ETV Bharat / education-and-career

NEET UG 2024 ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?: ಏನು ಮಾಡಬೇಕು, ಮಾಡಬಾರದು, ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ! - NTA has issued admit card

NEET UG 2024 ಪ್ರವೇಶ ಕಾರ್ಡ್ ಗಳನ್ನು ಆನ್​​​​ಲೈನ್​​ಲ್ಲಿ ಡೌನ್​​​​ ಮಾಡಲು ಅವಕಾಶ ನೀಡಲಾಗಿದ್ದು, ಸಂಬಂಧಪಟ್ಟವರು ತಮ್ಮ ಪ್ರವೇಶ ಪತ್ರಗಳನ್ನು ಮೇ 1 ರ ಮಧ್ಯರಾತ್ರಿಯಿಂದಲೇ ಡೌನ್​ಲೋಡ್​ ಮಾಡಿಕೊಳ್ಳಬಹುದು. ಮೇ 5 ರಂದು ನೀಟ್​ ಪರೀಕ್ಷೆ ನಡೆಯಲಿದೆ.

neet-ug-2024-nta-has-issued-admit-card-cum-hall-ticket
Etv BharaNEET UG 2024 ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?: ಏನು ಮಾಡಬೇಕು, ಮಾಡಬಾರದು, ಸಂಪೂರ್ಣ ಮಾಹಿತಿಗಾಗಿ ಇಲ್ಕಿ ಕ್ಲಿಕ್​ ಮಾಡಿt
author img

By ETV Bharat Karnataka Team

Published : May 2, 2024, 8:19 AM IST

Updated : May 2, 2024, 8:34 AM IST

ಕೋಟಾ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ NEET UG 2024ರ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಮೇ 1ರ ಮಧ್ಯರಾತ್ರಿಯ ನಂತರ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ಅವುಗಳನ್ನು NEET UGನ ಅಧಿಕೃತ ವೆಬ್‌ಸೈಟ್ https://neet.ntaonline.in/frontend/web/admitcard/index ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ಅವರು ಅಪ್ಲಿಕೇಶನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಭದ್ರತಾ ಪಿನ್ ಅನ್ನು ನಮೂದಿಸಬೇಕಾಗುತ್ತದೆ.

ಪ್ರವೇಶ ಪತ್ರದೊಂದಿಗೆ 23 ಮಾರ್ಗಸೂಚಿಗಳನ್ನು ಸಹ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ ಎಂದು ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ವೃತ್ತಿ ಕೌನ್ಸೆಲಿಂಗ್ ತಜ್ಞ ಪಾರಿಜಾತ್ ಮಿಶ್ರಾ ತಿಳಿಸಿದ್ದಾರೆ. ಈ ನಿಯಮಗಳನ್ನು ಅನುಸರಿಸಿದರೆ ಮಾತ್ರ ಕೇಂದ್ರದಲ್ಲಿ ಪ್ರವೇಶ ಸಿಗುತ್ತದೆ. ಪರೀಕ್ಷೆಯ ಸಮಯದಲ್ಲಿ ಮತ್ತು ನಂತರ ಪರೀಕ್ಷಾರ್ಥಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಹ ಪ್ರವೇಶ ಪತ್ರ ಒಳಗೊಂಡಿದೆ. ಪರೀಕ್ಷಾ ಸಮಯದಲ್ಲಿ ಡ್ರೆಸ್ ಕೋಡ್, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ಅಭ್ಯರ್ಥಿಗಳಿಗೆ ನೀಡಲಾಗಿರುವ ಈ ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ. NEET ಯುಜಿ ಪರೀಕ್ಷೆಯನ್ನು ಮೇ 5 ರಂದು ದೇಶ ಮತ್ತು ವಿದೇಶದ 569 ನಗರಗಳಲ್ಲಿ ಸುಮಾರು 5000 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

NEET UG 2024 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ:

  • ಮೊದಲಿಗೆ ನೀವು NTA ಅಧಿಕೃತ ವೆಬ್‌ಸೈಟ್ https://nta.ac.in/ ಗೆ ಭೇಟಿ ನೀಡಿ
  • NEET UG 2024 ಪ್ರವೇಶ ಕಾರ್ಡ್” ಲಿಂಕ್ ಅನ್ನು ಕ್ಲಿಕ್ ಮಾಡಿ
  • ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಭದ್ರತಾ ಪಿನ್ ಅನ್ನು ನಮೂದಿಸಿ

ಹಾಲ್​ಟಿಕೆಟ್​​ನಲ್ಲಿ ನೀಡಿರುವ ಮಾರ್ಗಸೂಚಿಗಳೇನು?

  • ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 11:00 ಗಂಟೆಯಿಂದಲೇ ಪ್ರವೇಶ ಪಡೆದುಕೊಳ್ಳಬೇಕು.
  • ಗೇಟ್ ಮುಚ್ಚುವ ಸಮಯದ ನಂತರ (ಅಪರಾಹ್ನ 01:30 PM) ಯಾವುದೇ ಅಭ್ಯರ್ಥಿಯನ್ನು ಕೇಂದ್ರಕ್ಕೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ.
  • ದೊಡ್ಡದಾದ ಗುಂಡಿಗಳು ಮತ್ತು ಬಿಗಿಯಾದ ಬಟ್ಟೆಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುಮತಿ ಇರುವುದಿಲ್ಲ. ಆಭರಣಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯೂ ಇದೆ.
  • ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪಡೆಯಬೇಕಾದರೆ, ಕುತ್ತಿಗೆಯಲ್ಲಿ ಯಾವುದೇ ರೀತಿಯ ಆಭರಣಗಳು ಇರಬಾರದು. ಇದಲ್ಲದೇ ಕೈಗೆ ಧರಿಸಿರುವ ಆಂಕ್ಲೆಟ್, ನೋಸ್ ಪಿನ್, ಇಯರ್ ರಿಂಗ್, ಬಳೆಗಳಿಗೂ ಅವಕಾಶವಿಲ್ಲ. ಯಾವುದೇ ಲೋಹದ ವಸ್ತುವನ್ನು ಸಾಗಿಸಲು ಅನುಮತಿಸಲಾಗುವುದಿಲ್ಲ.
  1. ಅಭ್ಯರ್ಥಿಗಳು ಪ್ರವೇಶದ ಸಮಯದಲ್ಲಿ ಐಡಿ ಪುರಾವೆ ಹೊಂದಿರಬೇಕಾಗುತ್ತದೆ. ಇದರಲ್ಲಿ ಆಧಾರ್ ಕಾರ್ಡ್ ಬಳಸಲು ಸಲಹೆ ನೀಡಲಾಗಿದೆ. ಇದಲ್ಲದೆ, ಪಡಿತರ ಚೀಟಿ, ಫೋಟೋ ಸಹಿತ ಆಧಾರ್ ನೋಂದಣಿ ಸಂಖ್ಯೆ, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, 12 ನೇ ಬೋರ್ಡ್ ಪ್ರವೇಶ ಕಾರ್ಡ್ ಅಥವಾ ನೋಂದಣಿ ಕಾರ್ಡ್ ಮತ್ತು ಪಾಸ್‌ಪೋರ್ಟ್ ಪ್ರವೇಶಕ್ಕೆ ಲಭ್ಯವಿರುತ್ತದೆ. ಈ ಎಲ್ಲಾ ಐಡಿಗಳು ಲಭ್ಯವಿಲ್ಲದಿದ್ದರೆ, ಮೂಲ ಶಾಲಾ ಗುರುತಿನ ಚೀಟಿಯ ಮೂಲಕವೂ ಪ್ರವೇಶವನ್ನು ನೀಡಲಾಗುತ್ತದೆ.
  • ಫೋಟೋ ಐಡಿಯನ್ನು ಮೂಲದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ದೃಢೀಕರಿಸಿದ ಜೆರಾಕ್ಸ್, ನಕಲಿ ಅಥವಾ ಮೊಬೈಲ್‌ನಲ್ಲಿ ಯಾವುದೇ ರೀತಿಯ ಫೋಟೋ ಐಡಿ ತೋರಿಸುವಂತಿಲ್ಲ. ಮೂಲ ಪ್ರತಿ ಅತ್ಯಗತ್ಯ
