ETV Bharat / business

5ಜಿ ನೆಟ್​ವರ್ಕ್​ ಲಭ್ಯತೆಯಿಂದ ಭಾರತದ ಜಿಡಿಪಿಗೆ $27 ಶತಕೋಟಿ ಆದಾಯ ಸಾಧ್ಯತೆ: GSMA - 5G Spectrum - 5G SPECTRUM

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ 5ಜಿ ನೆಟ್​ವರ್ಕ್ ಸಂಪರ್ಕ ವ್ಯವಸ್ಥೆಯು 2030ರ ವೇಳೆಗೆ ದೇಶದ ಜಿಡಿಪಿಗೆ 27 ಶತಕೋಟಿ ಡಾಲರ್ ಕೊಡುಗೆ ನೀಡುವ ಸಾಧ್ಯತೆಯಿದೆ.

5ಜಿ ತರಂಗಾಂತರದ ವ್ಯಾಪಕ ಲಭ್ಯತೆಯಿಂದ ಭಾರತದ ಜಿಡಿಪಿಗೆ 27 ಶತಕೋಟಿ ಡಾಲರ್ ಕೊಡುಗೆ ಸಾಧ್ಯತೆ
5ಜಿ ತರಂಗಾಂತರ (IANS)
author img

By ETV Bharat Karnataka Team

Published : May 22, 2024, 1:15 PM IST

ನವದೆಹಲಿ: 5ಜಿ ನೆಟ್​ವರ್ಕ್​ ತರಂಗಾಂತರಗಳ (Spectrum) ವ್ಯಾಪಕ ಲಭ್ಯತೆಯು 2030ರ ವೇಳೆಗೆ ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಸುಮಾರು 27 ಶತಕೋಟಿ ಡಾಲರ್ ಕೊಡುಗೆ ನೀಡುವ ಸಾಧ್ಯತೆಯಿದೆ ಎಂದು ಜಿಎಸ್ಎಂಎ ವರದಿ ಮಂಗಳವಾರ ತಿಳಿಸಿದೆ. ವಿಶ್ವಾದ್ಯಂತ ಮೊಬೈಲ್ ನೆಟ್ ವರ್ಕ್​ ಸೇವಾ ಸಂಸ್ಥೆಗಳನ್ನು ಪ್ರತಿನಿಧಿಸುವ ಸಂಸ್ಥೆಯಾಗಿರುವ ಜಿಎಸ್​ಎಂಎ, 6 ಗಿಗಾಹರ್ಟ್ಸ್ ಬ್ಯಾಂಡ್​ಗಿಂತ ಹೆಚ್ಚಿನ ತರಂಗಾಂತರಗಳು ಕೂಡ ದೇಶದ ಸ್ಪೆಕ್ಟ್ರಮ್ ಮಾರ್ಗಸೂಚಿಯ ಭಾಗವಾಗಿರಬೇಕು ಎಂದು ಹೇಳಿದೆ.

ಜಿಎಸ್ಎಂಎ ಸ್ಪೆಕ್ಟ್ರಮ್ ಮುಖ್ಯಸ್ಥೆ ಲೂಸಿಯಾನಾ ಕ್ಯಾಮರ್ಗೋಸ್ ಅವರ ಪ್ರಕಾರ, ಭಾರತವು 5ಜಿ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ರೀತಿಯು ಜಾಗತಿಕ ಗಮನ ಸೆಳೆದಿದೆ ಮತ್ತು ವಿಶ್ವದ ಇತರ ರಾಷ್ಟ್ರಗಳ ಮನ್ನಣೆ ಗಳಿಸಿದೆ.

