ETV Bharat / education-and-career

ರಕ್ಷಣಾ ಇಲಾಖೆಯಲ್ಲಿ ನೇಮಕಾತಿ; ಎಸ್​ಎಸ್​ಎಲ್​ಸಿ ಪಾಸಾದವರಿಗೆ ಅವಕಾಶ

ರಕ್ಷಣಾ ಇಲಾಖೆಯಲ್ಲಿ 71 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.

Ministry of Defence job notification for various posts for 10th passed

author img

By ETV Bharat Karnataka Team

Published : Jan 24, 2024, 1:01 PM IST

ಬೆಂಗಳೂರು: ರಕ್ಷಣಾ ಇಲಾಖೆಯಿಂದ ದಕ್ಷಿಣ ವಲಯದ ಎಎಸ್​ಸಿ ಸೆಂಟರ್​ನಲ್ಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 71 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ವಿವರ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಎಎಸ್​ಸಿ ಕೇಂದ್ರದಲ್ಲಿರುವ ಹುದ್ದೆಗಳ ವಿವರ ಹೀಗಿದೆ.

ಹುದ್ದೆ ವಿವರಹುದ್ದೆ ಸಂಖ್ಯೆ
ಕುಕ್3
ಸಿವಿಲಿಯನ್​ ಕ್ಯಾಟರಿಂಗ್​ ಇನ್ಸ್​ಟ್ರಕ್ಟರ್​​3
ಎಂಟಿಎಸ್​ (ಚೌಕಿದಾರ)2
ಟ್ರೇಡ್ಸ್​​ಮ್ಯಾನ್​​ ಮೇಟ್​ (ಲೇಬರ್​ ) 8
ವೆಹಿಕಲ್​ ಮೆಕಾನಿಕ್​1
ಸಿವಿಲಿಯನ್​ ಮೋಟರ್​ ಡ್ರೈವರ್9
ಕ್ಲೀನರ್4
ಲೀಡಿಂಗ್​ ಫೈರ್​ಮ್ಯಾನ್​1
ಫೈರ್​ಮ್ಯಾನ್30
ಫೈರ್​ ಇಂಜಿನ್​ ಡ್ರೈವರ್10

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಮತ್ತು ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮೊ ಪದವಿಯನ್ನು ಹೊಂದಿರಬೇಕು.

ಕುಕ್​ ಮತ್ತು ಡ್ರೈವರ್​, ವೆಹಿಕಲ್​ ಮೆಕಾನಿಕ್​, ಕ್ಲೀನರ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿರಬೇಕು.

ವೇತನ: ಅಭ್ಯರ್ಥಿಗಳಿಗೆ ಕೆಳಗಿನ ಹುದ್ದೆಗೆ 19,900 -21,700 ರೂ. ಮಾಸಿಕ ವೇತನ ನಿಗದಿಸಲಾಗಿದೆ.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 25 ವರ್ಷದ ವಯೋಮಿತಿಯನ್ನು ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ. ದೈಹಿಕ ಸಾಮರ್ಥ್ಯ ಪರೀಕ್ಷೆ, ಮತ್ತು ವೈದ್ಯಕೀಯ ತಪಾಸಣೆ, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ನಡೆಸಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ದಾಖಲೆ ಸೇರಿದಂತೆ ಪ್ರಮುಖ ದಾಖಲಾತಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕಿದೆ.

ದಿ ಪ್ರೆಸಿಡೆಂಟ್​ ಆಫೀಸರ್​, ನಾಗರಿಕ ನೇರ ನೇಮಕಾತಿ ಮಂಡಳಿ, ಸಿಎಚ್​ಕ್ಯೂಮ ಎಎಸ್​ಸಿ ಸೆಂಟರ್​ (ದಕ್ಷಿಣ), 2 ಎಟಿಸಿ, ಅಗರಮ್​ ಅಂಚೆ, ಬೆಂಗಳೂರು 7.

ಈ ಹುದ್ದೆಗೆ ಜನವರಿ 20 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 2 ಆಗಿದೆ.

ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ, ಇತರೆ ವಿವರಗಳಿಗೆ mod.gov.inಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಹಾವೇರಿ: 152 ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.