ನವದೆಹಲಿ: ರತನ್ ಟಾಟಾ ಅವರ ನಿಧನಕ್ಕೆ ನಟಿ ಸಿಮಿ ಗರೆವಾಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರು ಸಂತಾಪ ಸೂಚಿಸಿದ್ದು, ಇದನ್ನು ಭರಿಸಲಾಗದ ನಷ್ಟ ಎಂದು ವಿವರಿಸಿದ್ದಾರೆ. ಅಷ್ಟೇ ಅಲ್ಲ ರತನ್ ಟಾಟಾ ಇನ್ನಿಲ್ಲ ಎಂಬುದನ್ನು ನಂಬಲು ಕಷ್ಟ ಎಂದು ಬರೆದುಕೊಂಡಿದ್ದಾರೆ.
ಭಾವನಾತ್ಮಕ ಪೋಸ್ಟ್ : ಸಿಮಿ ಗರೆವಾಲ್ ಮತ್ತು ರತನ್ ಟಾಟಾ ನಡುವಿನ ಸ್ನೇಹ ಗಾಢವಾಗಿತ್ತು. ಈ ಸ್ನೇಹ ಎಷ್ಟು ಆಳವಾಗಿತ್ತು ಎಂಬುದನ್ನು ಅವರು ಮಾಡಿರುವ ಈ ಪೋಸ್ಟ್ ಹೇಳುತ್ತಿದೆ. ಕೆಲವೇ ಕೆಲವು ಪದಗಳಲ್ಲಿ ಅವರು ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ. ’’ನೀನು ಇನ್ನಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ...ಆದರೆ ನಂಬುವುದು ಕಷ್ಟ... ಬಹಳ ಕಷ್ಟ, ವಿದಾಯ ಗೆಳೆಯ ರತನ್ ಟಾಟಾ’’ ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಫೋಟೊವೊಂದನ್ನು ಹಂಚಿಕೊಂಡ ನಟಿ: ರತನ್ ನಿಧನದ ಹಿನ್ನೆಲೆಯಲ್ಲಿ ಸಿಮಿ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ, ನೀವು ಹೋಗಿದ್ದೀರೆಂದು ಎಲ್ಲರೂ ಹೇಳುತ್ತಿದ್ದಾರೆ, ನೀವು ನಮ್ಮ ಜತೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ, ಹೋಗಿಬನ್ನಿ ನನ್ನ ಸ್ನೇಹಿತ ಎಂದು ಬರೆದಿದ್ದಾರೆ. ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ 2011 ರಲ್ಲಿ ನೀಡಿದ ಸಂದರ್ಶನದಲ್ಲಿ ಖ್ಯಾತ ಹಿಂದಿ ಸಿನಿಮಾ ನಟಿ ಸಿಮಿ ಸ್ವತಃ ಬಹಿರಂಗಪಡಿಸಿದ್ದರು.
ರತನ್ ಅವರದ್ದು ಪರಿಪೂರ್ಣ ವ್ಯಕ್ತಿ, ಹಾಸ್ಯ ಪ್ರಜ್ಞೆ ಕೂಡ ಚೆನ್ನಾಗಿತ್ತು, ಸಭ್ಯರು, ಎಂದೂ ಶ್ರೀಮಂತಿಕೆ ತೋರ್ಪಡಿಸಿರಲಿಲ್ಲ ಎಂದು ಹೇಳಿದ್ದರು. ಇಷ್ಟು ಆತ್ಮೀಯವಾಗಿದ್ದರೂ ರತನ್ ಹಾಗೂ ಸಿಮಿಯ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ, ಸಿಮಿ ಬೇರೊಬ್ಬರನ್ನು ಮದುವೆಯಾದರು, ಸಾಕಷ್ಟು ವರ್ಷಗಳ ಕಾಲ ಸಿಮಿ ಹಾಗೂ ರತನ್ ಒಳ್ಳೆಯ ಸ್ನೇಹಿತರಾಗಿದ್ದರು. ಹೀಗಾಗಿ ಇಂದಿನ ಈ ಬರಹ ಸಾಕಷ್ಟು ಸುದ್ದಿ ಮಾಡುತ್ತಿದೆ.
2011 ರಲ್ಲಿ, ಸಿಮಿ ಅವರು ಬಾಲಿವುಡ್‌ನಲ್ಲಿ ಇನ್ನೂ ಸಕ್ರಿಯವಾಗಿದ್ದಾಗ ರತನ್ ಟಾಟಾ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಆದಾಗ್ಯೂ, ಅವರು ಬೇರೆಯಾದರು. ಆದರೆ ನಿಕಟ ಸ್ನೇಹವನ್ನು ಮುಂದುವರೆಸಿದರು ಎಂದು ಅವರು ಬಹಿರಂಗಪಡಿಸಿದ್ದರು.
ಇದನ್ನು ಓದಿ: ಉದ್ಯಮ ಸಾಮ್ರಾಜ್ಯದ ಸೂರ್ಯ ಅಸ್ತಂಗತ: ಟಾಟಾ ಗ್ರೂಪ್ನ ದಿಗ್ಗಜ ರತನ್ ಟಾಟಾ ಇನ್ನಿಲ್ಲ
ಟಾಟಾ ಸಹಾಯಕ, ಆಪ್ತ ಶಾಂತನು ಇನ್ಸ್ಟಾ ಪೋಸ್ಟ್: ರತನ್ ಟಾಟಾ ಅವರು ಮದುವೆ ಮಾಡಿಕೊಂಡಿರಲಿಲ್ಲ, ಮತ್ತು ಮಕ್ಕಳೂ ಇಲ್ಲ. ಕಳೆದ 10 ವರ್ಷಗಳಿಂದ ತಮ್ಮ ವಿಶ್ವಾಸಾರ್ಹ ಸ್ನೇಹಿತ ಮತ್ತು ಸಹಾಯಕ ಶಾಂತನು ನಾಯ್ಡು ಅವರೊಂದಿಗೆ ನಿಕಟವಾದ ಸಂಬಂಧ ಹೊಂದಿದ್ದಾರೆ. ರತನ್ ಟಾಟಾ ಅವರ ನಿಧನದ ಹಿನ್ನೆಲೆಯಲ್ಲಿ ನಾಯ್ಡು ಅವರು ಲಿಂಕ್ಡ್‌ಇನ್‌ನಲ್ಲಿ ಟಾಟಾ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಕೈಗಾರಿಕೋದ್ಯಮಿಯ ನಿಧನವು ಸೃಷ್ಟಿಸಿದ ಶೂನ್ಯವನ್ನು ತುಂಬಲು ನಾನು ಈಗ ತನ್ನ ಉಳಿದ ಜೀವನವನ್ನು ಕಳೆಯುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
“ಈ ಗೆಳೆತನ ಈಗ ನನ್ನೊಂದಿಗೆ ಬಿಟ್ಟ ರಂಧ್ರವನ್ನು ತುಂಬಲು ನನ್ನ ಉಳಿದ ಜೀವನವನ್ನು ಕಳೆಯುತ್ತೇನೆ. ಪ್ರೀತಿಗೆ ತೆರಬೇಕಾದ ಬೆಲೆ ದುಃಖ. ವಿದಾಯ, ನನ್ನ ಪ್ರೀತಿಯ ದೀಪಸ್ತಂಭ” ಎಂದು ಶಾಂತನು ಬರೆದುಕೊಂಡಿದ್ದಾರೆ.
ಇದನ್ನು ಓದಿ:ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಸಂಸ್ಕಾರ: ಮಹಾರಾಷ್ಟ್ರ ಸಿಎಂ