ETV Bharat / education-and-career

ಬಿಬಿಎಂಪಿಯಲ್ಲಿದೆ ಉದ್ಯೋಗಾವಕಾಶ: ಮಾಸಿಕ 40 - 60 ಸಾವಿರ ವೇತನ - Climate Action cell Recruitment

author img

By ETV Bharat Karnataka Team

Published : Jul 10, 2024, 4:32 PM IST

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಆಗಸ್ಟ್​​ 6 ಆಗಿದೆ.

BBMP Inviting applications for the Climate Action Cell Fellowship Program
ಬಿಬಿಎಂಪಿ (ಸಂಗ್ರಹ ಚಿತ್ರ)

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಹವಾಮಾನ ಕ್ರಿಯಾ ಯೋಜನೆಗೆ ಫೇಲೋಶಿಪ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಒಟ್ಟು 8 ಜೂನಿಯರ್​ ಫೇಲೋ ಭರ್ತಿಗೆ ಕ್ರಮ

  • ಪಾರ್ಟನರ್​ ಎಂಗೇಜ್​ಮೆಂಟ್​ ಅಂಡ್​ ಸೆಲ್​ ಕೊರ್ಡಿನೇಷನ್​ -1
  • ಕಮ್ಯೂನಿಕೇಷನ್​ ಅಂಡ್​ ಔಟ್​ರೀಚ್​ - 1
  • ಡೇಟಾ ಇನ್ನೊವೇಷನ್​ -1
  • ಲೋಕಲ್​ ಕ್ಲೈಮೇಟ್​ ಆಕ್ಷನ್​ ಅಂಡ್​ ಸಿವಿಲ್​ ಎಂಗೇಜ್​ಮೆಂಟ್​​ - 4
  • ಸಿನೀಯರ್​ ಫೇಲೋ- ಎಂಇಆರ್​ ಬಡ್ಜೇಟಿಂಗ್​ ಅಂಡ್​ ಪ್ರಾಜೆಕ್ಟ್​​ ಪ್ರಿಪರೇಷನ್​ - 1

ವಿದ್ಯಾರ್ಹತೆ: ಅಭ್ಯರ್ಥಿಗಳು ನಗರ ಯೋಜನೆ, ಆಡಳಿತ ಅಥವಾ ನಿರ್ವಹಣೆ, ಸಂವಹನ ಮತ್ತು ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಹಾಗೂ ಬಿಬಿಎಂಪಿ ನಿಗದಿತ ಕಾರ್ಯಾನುಭವಗಳನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. https://apps.bbmpgov.in/bcap ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ: ಸ್ಪೆಷಲ್​ ಕಮಿಷನರ್​ (ಫಾರೆಸ್ಟ್‌, ಎನ್ವಿರಾನ್ಮೆಂಟ್ ಅಂಡ್ ಕ್ಲೈಮೇಟ್‌ ಚೇಂಜ್) ಒಳಗೊಂಡ ಪ್ಯಾನೆಲ್​ ಈ ನೇಮಕಾತಿ ನಡೆಸಲಿದೆ. ಮೊದಲ ಸುತ್ತಿನಲ್ಲಿ ಅರ್ಹತಾ ಮಾನದಂಡಗಳ ಆಧಾರದಲ್ಲಿ ಅರ್ಹತೆಗಳ ಮೇಲೆ ಆಯ್ಕೆ ನಡೆಸಲಾಗುವುದು. ಎರಡನೇ ಸುತ್ತಿನಲ್ಲಿ ಟೆಕ್ನಿಕಲ್ ಮತ್ತು ಭಾಷಾ ಕೌಶಲ್ಯದ ಕುರಿತು ಪರೀಕ್ಷೆ ಇರಲಿದೆ. ಅಂತಿಮ ಸುತ್ತಿನಲ್ಲಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಆಗಸ್ಟ್​​ 6 ಆಗಿದೆ. ಅಭ್ಯರ್ಥಿಗಳು ಈ ಹುದ್ದೆ ನೇಮಕಾತಿ ಅಥವಾ ಅರ್ಜಿ ಸಲ್ಲಿಕೆ ಸಂಬಂಧ ಹೆಚ್ಚಿನ ಮಾಹಿತಿಗೆ specialcommissionerfeccbbmp@gmail.com ಇಮೇಲ್​ಗೆ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ; ಅರ್ಜಿ ಸಲ್ಲಿಸಲು ಇನ್ನೆರಡೇ ದಿನ ಬಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.