ETV Bharat / education-and-career

UG NEET: ಮಾಪ್ ಅಪ್ ಸುತ್ತಿನ ಅರ್ಹತೆಗೆ ಅರ್ಜಿ ಸಲ್ಲಿಸಲು ಅ.23ರವರೆಗೆ ಅವಕಾಶ - UG NEET MOP UP ROUND

ಯುಜಿ ದಂತ ವೈದ್ಯಕೀಯ - ಆಯುಷ್ ಕೋರ್ಸ್​ ಮಾಪ್ ಅಪ್ ಸುತ್ತಿಗಾಗಿ ಅರ್ಜಿ ಸಲ್ಲಿಸುವ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

KEA
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ETV Bharat)
author img

By ETV Bharat Karnataka Team

Published : Oct 21, 2024, 7:48 AM IST

ಬೆಂಗಳೂರು: ಪ್ರಸಕ್ತ 2024ರ ಯುಜಿ ವೈದ್ಯಕೀಯ ಸ್ಟ್ರೇ ವೇಕೆನ್ಸಿ ಸುತ್ತಿಗೆ ಲಭ್ಯವಾಗುವ ಸೀಟುಗಳಿಗೆ ಹಾಗೂ ಯುಜಿ ದಂತ ವೈದ್ಯಕೀಯ - ಆಯುಷ್ ಕೋರ್ಸುಗಳ ಪ್ರವೇಶಾತಿಗಾಗಿ ಮಾಪ್ ಅಪ್ ಸುತ್ತಿಗೆ ಅರ್ಹತೆ ಪಡೆಯಲು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್​​ 21ರಿಂದ 23ರವರೆಗೆ ಅವಕಾಶ ನೀಡಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಾಹಿತಿ ನೀಡಿದ್ದು, ''ಈ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಆನ್​ಲೈನ್ ಲಿಂಕ್ ತೆರೆಯಲಾಗಿದೆ. ಈವರೆಗೆ ಯುಜಿನೀಟ್ - 2024ಕ್ಕೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಮಾಪ್ ಅಪ್ ಸುತ್ತಿನಲ್ಲಿ ಲಭ್ಯವಾಗುವ ಸೀಟುಗಳಿಗೆ ಮಾತ್ರ ಇತರ ಅರ್ಹ ಅಭ್ಯರ್ಥಿಗಳೊಂದಿಗೆ ಭಾಗವಹಿಸಬಹುದು'' ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್​ಸೈಟ್ http://kea.kar.nic.in ನಲ್ಲಿ ನಿಗದಿತ ಲಿಂಕ್ ಆಯ್ಕೆ ಮಾಡಿಕೊಂಡು ಅಕ್ಟೋಬರ್​​ 21ರಿಂದ 23ರ ರಾತ್ರಿ 11.59ರ ವರೆಗೆ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಅವಕಾಶವಿದೆ. ಈಗಾಗಲೇ ನೋಂದಾಯಿಸಿರುವ ಆದರೆ, ಆನ್​ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸದೇ ಇರುವ ಅಭ್ಯರ್ಥಿಗಳು ಸಹ ಅರ್ಜಿಯನ್ನು ಪೂರ್ಣವಾಗಿ ಸಲ್ಲಿಸಬಹುದಾಗಿದೆ.

ಅರ್ಹತಾ ಮಾನದಂಡಗಳು ಯಾವುವು?: ಯುಜಿನೀಟ್-2024ರಲ್ಲಿ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಮಾತ್ರ ಲಭ್ಯವಿರುವ ಸೀಟುಗಳಿಗೆ ಪ್ರಾಧಿಕಾರದ ಮೂಲಕ ಪ್ರವೇಶಕ್ಕೆ ನೋಂದಣಿ ಮಾಡಿಕೊಳ್ಳಲು ಅರ್ಹರಿರುತ್ತಾರೆ. ಪ.ಜಾ./ಪ.ಪಂ./ಒಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಹೆಚ್ಚಿನ ವಿವರಕ್ಕೆ ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

ದಾಖಲೆ ಸಲ್ಲಿಸಲು ಕೆಇಎಗೆ ಬರುವ ಅಗತ್ಯ ಇಲ್ಲ: ಯುಜಿನೀಟ್-24 ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೇ ಹೋಗಿ ವರದಿ ಮಾಡಿಕೊಳ್ಳಬೇಕು. ಅಂತಹವರು ದಾಖಲೆ ಸಲ್ಲಿಸಲು ಅಕ್ಟೋಬರ್​​ 21ರಂದು ಕೆಇಎ ಕಚೇರಿಗೆ ಬರುವ ಅಗತ್ಯ ಇಲ್ಲ ಎಂದು ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಶುಲ್ಕ ಪಾವತಿ ಮಾಡುವುದಕ್ಕೆ ಮತ್ತು ಕಾಲೇಜಿಗೆ ದಾಖಲೆ ಸಲ್ಲಿಸಿ ವರದಿ‌ ಮಾಡಿಕೊಳ್ಳಲು ಅ.22ರವರೆಗೂ ಅವಕಾಶ‌ವಿದೆ ಎಂದಿದ್ದಾರೆ. ಈ ಮುಂಚೆ ಮೂಲ ದಾಖಲೆಗಳನ್ನು ಸಲ್ಲಿಸಲು ಕೆಇಎಗೆ ಬರುವಂತೆ ಸೂಚಿಸಿದ್ದನ್ನು ಸ್ಮರಿಸಬಹುದು.

ಇದನ್ನೂ ಓದಿ: ಇಂಜಿನಿಯರಿಂಗ್​ ಸೇವಾ ಪರೀಕ್ಷೆ ಮುಂದೂಡಿದ ಯುಪಿಎಸ್​ಸಿ: ಕಾರಣ ಇದು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.