ETV Bharat / business

ದೀಪಾವಳಿ ಬಂಪರ್​ ಆಫರ್​: ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ: ಯಾವ ಬ್ಯಾಂಕ್​​ನಲ್ಲಿ ಎಷ್ಟು? ಇಲ್ಲಿದೆ ಮಾಹಿತಿ!

ಗೃಹ ಸಾಲ ಪಡೆಯಬೇಕು ಎಂದು ಬಯಸುತ್ತಿದ್ದೀರಾ. ಹಾಗಾದರೆ ಅಂತಹವರಿಗೆ ಇವೆ ಉತ್ತಮ ಆಯ್ಕೆಗಳು - ಸೀಮಿತ ಅವಧಿಗೆ ಕಡಿಮೆ ಬಡ್ಡಿ ವಿಧಿಸುವ ಬ್ಯಾಂಕುಗಳಿವು!

these-public-and-private-banks-are-offering-the-lowest-interest-rate
ದೀಪಾವಳಿ ಆಫರ್​: ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ: ಯಾವ ಬ್ಯಾಂಕ್​​ನಲ್ಲಿ ಎಷ್ಟು? ಇಲ್ಲಿದೆ ಮಾಹಿತಿ! (ETV Bharat)
author img

By ETV Bharat Karnataka Team

Published : 2 hours ago

Festive home loan Bank offers ಸ್ವಂತ ಮನೆ ಕಟ್ಟಿಕೊಳ್ಳ ಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎದುರಿಸುವ ಮೊದಲ ತೊಂದರೆ ಎಂದರೆ ಅದು ಹಣಕಾಸಿನದ್ದಾಗಿರುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಬ್ಯಾಂಕ್‌ಗಳು ಅಂತಹವರಿಗಾಗಿ ವಿಶೇಷ ಕೊಡುಗೆಗಳನ್ನು ನೀಡಿವೆ. ಅತ್ಯಂತ ಕಡಿಮೆ ಸಂಸ್ಕರಣಾ ಶುಲ್ಕ ಮತ್ತು ಕಡಿಮೆ ಬಡ್ಡಿ ದರಗಳಲ್ಲಿ ಗೃಹ ಸಾಲಗಳನ್ನು ನೀಡುವುದಾಗಿ ಹೇಳಿವೆ. 20 ವರ್ಷಗಳ ಸೀಮಿತ ಅವಧಿಗೆ ಸುಮಾರು ರೂ.75 ಲಕ್ಷದವರೆಗೂ ಸಾಲ ನೀಡಲು ಸಿದ್ಧವಾಗಿವೆ. ಬನ್ನಿ ಕಡಿಮೆ ಬಡ್ಡಿ ಆಫರ್​ ಮಾಡಿರುವ ಬ್ಯಾಂಕ್​ಗಳು ಯಾವವು ಎಂಬುದನ್ನು ತಿಳಿದುಕೊಳ್ಳೋಣ

20 ವರ್ಷಗಳ ಅವಧಿಗೆ ಕಡಿಮೆ ಬಡ್ಡಿ ದರದಲ್ಲಿ ಸುಮಾರು 75 ಲಕ್ಷಗಳವರೆಗೆ ಸಾಲ ನೀಡುವ ಉನ್ನತ ಬ್ಯಾಂಕ್‌ಗಳಿವು

ಬ್ಯಾಂಕ್​ಬಡ್ಡಿ ದರಇಎಂಐ

ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ,

ಬ್ಯಾಂಕ್​ ಆಫ್ ಇಂಡಿಯಾ,

ಬ್ಯಾಂಕ್​ ಆಫ್ ಮಹಾರಾಷ್ಟ್ರ

8.35ರೂ.64,376

ಬ್ಯಾಂಕ್​ ಆಫ್​ ಬರೋಡಾ,

ಕೆನರಾ ಬ್ಯಾಂಕ್​

ಪಂಜಾಬ್​ ನ್ಯಾಷನಲ್​ ಬ್ಯಾಂಕ್​,

ಇಂಡಿಯನ್​ ಓವರಿಸಿಸ್​ ಬ್ಯಾಂಕ್​

8.4ರೂ.64,613
ಯುಸಿಒ, ಪಂಜಾಬ್​ ಅಂಡ್​ ಸಿಂದ್​ ಬ್ಯಾಂಕ್​8.45ರೂ.64,850
ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, ಹೆಚ್​ಎಸ್​​ಬಿಸಿ ಬ್ಯಾಂಕ್​​, ಕರ್ನಾಟಕ ಬ್ಯಾಂಕ್​8.5ರೂ.65,087
ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್8.6ರೂ.65,562
ಸೌತ್​ ಇಂಡಿಯನ್​ ಬ್ಯಾಂಕ್​8.7ರೂ.66,039

