ETV Bharat / education-and-career

ಎಚ್​ಎಎಲ್​ನಲ್ಲಿ ಟ್ರೇಡ್ ಅಪ್ರೆಂಟಿಸ್​ ಹುದ್ದೆ: ITI ಆದವರಿಗೆ ಅವಕಾಶ - HAL Trade Apprenticeship

ಹುದ್ದೆಯ ಅವಧಿಯಲ್ಲಿ ಅಭ್ಯರ್ಥಿಗಳು ಮಾಸಿಕ ₹7,000 ಯಿಂದ 7,700 ಗೌರವಧನ ಪಡೆಯಲಿದ್ದಾರೆ.

HAL Invited Application for Trade apprenticeship for Karnataka Students
ಎಚ್​ಎಎಲ್​ (HAL Website)
author img

By ETV Bharat Karnataka Team

Published : Sep 13, 2024, 1:07 PM IST

ಬೆಂಗಳೂರು: ಹಿಂದೂಸ್ತಾನ್​ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್​)ನಲ್ಲಿ ಟ್ರೇಡ್​ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಗೌರವಧನದ ಮೇಲೆ 12 ತಿಂಗಳ ಅವಧಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳನ್ನು ಕೇವಲ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಹುದ್ದೆಗಳು: ಫಿಟ್ಟರ್ ಟರ್ನರ್​, ಮೆಕಾನಿಸ್ಟ್​​, ಎಲೆಕ್ಟ್ರಿಷಿಯನ್​, ವೆಲ್ಡರ್​, ಕೊಪಾ, ಕಾರ್ಪೆಂಟ್​, ಶೀಟ್​ ಮೆಟಲ್​ ವರ್ಕರ್​, ಟೂಲ್​ ಮತ್ತು ಡೈ ವರ್ಕರ್​​.

ವಿದ್ಯಾರ್ಹತೆ: ಅಧಿಕೃತ ಸಂಸ್ಥೆಗಳಿಂದ ಐಟಿಐ ಪೂರ್ಣಗೊಳಿಸಿರಬೇಕು.

ವೇತನ: ಮಾಸಿಕ 7,000 ಯಿಂದ 7,700 ರೂ ಗೌರವಧನ.

ಆಯ್ಕೆ: ಮೆರಿಟ್​ ಆಧಾರದ ಮೇಲೆ.

ಅರ್ಜಿ ಸಲ್ಲಿಕೆ: ಐಟಿಐ ಮುಗಿಸಿರುವ ಅಭ್ಯರ್ಥಿಗಳು ಎನ್​ಸಿವಿಟಿ ಪೋರ್ಟಲ್​ನಲ್ಲಿ ನೋಂದಣಿ ಮಾಡಿರಬೇಕು. ಬಳಿಕ ಅಧಿಸೂಚನೆಯಲ್ಲಿ ನೀಡಲಾದ ನಿಗದಿತ ಅರ್ಜಿಯ ಜೊತೆಗೆ ಅಗತ್ಯ ದಾಖಲಾತಿ ಮತ್ತು ಪ್ರಮಾಣ ಪತ್ರದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ.

ಟೆಕ್ನಿಕಲ್​ ಟ್ರೈನಿಂಗ್​ ಇನ್ಸುಟಿಟ್ಯೂಟ್​​, ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​, ಸುರಂಜನ್​ ದಾಸ್​ ರಸ್ತೆ, ವಿಮಾನಪುರ ಪೋಸ್ಟ್​, ಬೆಂಗಳೂರು -560017

ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಅಕ್ಟೋಬರ್​ 19. ಈ ಕುರಿತು ಹೆಚ್ಚಿನ ಮಾಹಿತಿಗೆ hal-india.co.in ಭೇಟಿ ನೀಡಿ.

HAL Invited Application for Trade apprenticeship for Karnataka Students
ಅಧಿಸೂಚನೆ (HAL)

BHEL ಅಪ್ರೆಂಟಿಸ್​ ಹುದ್ದೆ: ಭಾರತ್​ ಹೆವಿ ಎಲೆಕ್ಟ್ರಿಕಲ್ಸ್​ ಲಿಮಿಡೆಟ್​ನಲ್ಲಿ ಖಾಲಿ ಇರುವ 100 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ ಕಡೇಯ ದಿನ. ಫಿಟ್ಟರ್ -20, ಮೆಕಾನಿಸ್ಟ್​​ -40, ಟರ್ನರ್​ -26, ವೆಲ್ಡರ್​ 14 ಹುದ್ದೆಗಳಿವೆ.

ಐಟಿಐ ಪದವಿ ಪೂರ್ಣಗೊಳಿಸಿರುವ ಕನಿಷ್ಠ 18, ಗರಿಷ್ಠ 27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಸೆಪ್ಟೆಂಬರ್​ 14. ಈ ಕುರಿತು ಹೆಚ್ಚಿನ ಮಾಹಿತಿಗೆ bhel.com ಭೇಟಿ ನೀಡಿ.

ಇದನ್ನೂ ಓದಿ: ಜೆಸ್ಕಾಂನಲ್ಲಿ 221 ಅಪ್ರೆಂಟಿಸ್​ ಹುದ್ದೆ; ITI ಆಗಿದ್ರೆ ಅರ್ಜಿ ಸಲ್ಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.