ನವದೆಹಲಿ: ಸಾಮಾನ್ಯವಾಗಿ ಹಣಕಾಸು ಸಚಿವರು ಮಂಡಿಸುವ ಬಜೆಟ್ ಭಾಷಣದಲ್ಲಿ ತೆರಿಗೆ ಪ್ರಸ್ತಾವನೆಗಳು, ಕಲ್ಯಾಣ ಯೋಜನೆಗಳು ಮತ್ತು ರಸ್ತೆ ಮತ್ತು ಸಾರಿಗೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಹಂಚಿಕೆಗಳು ಹೆಚ್ಚಿನ ಗಮನ ಸೆಳೆಯುತ್ತವೆ. ಆದರೆ ಕೇಂದ್ರ ಸರ್ಕಾರದ ಹಣಕಾಸು ವ್ಯವಹಾರ ಶಿಸ್ತು, ಬೆಳವಣಿಗೆ ನ್ಯೂನತೆಗಳನ್ನು ಆರ್ಥಿಕ ತಜ್ಞರು ಸೇರಿದಂತೆ ಪರಿಣತರು ಹೆಚ್ಚಿನ ಗಮನ ನೀಡುತ್ತಾರೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಿಂಬಿಸುವ, ಹಣಕಾಸು ಅಚ್ಚುಕಟ್ಟುತನವನ್ನು ತೋರಿಸುವ ನಿರ್ಣಾಯಕ ಅಂಕಿ- ಸಂಖ್ಯೆಗಳಲ್ಲಿ ಒಂದಾದ ಸರ್ಕಾರದ ಒಟ್ಟು ಸಾಲ, ಬಡ್ಡಿ ಪಾವತಿ, ಹೊಣೆಗಾರಿಕೆಗಳು ಬಜೆಟ್ನ ಭಾಗವಾಗಿ ಇರುತ್ತವೆ.
ಭಾರತದ ಸಾರ್ವಜನಿಕ ಸಾಲ: ವಾರ್ಷಿಕ ಹಣಕಾಸು ಹೇಳಿಕೆಯಲ್ಲಿ (AFS) ಪ್ರಮುಖವಾಗಿ ಕೇಂದ್ರ ಸರ್ಕಾರದ ಒಟ್ಟು ಆಂತರಿಕ ಸಾಲದ ವಿವರಗಳನ್ನು ನೀಡಲಾಗುತ್ತದೆ. ಹಾಗೂ ಕೇಂದ್ರ ಸರ್ಕಾರದ ಬಾಹ್ಯ ಸಾಲದ ವಿವರಗಳನ್ನು ಈ ಹೇಳಿಕೆಯಲ್ಲಿ ದಾಖಲಿಸಲಾಗುತ್ತದೆ. ಇವೆರಡೂ ಒಟ್ಟಾಗಿ ಸಾರ್ವಜನಿಕ ಸಾಲದ ವಿವರಗಳನ್ನು ಬಜೆಟ್ನಲ್ಲಿ ಹೇಳಲಾಗುತ್ತದೆ. ಕೆಲವೊಮ್ಮೆ, ಕೆಲವು ಅರ್ಥಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರು ಸಾರ್ವಜನಿಕ ಸಾಲದ ಅಂಕಿ - ಅಂಶವನ್ನು ನೀಡಲು, ರಾಜ್ಯ ಸರ್ಕಾರಗಳ ಸಾಲಗಳನ್ನು ಇದರೊಂದಿಗೆ ಸೇರಿಸಿಯೇ ಹೇಳುತ್ತಾರೆ. ಸಂವಿಧಾನದ 112 ನೇ ವಿಧಿಯ ಅಡಿಯಲ್ಲಿ ಬಾಹ್ಯಸಾಲ ಮತ್ತು ಮುಂಗಡಗಳು ಲೋಕಸಭೆಗೆ ಮಂಡಿಸಲಾದ ವಾರ್ಷಿಕ ಹಣಕಾಸು ಹೇಳಿಕೆಯ (AFS) ಭಾಗವಾಗಿರುತ್ತವೆ.
ಬಜೆಟ್ ದಾಖಲೆಗಳಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರವು 2021-22ನೇ ಹಣಕಾಸು ವರ್ಷದಲ್ಲಿ 81.62 ಲಕ್ಷ ಕೋಟಿಗೂ ಹೆಚ್ಚು ಆಂತರಿಕ ಸಾಲವನ್ನು ಹೊಂದಿತ್ತು. ಇದು 2022-23 ನೇ ಆರ್ಥಿಕ ವರ್ಷದ ಪ್ರಕಾರ ರೂ 88.8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಪರಿಷ್ಕೃತ ಅಂದಾಜುಗಳು ಮತ್ತು ಪ್ರಸಕ್ತ ಹಣಕಾಸು ವರ್ಷಕ್ಕೆ, ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಅಂದಾಜಿನ ಪ್ರಕಾರ ಇದು 105 ಲಕ್ಷ ಕೋಟಿಗಿಂತ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.
