ETV Bharat / business

ಭಾರತದಲ್ಲಿದ್ದಾರೆ 334 ಶತಕೋಟ್ಯಧಿಪತಿಗಳು: ಮುಂಚೂಣಿಯಲ್ಲಿ ಅದಾನಿ, ಅಂಬಾನಿ - billionaires in India - BILLIONAIRES IN INDIA

ಭಾರತದಲ್ಲಿನ ಶತಕೋಟ್ಯಧಿಪತಿಗಳ ಸಂಖ್ಯೆ 334ಕ್ಕೆ ಏರಿಕೆಯಾಗಿದೆ.

ಗೌತಮ್ ಅದಾನಿ
ಗೌತಮ್ ಅದಾನಿ (IANS)
author img

By ETV Bharat Karnataka Team

Published : Aug 29, 2024, 4:10 PM IST

ಮುಂಬೈ: ಭಾರತದಲ್ಲಿ ಪ್ರಸ್ತುತ ದಾಖಲೆಯ 334 ಶತಕೋಟ್ಯಧಿಪತಿಗಳಿದ್ದಾರೆ (ಬಿಲಿಯನೇರ್​) ಎಂದು ಗುರುವಾರ ಬಿಡುಗಡೆಯಾದ '2024 ಹುರುನ್ ಇಂಡಿಯಾ ರಿಚ್ ಲಿಸ್ಟ್' ತಿಳಿಸಿದೆ. ಗೌತಮ್ ಅದಾನಿ ಮತ್ತು ಅವರ ಕುಟುಂಬಸ್ಥರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶತಕೋಟ್ಯಧಿಪತಿಗಳ ಪ್ರಮಾಣ ಶೇ 75ರಷ್ಟು ಹೆಚ್ಚಾಗಿದೆ.

11.6 ಲಕ್ಷ ಕೋಟಿ ರೂ.ಗಳ ಸಂಪತ್ತಿನೊಂದಿಗೆ, ಗೌತಮ್ ಅದಾನಿ ಮತ್ತು ಕುಟುಂಬದ ಸಂಪತ್ತು ಶೇಕಡಾ 95 ರಷ್ಟು ಭಾರಿ ಏರಿಕೆಯಾಗಿದ್ದು, ಹುರುನ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 10,14,700 ಕೋಟಿ ರೂ.ಗಳ ಸಂಪತ್ತಿನೊಂದಿಗೆ ಮುಕೇಶ್ ಅಂಬಾನಿ ಎರಡನೇ ಸ್ಥಾನದಲ್ಲಿದ್ದರೆ, ಶಿವ ನಾಡರ್ ಮತ್ತು ಎಚ್​ಸಿಎಲ್ ಟೆಕ್ನಾಲಜೀಸ್ ಕುಟುಂಬ 3,14,000 ಕೋಟಿ ರೂ.ಗಳ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದೆ.

134 ನಗರಗಳಲ್ಲಿ ದಾಖಲೆಯ 1,539 ಭಾರತೀಯರು (220 ರಷ್ಟು ಏರಿಕೆ) ಈಗ ಸರಾಸರಿ 1,000 ಕೋಟಿ ರೂ.ಗಳ ಸಂಪತ್ತನ್ನು ಹೊಂದಿದ್ದಾರೆ. ಇದು ಏಳು ವರ್ಷಗಳ ಹಿಂದಿನದಕ್ಕಿಂತ ಶೇಕಡಾ 150 ರಷ್ಟು ಹೆಚ್ಚಳವಾಗಿದೆ. ಕುಟುಂಬ ನಡೆಸುವ ವ್ಯವಹಾರಗಳು ಮತ್ತು ಸ್ಟಾರ್ಟ್ಅಪ್ ಸಂಸ್ಥಾಪಕರಿಂದ ಹಿಡಿದು ಖಾಸಗಿ ಈಕ್ವಿಟಿ ಹೂಡಿಕೆದಾರರು, ಏಂಜೆಲ್ ಹೂಡಿಕೆದಾರರು, ಮುಂದಿನ ಪೀಳಿಗೆಯ ನಾಯಕರು, ಚಲನಚಿತ್ರ ತಾರೆಯರು ಮತ್ತು ಇನ್ನೂ ಅನೇಕರು ಈ ಸಾವಿರ ಕೋಟಿಯ ಸಂಪತ್ತಿನ ಒಡೆಯರಲ್ಲಿ ಸೇರಿದ್ದಾರೆ.

ಕಳೆದ ವರ್ಷ ದೇಶದಲ್ಲಿ ಪ್ರತಿ ಐದು ದಿನಗಳಿಗೊಮ್ಮೆ ಒಬ್ಬ ಹೊಸ ಬಿಲಿಯನೇರ್ ಹುಟ್ಟಿಕೊಂಡಿದ್ದಾರೆ ಎಂದು ಪಟ್ಟಿ ತಿಳಿಸಿದೆ. ಚೀನಾದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆ ಶೇಕಡಾ 25 ರಷ್ಟು ಕುಸಿತ ಕಂಡರೆ, ಭಾರತದಲ್ಲಿ ಈ ಪ್ರಮಾಣ ಶೇಕಡಾ 29 ರಷ್ಟು ಏರಿಕೆಯಾಗಿದ್ದು, ಶತಕೋಟ್ಯಾಧಿಪತಿಗಳ ಸಂಖ್ಯೆ ದಾಖಲೆಯ 334ಕ್ಕೆ ತಲುಪಿದೆ.

ಸಂಚಿತ ಸಂಪತ್ತು ಶೇಕಡಾ 46 ರಷ್ಟು ಹೆಚ್ಚಾಗಿದ್ದರೆ, ಸರಾಸರಿ ಸಂಪತ್ತು ಶೇಕಡಾ 25 ರಷ್ಟು ಹೆಚ್ಚಾಗಿದೆ. ಸುಮಾರು 1,334 ವ್ಯಕ್ತಿಗಳ ಸಂಪತ್ತಿನಲ್ಲಿ ಏರಿಕೆಯಾಗಿದೆ ಅಥವಾ ಹಾಗೆಯೇ ಉಳಿದಿದೆ. ಇವರ ಪೈಕಿ 272 ಜನ ಹೊಸಬರಾಗಿದ್ದರೆ, 205 ಜನರ ಸಂಪತ್ತು ಕುಸಿದಿದೆ ಮತ್ತು 45 ಜನ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ಉತ್ಪನ್ನಗಳ ವಲಯದ ಉದ್ಯಮಿಗಳು ಪಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿದ್ದಾರೆ. ಪಟ್ಟಿಯಲ್ಲಿನ 142 ಸಿರಿವಂತರು ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸುವ ವಲಯದಿಂದಲೇ ಬಂದಿದ್ದಾರೆ. ಸಿರಿವಂತರ ಈ ಪಟ್ಟಿಯಲ್ಲಿ ಅತ್ಯಂತ ಕಿರಿಯ ವ್ಯಕ್ತಿ 21 ವರ್ಷದವರಾಗಿದ್ದಾರೆ.

ಇದನ್ನೂ ಓದಿ : 6,456 ಕೋಟಿ ರೂ. ಮೊತ್ತದ 3 ರೈಲು ಯೋಜನೆಗಳಿಗೆ ಅನುಮೋದನೆ: 114 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿ - New Railways Projects

ETV Bharat Logo

Copyright © 2024 Ushodaya Enterprises Pvt. Ltd., All Rights Reserved.