರಿ [1], ಪ್ಲೇಸ್‌ಮೆಂಟ್ ಅಧಿಕಾರಿ [1], ಸಾರ್ವಜನಿಕ ಸಂಪರ್ಕ ಅಧಿಕಾರಿ [1], ಗ್ರಾಫಿಕ್ಸ್ ಮತ್ತು ವೆಬ್ ಅಧಿಕಾರಿ [1], ವೈದ್ಯಕೀಯ ಅಧಿಕಾರಿಗಳು [2].

ಅಭ್ಯರ್ಥಿಗಳನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತಿದ್ದು, ಕಾರ್ಯಕ್ಷಮತೆ ಮತ್ತು ಸಂಸ್ಥೆಯ ಅಗತ್ಯತೆಗಳ ಆಧಾರದ ಮೇಲೆ ವಾರ್ಷಿಕವಾಗಿ ವಿಸ್ತರಿಸಬಹುದಾಗಿದೆ. ಈ ಹುದ್ದೆಯ ಗರಿಷ್ಠ ಅವಧಿ 3 ವರ್ಷ. ಆರಂಭಿಕ ಏಕೀಕೃತ ಮಾಸಿಕ ವೇತನ ₹70,000/-.

nitk-recruitment-for-short-term-contract-and-deputation-post
ಅಧಿಸೂಚನೆ (ಎನ್​ಐಟಿಕೆ ಜಾಲತಾಣ)

ಡೆಪ್ಯುಟೇಶನ್ ಹುದ್ದೆಗಳು: ಡೆಪ್ಯುಟಿ ರಿಜಿಸ್ಟ್ರಾರ್ [1 ಪೋಸ್ಟ್] ಮತ್ತು ಅಸಿಸ್ಟೆಂಟ್ ರಿಜಿಸ್ಟ್ರಾರ್ [2 ಪೋಸ್ಟ್‌ಗಳು]. ಈ ಹುದ್ದೆಗಳ ವೇತನ 7ನೇ ಸಿಪಿಸಿ ಮಾರ್ಗಸೂಚಿಗಳ ಪ್ರಕಾರ ಇರುತ್ತದೆ.

ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಪದವಿ ಜೊತೆಗೆ ಈಗಾಗಲೇ ಹುದ್ದೆ ನಿರ್ವಹಣೆ ಅನುಭವ ಹೊಂದಿರಬೇಕು. ಡೆಪ್ಯುಟೇಶನ್​ ಹುದ್ದೆಗಳಿಗೆ ಅಭ್ಯರ್ಥಿ ಕೇಂದ್ರ, ರಾಜ್ಯ ಸರ್ಕಾರ, ಕೇಂದ್ರದ ನಿಧಿಯ ತಾಂತ್ರಿಕ ಸಂಸ್ಥೆ, ಸರ್ಕಾರಿ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು.

ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಎನ್​ಐಟಿಕೆ ಅಧಿಕೃತ ವೆಬ್​ಸೈಟ್​ ಮೂಲಕ ಆನ್‌ಲೈನ್ ನಿಗದಿತ ಅರ್ಜಿ ಭರ್ತಿ ಮಾಡಿ, ಬಳಿಕ ಹಾರ್ಡ್​ ಕಾಪಿಯನ್ನು ಅಂಚೆ ಮೂಲಕ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಸೆಪ್ಟೆಂಬರ್​ 16. ಹಾರ್ಡ್ ಕಾಪಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 20. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು, ಕರ್ತವ್ಯಗಳ ಸ್ವರೂಪ ಮತ್ತು ಅರ್ಜಿ ಪ್ರಕ್ರಿಯೆ ಸೇರಿದಂತೆ ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ www.nitk.ac.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಈ ಕಾಲೇಜಿನಲ್ಲಿ ಓದಿದರೆ ಸರಾಸರಿ 23 ಲಕ್ಷ ರೂ. ಸಂಬಳ ಪಕ್ಕಾ: 22 ಮಂದಿಗೆ 1ಕೋಟಿಗಿಂತ ಹೆಚ್ಚು ಸ್ಯಾಲರಿ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.