ಆದಾಗ್ಯೂ, 2021-22 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಾಹ್ಯ ಸಾಲವು ಸುಮಾರು 86,000 ಕೋಟಿ ರೂ.ಗಿಂತ ಹೆಚ್ಚಿತ್ತು. ಇದು 2022-23 ಮತ್ತು FY 2023-24 ನೇ ಸಾಲಿನಲ್ಲಿ ಸುಮಾರು 85,000 ಕೋಟಿಗಳ ವ್ಯಾಪ್ತಿಯಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಕೇಂದ್ರ ಸರ್ಕಾರದ ಒಟ್ಟು ಆಂತರಿಕ ಮತ್ತು ಬಾಹ್ಯ ಸಾಲ (ಸಾರ್ವಜನಿಕ ಸಾಲ) 2021-22 ನೇ ಆರ್ಥಿಕ ವರ್ಷದಲ್ಲಿ ಸುಮಾರು 82.5 ಲಕ್ಷ ಕೋಟಿ ರೂ.ಗಳಷ್ಟಿತ್ತು. ಇದು 2022-23 ರಲ್ಲಿ ಸುಮಾರು 90 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ (ಪರಿಷ್ಕೃತ ಅಂದಾಜುಗಳು) ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 106 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.
ಆಂತರಿಕ ಸಾಲದ ಮೂಲಗಳು: ಬಜೆಟ್ ದಾಖಲೆಗಳ ಪ್ರಕಾರ, ಆತಂರಿಕ ಸಾಲವು ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರದ ಒಟ್ಟು ಸಾಲದ 99 ಪ್ರತಿಶತಕ್ಕಿಂತ ಹಚ್ಚಿದೆ. ಸಣ್ಣ ಉಳಿತಾಯದ ವಿರುದ್ಧದ ಭದ್ರತೆಗಳು, ಮಾರುಕಟ್ಟೆ ಸಾಲಗಳು, ನಗದು ನಿರ್ವಹಣೆ ಬಿಲ್‌ಗಳು, ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ವಿಶೇಷ ಭದ್ರತೆಗಳನ್ನು ನೀಡುವ ಮೂಲಕ ಕೇಂದ್ರ ಸರ್ಕಾರ ಆಂತರಿಕ ಸಾಲಗಳನ್ನು ಎತ್ತುತ್ತದೆ.
ಸಣ್ಣ ಉಳಿತಾಯದ ವಿರುದ್ಧ ನೀಡುವ ಭದ್ರತೆ ಕೇಂದ್ರ ಸರ್ಕಾರದ ಆಂತರಿಕ ಸಾಲದ ಮುಖ್ಯ ಮೂಲಗಳಲ್ಲಿ ಒಂದಾಗಿದೆ. ಉದಾಹರಣೆಗೆ, ಸಣ್ಣ ಉಳಿತಾಯದ ಮೇಲಿನ ಸೆಕ್ಯುರಿಟಿಗಳು 2021-22 ರಲ್ಲಿ 6.38 ಲಕ್ಷ ಕೋಟಿ ರೂ.ಗಿಂತ ಹೆಚ್ಚಿದೆ. ಈ ಮೂಲಕ ಕೇಂದ್ರ ಸರ್ಕಾರ ಸಾಲವನ್ನು ಪಡೆದುಕೊಂಡಿದೆ. 2022-23 ರಲ್ಲಿ ಈ ಪ್ರಮಾಣ ಸುಮಾರು 5.76 ಲಕ್ಷ ಕೋಟಿ ರೂಗಳಾಗಿದ್ದು, ಸ್ವಲ್ಪ ಕಡಿಮೆಯಾಗಿದೆ. ಇನ್ನು 2023-24 ರಲ್ಲಿ ಈ ಪ್ರಮಾಣ ಸುಮಾರು 6.48 ಲಕ್ಷ ಕೋಟಿಗಳಾಗಲಿವೆ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ: ಗಗನಕ್ಕೇರುತ್ತಿರುವ ಬೆಲೆಯಿಂದ ಭಾರತದಲ್ಲಿ ಕುಸಿದ ಚಿನ್ನದ ಬೇಡಿಕೆ: ಡಬ್ಲ್ಯೂಜಿಸಿ