ಪ್ರಮುಖ ಆಹಾರ ವಿತರಣಾ ಕಂಪನಿ ಜೊಮಾಟೊ ತಾನು ಪೇಟಿಎಂ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ದೃಢಪಡಿಸಿದೆ. ಪೇಟಿಎಂನ ಸಿನಿಮಾ ಮತ್ತು ಈವೆಂಟ್ಸ್ ವ್ಯವಹಾರ ಖರೀದಿಸಲು ಈ ಚರ್ಚೆಗಳನ್ನು ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಇನ್ನೂ ಯಾವುದೇ ಅಧಿಕೃತ ನಿರ್ಧಾರಕ್ಕೆ ಬಂದಿಲ್ಲ ಎಂದೂ ಕಂಪನಿ ಸ್ಪಷ್ಟಪಡಿಸಿದೆ. ಈ ಒಪ್ಪಂದವು ಮಂಡಳಿಯ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಜೊಮಾಟೊ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ಒಪ್ಪಂದ ಪೂರ್ಣಗೊಂಡರೆ, ಚಲನಚಿತ್ರ ಪ್ರೇಮಿಗಳು Zomatoದಲ್ಲಿ ನಿಮ್ಮಿಷ್ಟದ ಆಹಾರ ಮಾತ್ರವಲ್ಲ, ಚಲನಚಿತ್ರ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಈ ಮಾತುಕತೆ ಒಂದೊಮ್ಮೆ ಸಕ್ಸಸ್ ಆದರೆ, ಎರಡನೇ ಅತಿದೊಡ್ಡ ಒಪ್ಪಂದ ಎಂದು ಹೇಳಲಾಗುತ್ತಿದ್ದು, Paytm ಮತ್ತು Zomato ನಡುವಿನ ಈ ಒಪ್ಪಂದದ ಮೌಲ್ಯವು 1500 ರೂ. ಕೋಟಿಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಜೊಮಾಟೊದ ಎರಡನೇ ಅತಿ ದೊಡ್ಡ ಸ್ವಾಧೀನವಾಗುತ್ತದೆ ಎಂದೂ ವರದಿಯಾಗಿದೆ. ಜೊಮಾಟೊ 2021 ರಲ್ಲಿ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ಅನ್ನು 4,447 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು. ಬ್ಲಿಂಕಿಟ್ ಬಳಿಕ Zomato ದ ಅತಿ ದೊಡ್ಡ ಆಲ್-ಸ್ಟಾಕ್ ಡೀಲ್ ಆಗಲಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು; ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - HEAVY RAIN ALERT