ಈ ವಿಷಯಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ: ದೀಪಾವಳಿ ಸಂದರ್ಭದಲ್ಲಿ ನೀಡುವ ಸಾಲದ ಬಗ್ಗೆ ಕೂಲಂಕಷವಾಗಿ ಯೋಚಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ, ಬ್ಯಾಂಕ್‌ಗಳು ಸಾಲದ ಅರ್ಜಿದಾರರ ವಯಸ್ಸು ಮತ್ತು ಆದಾಯದ ಆಧಾರದ ಮೇಲೆ EMI ಅವಧಿಯನ್ನು ನಿರ್ಧರಿಸುತ್ತವೆ. ಆದರೆ, ಹಬ್ಬದ ಸಂದರ್ಭದಲ್ಲಿ ಸೀಮಿತ ಅವಧಿಗೆ ಮಾತ್ರ ಸಾಲ ನೀಡಲಾಗುತ್ತದೆ. ಅದಕ್ಕಾಗಿಯೇ ಸಾಲವನ್ನು ತೆಗೆದುಕೊಳ್ಳುವಾಗ ಬ್ಯಾಂಕ್ ನೀತಿಗಳು ಮತ್ತು ಸಾಲದ ನಿಯಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಮುಂಗಡ ಪಾವತಿಗಳು ಮತ್ತು ಮುಟ್ಟುಗೋಲುಗಳ ಬಗ್ಗೆ ಇರುವ ನಿಯಮಗಳ ಬಗ್ಗೆ ಸೂಕ್ತವಾಗಿ ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಸಾಲದ ಆರಂಭಿಕ ಮರುಪಾವತಿಗೆ ಕೆಲವು ಬ್ಯಾಂಕುಗಳು ವಿಧಿಸುವ ದಂಡಗಳ ಬಗ್ಗೆಯೂ ನೀವು ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ.

ಸಾಲದ ಅರ್ಜಿ ಪೂರ್ಣಗೊಳಿಸುವ ಮತ್ತು ಅನುಮೋದಿಸುವ ಪ್ರಕ್ರಿಯೆಯು ಮೊದಲ ಹಂತವಾಗಿದೆ. ಸಾಲ ಮಂಜೂರಾದ ನಂತರ ಬ್ಯಾಂಕ್‌ನೊಂದಿಗೆ 20 ವರ್ಷಗಳ ಸರಿಯಾದ ಸಂಬಂಧ ಹೊಂದಿರುತ್ತೇವೆ. ಹೀಗಾಗಿ ಸಾಲ ಮಂಜೂರಾತಿ ಪ್ರಕ್ರಿಯೆಯಿಂದ ಸಾಲದ ಪರಿಹಾರದವರೆಗೆ ಬ್ಯಾಂಕ್ ಒದಗಿಸುವ ಉತ್ತಮ ಗ್ರಾಹಕ ಸೇವೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ. ಬ್ಯಾಂಕ್ ಸೇವೆಗಳ ಗುಣಮಟ್ಟ, ಸ್ಪಂದಿಸುವಿಕೆ ಗ್ರಾಹಕರಿಗೆ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಗ್ರಾಹಕರು ಉತ್ತಮ ಸೇವೆಗಳನ್ನು ಒದಗಿಸುವ ಬ್ಯಾಂಕ್​​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.

ಇವುಗಳನ್ನೂ ಓದಿ:ಷೇರು ಮಾರುಕಟ್ಟೆ: ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ 1 ಲಕ್ಷ ಕೋಟಿಗೂ ಅಧಿಕ ಹೂಡಿಕೆ

ರಿಸ್ಕ್​ ಕಡಿಮೆ, ಆದಾಯ ಹೆಚ್ಚು: ಇವು ಟಾಪ್ 10 ಸರ್ಕಾರಿ ಉಳಿತಾಯ ಯೋಜನೆಗಳು!

ಟ್ರೇಡಿಂಗ್​ ಶುಭ ಮುಹೂರ್ತ ಎಂದರೇನು; ಸಮಯ, ದಿನಾಂಕ ಮತ್ತು ಮಹತ್ವವೇನು?; ಏನ್​ ಹೇಳುತ್ತೆ ಸಂಪ್ರದಾಯ!?

ಇಲ್ಲಿ ಅಗ್ಗ..ಅಗ್ಗ..ಅಗ್ಗ: ಕಿಲೋ ಈರುಳ್ಳಿಗೆ ಕೇವಲ 15 ರೂ.!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.