ETV Bharat / business

ನೀವು ಈ ಬ್ಯಾಂಕ್​ಗಳ ಖಾತೆದಾರರೇ?: ಯುಪಿಐ ಬಳಸಿ ದಿನಕ್ಕೆ ಎಷ್ಟು ಸಲ ಪಾವತಿ ಮಾಡಬಹುದು?, ಯಾವ್​ ಬ್ಯಾಂಕ್​ ಎಷ್ಟು ಮಿತಿ? - HOW MUCH UPI TRANSACTIONS IN BANKS

ಯುಪಿಐ ಪಾವತಿಗಳು ಶರವೇಗವಾಗಿ ಹೆಚ್ಚುತ್ತಿರುವ ಕಾರಣ, ಬ್ಯಾಂಕ್​ಗಳಿಂದ ಜನರು ನಡೆಸುವ ವಹಿವಾಟಿನ ಮಿತಿಯನ್ನು ಆರ್​ಬಿಐ ಹೆಚ್ಚಿಸಿದೆ. ಯಾವ ಬ್ಯಾಂಕ್​ನಿಂದ ಗರಿಷ್ಠ ಎಷ್ಟು ಮೊತ್ತವನ್ನು, ಎಷ್ಟು ಸಲ ಪಾವತಿಸಬಹುದು ಎಂಬುದರ ಮಾಹಿತಿ ಇಲ್ಲಿದೆ.

ಯುಪಿಐ
ಯುಪಿಐ (ETV Bharat)
author img

By ETV Bharat Karnataka Team

Published : Sep 7, 2024, 4:42 PM IST

ಹೈದರಾಬಾದ್​: ಡಿಜಿಟಲ್​​​ ಇಂಡಿಯಾ ಬಳಿಕ ಪಾವತಿ ವ್ಯವಸ್ಥೆಯು ಅತಿ ಸರಳವಾಗಿದೆ. ಏನಾದರೂ ವ್ಯವಹಾರ ನಡೆಸಿದಾಗ ತಕ್ಷಣವೇ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಮೂಲಕ ತಮ್ಮ ಮೊಬೈಲ್​​ನಿಂದ ವೈಯಕ್ತಿಕವಾಗಿ (ವ್ಯಕ್ತಿಯಿಂದ ವ್ಯಕ್ತಿಗೆ) ಹಣ ವರ್ಗಾವಣೆ ಮಾಡುತ್ತಾರೆ. ಪಾವತಿಗೆ ಸರಳ ವಿಧಾನವಾದ್ದರಿಂದ ಜನರು ಅತಿಹೆಚ್ಚು ಆನ್​ಲೈನ್​ ವಹಿವಾಟನ್ನು ಅವಲಂಬಿಸಿದ್ದಾರೆ.

