ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಐಐಟಿ, ಎನ್ಐಟಿ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಸ್ಥಳೀಯ ಶಿಕ್ಷಣ ಸಂಸ್ಥೆಗಳು (ಆರ್ಐಇ) ಸೇರಿದಂತೆ ದೇಶದ 64 ಸಂಸ್ಥೆಗಳಲ್ಲಿ ನಾಲ್ಕು ವರ್ಷದ ಸಮಗ್ರ ಶಿಕ್ಷಕರ ತರಬೇತಿ ಕೋರ್ಸ್‌ಗಳನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಶಿಕ್ಷಣ ತಜ್ಞ ದೇವ್ ಶರ್ಮಾ, "ಎನ್ಇಪಿ 2020 ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಅನೇಕ ಬದಲಾವಣೆಗಳನ್ನು ತಂದಿದೆ. ಇದರಲ್ಲಿ ಐಪಿಇಪಿ ಕೂಡ ಒಂದು" ಎಂದರು.
ಯಾರು ಪರೀಕ್ಷೆ ಬರೆಯಬಹುದು?: ಐಟಿಇಪಿಯನ್ನು ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (ಎನ್ಸಿಇಟಿ) ಮೂಲಕ ಎನ್ಟಿಎ ನಡೆಸುತ್ತದೆ. ಎನ್ಸಿಇಟಿ-2024 ಅನ್ನು ಜೂನ್ 12ರಂದು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ. ಅರ್ಜಿ ಸಲ್ಲಿಸಲು ಏಪ್ರಿಲ್ 30 ಕಡೇ ದಿನಾಂಕ. 12ನೇ ತರಗತಿ ಅಥವಾ ಪಿಯುಸಿ ಪಾಸ್ ಆಗಿರುವ ಅಥವಾ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಪರೀಕ್ಷೆ ಎದುರಿಸಬಹುದು. ಬಹು ಆಯ್ಕೆ ಪ್ರಶ್ನೆಗಳು (ಎಂಸಿಕ್ಯೂ) ಮಾದರಿಯಲ್ಲಿ 3 ಗಂಟೆ ಪರೀಕ್ಷೆ ನಡೆಯಲಿದೆ.
ಪ್ರಶ್ನೆ ಪತ್ರಿಕೆ: ಪ್ರಶ್ನೆ ಪತ್ರಿಕೆಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಭಾಷೆ, ವಿಷಯ, ಟೀಚಿಂಗ್ ಆಪ್ಟಿಟ್ಯೂಡ್ ಮತ್ತು ಸಾಮಾನ್ಯ ಪರೀಕ್ಷೆ.
ಒಟ್ಟು 180 ಪ್ರಶ್ನೆಗಳಲ್ಲಿ 46 ಭಾಷೆ, 84 ವಿಷಯ, 38 ಸಾಮಾನ್ಯ ಪರೀಕ್ಷೆ ಮತ್ತು 23 ಟೀಚಿಂಗ್ ಅಪ್ಟಿಟ್ಯೂಡ್ ಪ್ರಶ್ನೆಗಳಿರಲಿವೆ. ಅಭ್ಯರ್ಥಿ ಕನಿಷ್ಠ 160 ಪ್ರಶ್ನೆಗಳನ್ನು ಎದುರಿಸಬೇಕು.
ಲಭ್ಯವಿರುವ ಸೀಟ್‌ಗಳು: 64 ಸಂಸ್ಥೆಗಳಲ್ಲಿ 4,400 ಸೀಟ್ಗಳಿದ್ದು, 200 ಸೀಟ್‌ಗಳು ಖರಗ್ಪುರ್, ಭುವನೇಶ್ವರ್, ಜೋದ್ಪುರ್ ಮತ್ತು ರೊಪರ್ ಐಐಟಿಯಲ್ಲಿ ಲಭ್ಯ. ಇಲ್ಲಿ ಬಿಎಸ್ಸಿ, ಬಿಎಡ್ ಕೋರ್ಸ್‌ಗಳಿಗೆ ತರಬೇತಿ ಸಿಗಲಿದೆ. ಇನ್ನು 300 ಸೀಟ್‌ಗಳು ಆರ್ಎನ್ಐಟಿಗಳಲ್ಲಿ ಲಭ್ಯವಿದೆ. ಇಲ್ಲಿ ತಿರುಚಿರಾಪಳ್ಳಿಯಲ್ಲಿ ಮಾತ್ರ ಬಿಎ ಬಿಎಡ್ ತರಬೇತಿ ಸಿಗಲಿದೆ.
ಹರಿಯಾಣ ಸೆಂಟ್ರಲ್ ಯೂನಿವರ್ಸಿಟಿ, ಕಾಶ್ಮೀರ್ ಸೆಂಟ್ರಲ್ ಯೂನಿವರ್ಸಿಟಿ, ರಾಜಸ್ಥಾನ್, ಕೇರಳ, ತಮಿಳುನಾಡು, ಪಂಜಾಬ್ ಸೆಂಟ್ರಲ್ ಯೂನಿವರ್ಸಿಟಿಯಲ್ಲೂ ಈ ಕೋರ್ಸ್ ಲಭ್ಯವಿದ್ದು, ಇಲ್ಲಿ ಒಟ್ಟು 250 ಸೀಟುಗಳಿವೆ.
ಇದನ್ನೂ ಓದಿ: ಭಾರತದ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಿವು; ಇದನ್ನು ಪಾಸ್ ಮಾಡುವವರ ಸಂಖ್ಯೆ ಎಷ್ಟು ಗೊತ್ತೇ?