"5ಜಿ ತಂತ್ರಜ್ಞಾನದ ಅಳವಡಿಕೆಯ ಆವೇಗವು ಮುಂದುವರಿಯಬೇಕಾದರೆ ಮತ್ತು ಭಾರತ ಸರ್ಕಾರದ ಡಿಜಿಟಲ್ ಮಹತ್ವಾಕಾಂಕ್ಷೆಗಳು ಪೂರ್ಣ ಪ್ರಮಾಣದಲ್ಲಿ ಸಾಕಾರವಾಗಬೇಕಾದರೆ ಹೆಚ್ಚುತ್ತಿರುವ ಮೊಬೈಲ್ ಬೇಡಿಕೆಗೆ ಅನುಗುಣವಾಗಿ ಸ್ಪೆಕ್ಟ್ರಮ್ ಲಭ್ಯವಾಗುವಂತೆ ಮಾಡಲು ಸ್ಪಷ್ಟ ಮಾರ್ಗಸೂಚಿಯ ಅಗತ್ಯವಿದೆ. 6 ಗಿಗಾಹರ್ಟ್ಸ್ ಬ್ಯಾಂಡ್​​ಗಿಂತ ಮೇಲಿನ ಸ್ಪೆಕ್ಟ್ರಮ್​ಗಳು ಕೂಡ ಆ ಮಾರ್ಗಸೂಚಿಯ ಭಾಗವಾಗಿರಬೇಕು ಮತ್ತು ಅದನ್ನು ವಾಣಿಜ್ಯ ಬಳಕೆಗೆ ತರಲು ಸರ್ಕಾರ ಮತ್ತು ಮೊಬೈಲ್ ಉದ್ಯಮದ ನಡುವೆ ನಿಕಟ ಸಹಯೋಗದ ಅಗತ್ಯವಿದೆ" ಎಂದು ಕ್ಯಾಮರ್ಗೋಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾಗತಿಕವಾಗಿ 5ಜಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2022 ರ ಅಕ್ಟೋಬರ್​ನಲ್ಲಿ 5ಜಿ ತಂತ್ರಜ್ಞಾನಕ್ಕೆ ಚಾಲನೆ ನೀಡಿದಾಗಿನಿಂದ ದೇಶದ 5 ಜಿ ಬಳಕೆದಾರರು 4 ಜಿಗೆ ಹೋಲಿಸಿದರೆ ಸುಮಾರು 3.6 ಪಟ್ಟು ಹೆಚ್ಚು ಮೊಬೈಲ್ ಡೇಟಾ ಟ್ರಾಫಿಕ್ ಅನ್ನು ಬಳಸುತ್ತಿದ್ದಾರೆ.

'ನೋಕಿಯಾ ಮೊಬೈಲ್ ಬ್ರಾಡ್ ಬ್ಯಾಂಡ್ ಇಂಡೆಕ್ಸ್' ವರದಿಯ ಪ್ರಕಾರ, ಭಾರತದಲ್ಲಿ 5 ಜಿ ಸಾಧನಗಳ ಬಳಕೆಯು ವೇಗವಾಗಿ ಹೆಚ್ಚಾಗುತ್ತಿದೆ. ಒಟ್ಟಾರೆ 796 ಮಿಲಿಯನ್​ ಸಕ್ರಿಯ 4ಜಿ ಸಾಧನಗಳ ಪೈಕಿ ಶೇ 17ರಷ್ಟು ಅಂದರೆ 134 ಮಿಲಿಯನ್ ಸಾಧನಗಳು ಈಗ 5ಜಿ ಬಳಕೆಯ ಸಾಮರ್ಥ್ಯವನ್ನು ಹೊಂದಿವೆ ಎಂದು ವರದಿ ಹೇಳಿದೆ.

4ಜಿಯ ಗರಿಷ್ಠ 1 ಜಿಬಿಪಿಎಸ್ ವೇಗಕ್ಕೆ ಹೋಲಿಸಿದರೆ 5 ಜಿ ತಂತ್ರಜ್ಞಾನವು ಗರಿಷ್ಠ 20 ಜಿಬಿಪಿಎಸ್ ವೇಗದ ಡೇಟಾ ಸಂಪರ್ಕವನ್ನು ನೀಡುತ್ತದೆ. ಇದು ಅಪ್ಲಿಕೇಶನ್​ಗಳ ಕಾರ್ಯಕ್ಷಮತೆಯನ್ನು ಮತ್ತು ಇತರ ಡಿಜಿಟಲ್ ಅನುಭವಗಳನ್ನು (ಆನ್ ಲೈನ್ ಗೇಮಿಂಗ್, ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ಸ್ವಯಂ ಚಾಲಿತ ಕಾರುಗಳಂತಹ) ಉತ್ತಮಗೊಳಿಸುತ್ತದೆ.

ಇದನ್ನೂ ಓದಿ : ರಷ್ಯಾದಿಂದ ಬಾಹ್ಯಾಕಾಶ ಶಸ್ತ್ರ ಉಪಗ್ರಹ ಉಡಾವಣೆ: ಅಮೆರಿಕ ಪ್ರತಿಪಾದನೆ - Space Weapon

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.