ರಾಷ್ಟ್ರೀಯ ಪಾವತಿ ನಿಗಮ (ಎನ್​ಪಿಸಿಐ) ಅಂಕಿ - ಅಂಶಗಳ ಪ್ರಕಾರ, ಡಿಜಿಟಲ್​​ ಪಾವತಿದಾರರ ಸಂಖ್ಯೆಯು 2024ರ ಆಗಸ್ಟ್​ ವೇಳೆಗೆ 14.96 ಬಿಲಿಯನ್​ಗೆ ತಲುಪಿದೆ. ಡಿಜಿಟಲ್ ಪಾವತಿಗಳು ದೇಶದಲ್ಲಿ ವೇಗ ಪಡೆದಿದ್ದರಿಂದ ಬ್ಯಾಂಕ್​ಗಳು ದಿನದ ಪಾವತಿ ಮೊತ್ತವನ್ನು ಹೆಚ್ಚಿಸಿವೆ. ಯುಪಿಐ ಲೈಟ್​​ ಹೆಸರಿನಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​(ಆರ್‌ಬಿಐ) ಡಿಜಿಟಲ್ ಪಾವತಿಗಳಲ್ಲಿ ಬದಲಾವಣೆಗಳನ್ನು ತಂದಿದೆ. ಆದರೆ, ನಿತ್ಯದ ಪಾವತಿಯಲ್ಲಿ ಬ್ಯಾಂಕ್‌ಗಳಿಗೆ ನಿರ್ಬಂಧ ಹೇರಿದೆ. ಹಾಗಾದರೆ, ಯಾವ ಬ್ಯಾಂಕ್​​ನಿಂದ ಗರಿಷ್ಠ ಎಷ್ಟು ಪ್ರಮಾಣದಲ್ಲಿ ಪಾವತಿಸಲು ಸಾಧ್ಯ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಹೆಚ್​​ಡಿಎಫ್​ಸಿ ಬ್ಯಾಂಕ್​: HDFC ಬ್ಯಾಂಕ್‌ನಲ್ಲಿ ದಿನಕ್ಕೆ 1 ಲಕ್ಷ ರೂಪಾಯಿವರೆಗೆ UPI ವಹಿವಾಟುಗಳನ್ನು ವೈಯಕ್ತಿಕವಾಗಿ (ವ್ಯಕ್ತಿಯಿಂದ ವ್ಯಕ್ತಿಗೆ) ಮಾಡಬಹುದು. ಬ್ಯಾಂಕ್​ನ ಖಾತೆದಾರರು 24 ಗಂಟೆಯಲ್ಲಿ ಗರಿಷ್ಠ 20 ವಹಿವಾಟುಗಳನ್ನು ನಡೆಸಬಹುದಾಗಿದೆ.

ಎಸ್​​ಬಿಐ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ದೈನಂದಿನ ಪಾವತಿ ಮೊತ್ತದ ಮಿತಿಯು 1 ಲಕ್ಷ ರೂಪಾಯಿ ಇದೆ. ದಿನಕ್ಕೆ 10 ಬಾರಿ ಮಾತ್ರ ವಹಿವಾಟು ನಡೆಸಬಹುದು. ಇದರ ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇಂಡಸ್ ಇಂಡ್ ಬ್ಯಾಂಕ್‌ಗಳು ಕೂಡ ಇಷ್ಟೇ ಮಿತಿಯನ್ನು ಹೊಂದಿವೆ.

ಐಸಿಐಸಿಐ ಬ್ಯಾಂಕ್: ಈ ಬ್ಯಾಂಕ್‌ನಲ್ಲಿ ಗರಿಷ್ಠ ವಹಿವಾಟಿನ ಮಿತಿ 1 ಲಕ್ಷ ರೂಪಾಯಿ. 24 ಗಂಟೆಗಳಲ್ಲಿ ಗರಿಷ್ಠ 10 ವಹಿವಾಟುಗಳಿಗೆ ಅವಕಾಶವಿದೆ.

ಕೆನರಾ ಬ್ಯಾಂಕ್: ಕೆನರಾ ಬ್ಯಾಂಕ್ ಕೂಡ ಯುಪಿಐ ಮೂಲಕ ನಡೆಸುವ ವಹಿವಾಟಿಗೆ 1 ಲಕ್ಷ ರೂಪಾಯಿ ಮಿತಿ ಇಟ್ಟಿದೆ. ಆದರೆ, ದಿನಕ್ಕೆ 20 ಬಾರಿ ಪಾವತಿ ಮಾಡುವ ಅನುಮತಿ ಇದೆ.

ಬ್ಯಾಂಕ್ ಆಫ್ ಬರೋಡಾ: ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್​ ದೈನಂದಿನ ಪಾವತಿ ಮಿತಿಯನ್ನು 1 ಲಕ್ಷ ಇಟ್ಟದ್ದರೆ, ಗರಿಷ್ಠ 20 ವಹಿವಾಟುಗಳನ್ನು ಮಾಡಬಹುದು.