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್‌ಲೋಡ್ ಮಾಡಿದ ಒಂದು ಭಾವಚಿತ್ರ (ಪೋಸ್ಟ್‌ಕಾರ್ಡ್ ಮತ್ತು ಪಾಸ್‌ಪೋರ್ಟ್), ಅಂಡರ್‌ಟೇಕಿಂಗ್ ಫಾರ್ಮ್, ಪ್ರವೇಶ ಪತ್ರ (ಪರೀಕ್ಷೆಗೆ ಎರಡು ದಿನಗಳ ಮೊದಲು ನೀಡಲಾಗುತ್ತದೆ)ವನ್ನು ಮಾತ್ರವೇ ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.
  • ಅಭ್ಯರ್ಥಿಗಳು ಮೊಬೈಲ್, ಇಯರ್‌ಫೋನ್, ಬ್ಲೂಟೂತ್ ಮುಂತಾದ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಒಯ್ಯಲು ಯಾವುದೇ ಕಾರಣಕ್ಕೂ ಅನುಮತಿ ಇರುವುದಿಲ್ಲ.
  • ಪರೀಕ್ಷೆ ಮುಗಿಯುವ ಮೊದಲು ಯಾವುದೇ ಅಭ್ಯರ್ಥಿಯು ಪರೀಕ್ಷಾ ಕೊಠಡಿ ಅಥವಾ ಸಭಾಂಗಣದಿಂದ ಹೊರಬರಲು ಅನುಮತಿ ಇರುವುದಿಲ್ಲ
  • ಪರೀಕ್ಷೆಯ ದಿನದಂದು ಯಾವುದೇ ಸಮಸ್ಯೆ ಎದುರಾಗದಂತೆ ಅಭ್ಯರ್ಥಿಗಳು ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಲಾಗಿದೆ.
  • ಅಭ್ಯರ್ಥಿಯು ಪ್ರವೇಶ ಪತ್ರದಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ತನ್ನ ಸಹಿಯನ್ನು ಹಾಕಬೇಕು. ಅಷ್ಟೇ ಅಲ್ಲ ಎಲ್ಲಿಗೆ ಹೋದರೂ ಅಂಟಿಸಿರುವ ಫೋಟೋ ತೆಗೆಯಬೇಕು.
  • ಪ್ರವೇಶ ಪತ್ರದ ಜೊತೆಗೆ, ಅವರು ಸ್ವಯಂ ಘೋಷಣೆಯ ನಮೂನೆಯನ್ನು ಸಹ ಹೊಂದಿರಬೇಕು. ಅದರ ಮೇಲೆ ಪೋಸ್ಟ್ ಕಾರ್ಡ್ ಅಳತೆಯ ಫೋಟೋವನ್ನು ಅಂಟಿಸಿ ತೆಗೆಯಬೇಕು.
  • ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗೆ ಯಾವುದೇ ರಫ್ ಶೀಟ್ ನೀಡಲಾಗುವುದಿಲ್ಲ, ಅವರು ಪರೀಕ್ಷಾ ಪುಸ್ತಕದಲ್ಲಿ ಮಾತ್ರವೇ ಕಚ್ಚಾ ವರ್ಕ್​ ಮಾಡಿಕೊಳ್ಳಬೇಕಾಗುತ್ತದೆ.
  • ಪರೀಕ್ಷೆಯ ಸಮಯದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುವುದು ಮತ್ತು ಜಾಮರ್‌ಗಳ ಮೂಲಕ ನೆಟ್‌ವರ್ಕ್‌ ಮೇಲೆ ಹದ್ದಿನ ಕಣ್ಣಿಡಲಾಗುವುದು
  • ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಯು ಒಎಂಆರ್ ಶೀಟ್‌ನ ಮೂಲ ಮತ್ತು ಕಛೇರಿ ಪ್ರತಿಯನ್ನು ಪರೀಕ್ಷಕರಿಗೆ ಹಸ್ತಾಂತರಿಸಬೇಕು, ಆದರೆ, ಅವನು ತನ್ನೊಂದಿಗೆ ಪರೀಕ್ಷಾ ಪುಸ್ತಕವನ್ನು ತರಬಹುದು.
