ETV Bharat / education-and-career

KPTCL ನೇಮಕಾತಿ: 2,975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - KPTCL JOB NOTIFICATION

ಕಿರಿಯ ಸ್ಟೇಷನ್​ ಪರಿಚಾರಕರು ಹಾಗೂ ಕಿರಿಯ ಪವರ್‌ಮ್ಯಾನ್​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

KPTCL job Notification For 2975 post
ನೇಮಕಾತಿ (ಈಟಿವಿ ಭಾರತ್​)
author img

By ETV Bharat Karnataka Team

Published : Oct 15, 2024, 2:54 PM IST

ಬೆಂಗಳೂರು: ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಸೇರಿದಂತೆ ವಿವಿಧ ನಿಗಮಗಳಲ್ಲಿರುವ 2,975 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕಿರಿಯ ಸ್ಟೇಷನ್​ ಪರಿಚಾರಕ ಹಾಗೂ ಕಿರಿಯ ಪವರ್‌ಮ್ಯಾನ್​ ಹುದ್ದೆಗಳ ನೇಮಕಾತಿ ನಡೆಯಲಿದೆ.

ಹುದ್ದೆಗಳ ವಿವರ: ಒಟ್ಟು 2,975 ಹುದ್ದೆಗಳಿದ್ದು, 215 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ.

ಕಿರಿಯ ಸ್ಟೇಷನ್​ ಪರಿಚಾರಕ ಹುದ್ದೆಗಳು - 433

ಕಿರಿಯ ಪವರ್‌ಮ್ಯಾನ್‌​ - 2547

ಯಾವ್ಯಾವ ನಿಗಮದಲ್ಲಿ ಎಷ್ಟು ಹುದ್ದೆಗಳಿವೆ?

ನಿಗಮಕಿರಿಯ ಸ್ಟೇಷನ್​ ಪರಿಚಾರಕರುಕಿರಿಯ ಪವರ್​ ಮ್ಯಾನ್
ಕೆಪಿಟಿಸಿಎಲ್​ (ಕಲ್ಯಾಣ ಕರ್ನಾಟಕ ಸೇರಿದಂತೆ) 475 48
ಬೆಸ್ಕಾಂ (ಕಲ್ಯಾಣ ಕರ್ನಾಟಕ ಸೇರಿದಂತೆ) 640295
ಜೆಸ್ಕಾಂ (ಕಲ್ಯಾಣ ಕರ್ನಾಟಕ ಸೇರಿದಂತೆ)100 99
ಸೆಸ್ಕ್​ ಮೈಸೂರು270 39
ಮೆಸ್ಕಾಂ 415 34
ಹೆಸ್ಕಾಂ500 60

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ.

ವಯೋಮಿತಿ: ಕನಿಷ್ಠ 18, ಗರಿಷ್ಠ 35. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ ಮತ್ತು ಪ.ಪಂ ಹಾಗೂ ಪ್ರವರ್ಗ ಅಭ್ಯರ್ಥಿಗಳಿಗೆ 40 ವರ್ಷ.

KPTCL job Notification For 2975 post
ಅಧಿಸೂಚನೆ (KPTCL)

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 378, ಸಾಮಾನ್ಯ, ಪ್ರವರ್ಗ 1, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 614 ರೂ ಅರ್ಜಿ ಶುಲ್ಕವಿದೆ.

ಆಯ್ಕೆ ಪ್ರಕ್ರಿಯೆ: ಮೆರಿಟ್​, ಸಹನ ಶಕ್ತಿ ಪರಿಶೀಲನೆ ಮೂಲಕ ಆಯ್ಕೆ ನಡೆಯುತ್ತದೆ. ಅಕ್ಟೋಬರ್​ 21ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ನವೆಂಬರ್ 20 ಕಡೇಯ ದಿನ. ಅರ್ಜಿ ಶುಲ್ಕ ಪಾವತಿಗೆ ನವೆಂಬರ್​ 25 ಕಡೇಯ ದಿನ.

ವಿಶೇಷ ಸೂಚನೆ: ಅಭ್ಯರ್ಥಿಗಳು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ ಅಥವಾ ವಿದ್ಯುತ್​ ಸರಬರಾಜು ಕಂಪನಿಯಲ್ಲಿ ಯಾವುದಾದರು ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಬೇಕು. ಬೆಸ್ಕಾಂ, ಮೆಸ್ಕಾಂ, ಸೆಸ್ಕ್​, ಹೆಸ್ಕಾಂ ಮತ್ತು ಜೆಸ್ಕಾಂನ ಅಧಿಕೃತ ತಾಣದಲ್ಲಿ ಅರ್ಜಿ ಸಲ್ಲಿಸಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗೆ kptcl.karnataka.gov.inಗೆ ಭೇಟಿ ನೀಡಿ.

ಇದನ್ನೂ ಓದಿ: ವಿಜಯಪುರ: ಅಂಗನವಾಡಿ ಕಾರ್ಯಕರ್ತರು, ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.