ಬೆಂಗಳೂರು: ಸೇನೆ ಸೇರಿ ದೇಶ ಸೇವೆ ಮಾಡಬೇಕು ಎಂಬ ಜಿಲ್ಲೆಯ ಯುವ ಜನರ ಕನಸಿಗೆ ಇದೀಗ ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಕೊಪ್ಪಳದಲ್ಲಿ ಭಾರತೀಯ ವಾಯುಪಡೆಯಲ್ಲಿ ಅಗ್ನಿಪಥ್ ಎಂಬ ವಿಶೇಷ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಗ್ನಿವೀರ್ ಸೇವೆಗಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಯಲ್ಲಿ ತೇರ್ಗಡೆಯಾದ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳದ ಅಭ್ಯರ್ಥಿಗಳಿಗಾಗಿ ನವೆಂಬರ್ 26 ರಿಂದ ಡಿಸೆಂಬರ್ 8ರವರೆಗೂ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದೆ.
ಸೇನಾ ನೇಮಕಾತಿ ವಿಭಾಗ ಬೆಂಗಳೂರು ಹಾಗೂ ನೇಮಕಾತಿ ಕಚೇರಿ ಬೆಳಗಾವಿಯ ಆಶ್ರಯದಲ್ಲಿ ಆಯೋಜಿಸಲಾಗಿರುವ ರ‍್ಯಾಲಿಯಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ (10ನೇ ತರಗತಿ ಪಾಸ್), ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ (8ನೇ ತರಗತಿ ಪಾಸ್), ಅಗ್ನಿವೀರ್ ಕ್ಲರ್ಕ್ಸ್ಟೋ, ರ್ ಕೀಪರ್ ಟೆಕ್ನಿಕಲ್ ಕೆಟಗರಿಗೆ ಪ್ರವೇಶ ಪಡೆಯಲು ಇಚ್ಚಿಸುವವರು ಪಾಲ್ಗೊಳ್ಳಬಹುದು. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ನಿಗದಿತ ವಿಭಾಗಗಳಿಗಾಗಿ ವಯಸ್ಸು, ಶೈಕ್ಷಣಿಕ ಅರ್ಹತೆ ಮತ್ತಿತರ ಮಾನದಂಡಗಳು ಫೆಬ್ರವರಿ 2024ರಂದು ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ಪ್ರಕಟಿಸಿದಂತಿರಲಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನ www.joinindianarmy.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ತೇರ್ಗಡೆಯಾದ ಅಭ್ಯರ್ಥಿಗಳು ಈ ಮೇಲ್ ಐಡಿ ಬಳಸಿ ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಪ್ರವೇಶ ಪತ್ರಗಳನ್ನ ಪಡೆದುಕೊಳ್ಳಬಹುದು.
ಇದನ್ನೂ ಓದಿ: JEE MAIN 2025: ಜೆಇಇ ಮೇನ್ಸ್ಗೆ ಅರ್ಜಿ ಸಲ್ಲಿಸಲು ಐದೇ ದಿನ ಬಾಕಿ, ಈಗಲೇ ಅಪ್ಲೈ ಮಾಡಿ!