ETV Bharat / education-and-career

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 152 ಹುದ್ದೆಗಳ ನೇರ ನೇಮಕಾತಿಗೆ ಕ್ರಮ - khandre Says about Recruitment

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಈ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

minister-eshwar-khandre-says-about-karnataka-state-pollution-control-board-recruitment

author img

By ETV Bharat Karnataka Team

Published : Mar 14, 2024, 12:01 PM IST

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ 152 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.

ಮಂಡಳಿಗೆ ಮಂಜೂರಾಗಿರುವ 253 ಹುದ್ದೆಗಳ ಪೈಕಿ 152 ಹುದ್ದೆಗಳು ತಾಂತ್ರಿಕ, ಪ್ರಯೋಗಶಾಲೆ ಮತ್ತು ಆಡಳಿತ ವಿಭಾಗಗಳಲ್ಲಿ ಖಾಲಿ ಇದ್ದು, 152 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದೆ.

ಈ ಹಿಂದೆ ಮಂಡಳಿಯಲ್ಲಿ 153 ಖಾಲಿ ಹುದ್ದೆಗಳ ಭರ್ತಿಗೆ 2010ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಕಾರಣಾಂತರದಿಂದ ಹಲವು ಹುದ್ದೆಗಳು ಭರ್ತಿ ಆಗದೆ ಹಾಗೆ ಉಳಿದಿವೆ. ಈ ಹುದ್ದೆಗಳೂ ಸೇರಿದಂತೆ ಪ್ರಸ್ತುತ ಮಂಡಳಿಯಲ್ಲಿ ರಾಜ್ಯ ವ್ಯಾಪ್ತಿಯಲ್ಲಿರುವ ಉಳಿಕೆ ವೃಂದ ಹಾಗೂ ರಾಜ್ಯವ್ಯಾಪಿ ಸ್ಥಳೀಯ ವೃಂದದಡಿಯಲ್ಲಿ ಖಾಲಿಯಿರುವ ಹುದ್ದೆಗಳ ಪೈಕಿ ಬಹುತೇಕ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯವ್ಯಾಪಿ ಉಳಿಕೆ ವೃಂದದ 146 ಮತ್ತು ರಾಜ್ಯ ವ್ಯಾಪಿ ಸ್ಥಳೀಯ ವೃಂದದ 6 ಸೇರಿ 152 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ ಅನುಮತಿಸಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಹೀಗಿದೆ ಹುದ್ದೆ ವಿವರ: ಪ್ರಸ್ತುತ, ಮಂಡಳಿಯಲ್ಲಿ ಒಟ್ಟಾರೆ ಖಾಲಿಯಿರುವ ಒಟ್ಟು 253 ಹುದ್ದೆಗಳ ಪೈಕಿ ಸರ್ಕಾರದಿಂದ ಅನುಮತಿಸಿರುವ ಒಟ್ಟು 152 ಹುದ್ದೆಗಳನ್ನು ಭರ್ತಿ ಮಾಡಿದ್ದಲ್ಲಿ, ಶೇಕಡಾ 60 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ. ಇದರೊಂದಿಗೆ, ಉಳಿದ 23 ಹುದ್ದೆಗಳನ್ನು ಬ್ಯಾಕ್‌ ಲಾಗ್ ಎಂದು ಪರಿಗಣಿಸಿದ್ದಲ್ಲಿ, ಸದರಿ 152 ಹುದ್ದೆಗಳೊಂದಿಗೆ 23 ಹುದ್ದೆಗಳು ಸಹ ಸೇರಿಸಿ ಒಟ್ಟು 175 ಹುದ್ದೆಗಳನ್ನು ಭರ್ತಿ ಮಾಡಿದಾಗ, ಶೇಕಡ 69 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿದಂತಾಗುತ್ತದೆ ಎಂದು ಸಚಿವರು ವಿವರಿಸಿದರು.

ಇದೇ ವೇಳೆ ಅವರು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶಕ್ತಿ ತುಂಬಲು ನಿರ್ಧರಿಸಲಾಗಿದೆ ಎಂದರು.

ಇದನ್ನೂ ಓದಿ: UPSC ನೇಮಕಾತಿ: 323 ಆಪ್ತ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಹರು ಇಂದೇ ಅಪ್ಲೈ ಮಾಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.