ಆಕ್ಸಿಸ್​​ ಬ್ಯಾಂಕ್: Axis ಬ್ಯಾಂಕ್ ಡೆಬಿಟ್ ಫಂಡ್ ಪಾವತಿಗಳು ಅಥವಾ ವೈಯಕ್ತಿಕ ಪಾವತಿಗಳ ಮೇಲೆ 1 ಲಕ್ಷರ ರೂಪಾಯಿ ದೈನಂದಿನ ಮಿತಿಯನ್ನು ನಿಗದಿಪಡಿಸಿದೆ. ಈ ಬ್ಯಾಂಕ್​​ ಖಾತೆಯಿಂದ ಕೂಡ 20 ಬಾರಿ ಹಣ ವರ್ಗಾಯಿಸಬಹುದು.

ಕೋಟಕ್ ಮಹೀಂದ್ರಾ ಬ್ಯಾಂಕ್ : ಈ ಬ್ಯಾಂಕ್‌ನಲ್ಲಿ ಗರಿಷ್ಠ 1 ಲಕ್ಷ ರೂಪಾಯಿವರೆಗೆ ಒಂದು ದಿನದಲ್ಲಿ 10 ವಹಿವಾಟುಗಳನ್ನು ಮಾಡಬೇಕು. ನೀವು ಕ್ಯೂಆರ್ ಕೋಡ್ ಅನ್ನು ಅಪ್‌ಲೋಡ್ ಮಾಡಿ ಹಣ ಪಾವತಿ ಮಾಡಲು ಬಯಸಿದರೆ, 2 ಸಾವಿರ ರೂಪಾಯಿವರೆಗೆ ಮಾತ್ರ ಅವಕಾಶವಿದೆ.

ತೆರಿಗೆ ಪಾವತಿ ಮಿತಿ ಹೆಚ್ಚಳ: ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಪಾವತಿಗೆ 1 ಲಕ್ಷ ರೂಪಾಯಿ ಮಿತಿಯನ್ನು ಹೇರಲಾಗಿದ್ದರೆ, ತೆರಿಗೆ ಪಾವತಿಸುವ ಮೊತ್ತವನ್ನು 1 ರಿಂದ 5 ಲಕ್ಷ ರೂಪಾಯಿವರೆಗೆ ಆರ್​ಬಿಐ ಅವಕಾಶ ನೀಡಿದೆ. ಅಂದರೆ, ಆಸ್ತಿ ತೆರಿಗೆ, ಮುಂಗಡ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ಒಂದೇ ವಹಿವಾಟಿನಲ್ಲಿ ಯುಪಿಐ ಮೂಲಕ 5 ಲಕ್ಷ ರೂಪಾಯಿವರೆಗೆ ಪಾವತಿಸಬಹುದು. ಅದೇ ರೀತಿ, ಬಂಡವಾಳ ಮಾರುಕಟ್ಟೆಗಳು, ವಿಮೆ, ವಿದೇಶಿ ಪಾವತಿಗಳಿಗೆ 2 ಲಕ್ಷದ ಮಿತಿಯಿದ್ದರೆ, ಐಪಿಒ, ರೀಟೈಲ್​ ಡೈರೆಕ್ಟ್​ ಸ್ಕೀಂನಲ್ಲಿ 5 ಲಕ್ಷ ರೂ.ವರೆಗೆ ಪಾವತಿಗಳನ್ನು ಮಾಡಬಹುದು.

ಇದನ್ನೂ ಓದಿ: ಆಗಸ್ಟ್​ನಲ್ಲಿ 14.96 ಬಿಲಿಯನ್​ಗೆ ತಲುಪಿದ ಯುಪಿಐ ವಹಿವಾಟುಗಳ ಸಂಖ್ಯೆ: ಶೇ 41ರಷ್ಟು ಏರಿಕೆ - UPI transactions

ETV Bharat Logo

Copyright © 2024 Ushodaya Enterprises Pvt. Ltd., All Rights Reserved.