ETV Bharat / education-and-career

BSFನಲ್ಲಿ ನೇಮಕಾತಿ; ಹೆಡ್​ ಕಾನ್ಸ್​​ಟೇಬಲ್​, ಸಹಾಯಕ ಸಬ್​ ಇನ್ಸ್​​ಪೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನ - Border Security Force Recruitment - BORDER SECURITY FORCE RECRUITMENT

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಜೂನ್​ 9ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 8 ಆಗಿದೆ.

bsf-notification-for-head-constable-and-sub-inspector-post
BSFನಲ್ಲಿ ನೇಮಕಾತಿ (ಸಾಂದರ್ಭಿಕ ಚಿತ್ರ)
author img

By ETV Bharat Karnataka Team

Published : Jun 5, 2024, 5:50 PM IST

ಬೆಂಗಳೂರು: ಗಡಿ ಭದ್ರತಾ ಪಡೆಯಲ್ಲಿನ ಸಹಾಯಕ ಸಬ್​ ಇನ್ಸ್​​ಪೆಕ್ಟರ್​ (ಮಿನಿಸ್ಟ್ರಿಯಲ್​) ಮತ್ತು ಹೆಡ್​ ಕಾನ್ಸ್​ಟೇಬಲ್ (ಕ್ಲರ್ಕ್​)​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1526 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..

Border Security Force Recruitment for 156 constable
ಅಧಿಸೂಚನೆ (ಬಿಎಸ್​ಎಫ್​ ಅಧಿಸೂಚನೆ​)

ಹುದ್ದೆ ವಿವರ: ಒಟ್ಟು 1526 ಹುದ್ದೆಗಳ ನೇಮಕಾತಿ

ಸಹಾಯಕ ಸಬ್​ ಇನ್ಸ್​ಪೆಕ್ಟರ್​ ಮತ್ತು ವಾರೆಂಟ್​ ಆಫೀಸರ್​ 243

ಹೆಡ್​​ ಕನ್ಸ್​ಟೇಬಲ್​​ ಮತ್ತು ಹವೀಲ್ದಾರ್​ (ಕ್ಲರ್ಕ್​) - 1283

ವಿದ್ಯಾರ್ಹತೆ: ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಕ್ಲರ್ಕ್​ ಹುದ್ದೆಗಳ ನೇಮಕಾತಿ ಹಿನ್ನೆಲೆ ಅಭ್ಯರ್ಥಿಗಳು ಟೈಪಿಂಗ್​ ಅನುಭವ ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ಇರಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ದಾರ್ಢ್ಯತೆ, ಕೌಶಲ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಜೂನ್​ 9ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 8 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು rectt.bsf.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ನಾರ್ಕೋಟಿಕ್​ ಕಂಟ್ರೊಲ್​ ಬ್ಯೂರೊದಲ್ಲಿದೆ ಹುದ್ದೆ ; ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋದಲ್ಲಿರುವ 2 ಆಫೀಸ್​ ಸೂಪರಿಂಟೆಂಡೆಂಟ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಆಫ್ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೆ ಕಡೆಯ ದಿನ ಜುಲೈ 27 ಆಗಿದ್ದು, ನಿಗದಿತ ಅರ್ಜಿ ಮತ್ತು ಅಧಿಕೃತ ಅಧಿಸೂಚನೆಗೆ narcoticsindia.nic.in ಭೇಟಿ ನೀಡಿ.

ಹೆಚ್​ಎಎಲ್​ನಲ್ಲಿ ಅಪ್ರೆಂಟಿಸ್​ ಹುದ್ದೆಗಳು: ಹಿಂದೂಸ್ತಾನ್​ ಏರೋನಾಟಿಕಲ್​ ಲಿಮಿಟೆಡ್​ನಲ್ಲಿ ಅಪ್ರೆಂಟಿಸ್​​ಶಿಪ್​ ಟ್ರೈನಿಂಗ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಫಿಟ್ಟರ್​​, ಟರ್ನರ್​​, ಮೆಕ್ಯಾನಿಸ್ಟ್​​, ವೆಲ್ಡರ್​, ಸಿಒಎಪಿ, ಫೌಂಡ್ರೆ-ಮ್ಯಾನ್​, ಶೀಟ್​ ಮೆಟಲ್​ ವರ್ಕ್​, ಟೂಲ್​ ಆ್ಯಂಡ್​ ಡೈ ಮೇಕರ್​, ಎಲೆಕ್ಟ್ರಿಷಿಯನ್​ ಅಡ್ವಾನ್ಸ್ಡ್​​ ಸಿಎನ್​ಸಿ​ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ನೇಮಕಾತಿ ನಡೆಯಲಿದೆ.

ಐಟಿಐ ಪದವಿ ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನದ ಮೂಲಕ ಆಯ್ಕೆಯಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 7,000-7,700 ರೂ.ವರೆಗೆ ಗೌರವಧನ ನೀಡಲಾಗುತ್ತದೆ. ನೇರ ಸಂದರ್ಶನ ಜೂನ್​ 17ರಿಂದ ಜೂನ್​ 22ರ ವರೆಗೆ ಟೆಕ್ನಿಕಲ್​ ಟ್ರೈನಿಂಗ್​​ ಇನ್ಸಟಿಟ್ಯೂಟ್​, ಸುರಂಜನ್​ ದಾಸ್​ ರಸ್ತೆ, ಬೆಂಗಳೂರು -560017 ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ hal-india.co.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಬಿಎಸ್​ಎಫ್​​ ನೇಮಕಾತಿ: ಗ್ರೂಪ್​ ಬಿ ಮತ್ತು ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.