  • ಪರೀಕ್ಷೆಯ ಮೊದಲ ಗಂಟೆ ಮತ್ತು ಕೊನೆಯ ಅರ್ಧ ಗಂಟೆಯಲ್ಲಿ ವಿದ್ಯಾರ್ಥಿಗಳಿಗೆ ಬಯೋ ಬ್ರೇಕ್ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ.
  • ವಿದ್ಯಾರ್ಥಿಯು ಬಯೋ ಬ್ರೇಕ್ ಅಥವಾ ಶೌಚಾಲಯಕ್ಕೆ ಹೋದರೆ ಬಯೋಮೆಟ್ರಿಕ್ ಹಾಜರಾತಿ ಮತ್ತು ತಪಾಸಣೆಗೆ ಒಳಗಾಗಬೇಕಾಗುತ್ತದೆ.
  • ಅಭ್ಯರ್ಥಿಯು ಅನ್ಯಾಯದ ರೀತಿಯಲ್ಲಿ ಸಿಕ್ಕಿಬಿದ್ದರೆ, ಅವರನ್ನು ಪರೀಕ್ಷೆಯಿಂದ ಹೊರಹಾಕಲಾಗುವುದು ಮತ್ತು ಕಾನೂನು ಕ್ರಮವನ್ನೂ ತೆಗೆದುಕೊಳ್ಳಲಾಗುವುದು.
  • ಅನ್ಯಾಯದ ಅಭ್ಯಾಸಗಳು ಮತ್ತು ವಂಚನೆಯ ಪ್ರಕರಣಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಆಧಾರಿತ ನೈಜ - ಸಮಯದ ವಿಶ್ಲೇಷಣಾತ್ಮಕ ಸಾಧನಗಳು ಮತ್ತು ತಂತ್ರಜ್ಞಾನವನ್ನು ಸ್ಥಾಪಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದೆ.
  • ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಸಿಸಿಟಿವಿ ರೆಕಾರ್ಡಿಂಗ್‌ಗಳ ವಿಶ್ಲೇಷಣೆ ಮತ್ತು ಮೇಲ್ವಿಚಾರಣೆಯನ್ನು ಸಹ ಮಾಡಲಾಗುತ್ತದೆ. ಯಾವುದೇ ಅಕ್ರಮಗಳಿದ್ದಲ್ಲಿ ಇವುಗಳನ್ನು ಸಾಕ್ಷ್ಯವಾಗಿಯೂ ಬಳಸಲಾಗುತ್ತದೆ.
  • ಅಭ್ಯರ್ಥಿಗಳು ವೆಬ್‌ಸೈಟ್ ಅನ್ನು ನಿರಂತರವಾಗಿ ಪರಿಶೀಲಿಸಲು ಸೂಚಿಸಲಾಗಿದೆ. ಅವರ ಮೇಲ್ ಮತ್ತು ಎಸ್‌ಎಂಎಸ್‌ನಲ್ಲಿಯೂ ಮಾಹಿತಿ ನೀಡಲಾಗುತ್ತದೆ.
  • ಯಾವುದೇ ರೀತಿಯ ಮಾಹಿತಿಗಾಗಿ, ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕೃತ ಮೇಲ್ ಐಡಿಯನ್ನು ಸಂಪರ್ಕಿಸಬಹುದು.

ಇದನ್ನು ಓದಿ: ನಾಳೆಯಿಂದ ಅಮೆಜಾನ್​​​ ಸಮ್ಮರ್​ ಸೇಲ್​​ ಧಮಾಕಾ: ಈ ಎಲ್ಲ ವಸ್ತುಗಳ ಮೇಲೆ ಭಾರಿ ರಿಯಾಯಿತಿ, ಫ್ರೈಮ್​​ ಗ್ರಾಹಕರಿಗೆ ಡಬಲ್​ ಲಾಭ - deals discounts and offers

Last Updated : May 2, 2024, 8:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.