ETV Bharat / business

15 ವರ್ಷಕ್ಕೂ ಹಳೆಯ 11 ಲಕ್ಷ ವಾಹನ ಗುಜರಿಯಾದರೆ ವಾಹನೋದ್ಯಮಕ್ಕೆ ಉತ್ತೇಜನ: ಐಸಿಆರ್​ಎ ವರದಿ - SCRAPPAGE POLICY

ದೇಶದಲ್ಲಿರುವ 1.1 ದಶಲಕ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಿದಲ್ಲಿ ವಾಹನೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ಐಸಿಆರ್​ಎ ವರದಿ ಹೇಳಿದೆ.

ಹಳೆಯ ವಾಹನಗಳು
ಹಳೆಯ ವಾಹನಗಳು (IANS)
author img

By ETV Bharat Karnataka Team

Published : Oct 8, 2024, 4:18 PM IST

ನವದೆಹಲಿ: ದೇಶದಲ್ಲಿ ಈಗ 15 ವರ್ಷಕ್ಕಿಂತ ಹಳೆಯದಾದ 1.1 ದಶಲಕ್ಷಕ್ಕಿಂತಲೂ (11 ಲಕ್ಷ) ಹೆಚ್ಚು ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳಿರುವುದರಿಂದ ಕೇಂದ್ರ ಸರ್ಕಾರದ ವಾಹನ ಗುಜರಿ ನೀತಿಯು ವ್ಯಾಪಕ ಮಹತ್ವ ಪಡೆದುಕೊಂಡಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.

ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ಮತ್ತೆ 5.7 ಲಕ್ಷ ವಾಹನಗಳು 15 ವರ್ಷಗಳ ವಯಸ್ಸಿನ ಮಿತಿಯನ್ನು ದಾಟಲಿವೆ ಎಂದು ರೇಟಿಂಗ್ ಏಜೆನ್ಸಿ ಐಸಿಆರ್​ಎ ಅಂದಾಜಿಸಿದೆ.

ಈ ವಾಹನಗಳ ಪೈಕಿ ಒಂದು ಸಣ್ಣ ಪ್ರಮಾಣವನ್ನು ಗುಜರಿಗೆ ಹಾಕಿದರೂ ಸಾಕು ಹೊಸ ವಾಹನಗಳ ಮಾರುಕಟ್ಟೆ ಚೇತರಿಸಿಕೊಳ್ಳಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಗುಜರಿ ನೀತಿಯ ಅಡಿಯಲ್ಲಿ ಮೊದಲ ಹಂತದಲ್ಲಿ 9 ಲಕ್ಷಕ್ಕೂ ಹೆಚ್ಚು ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡಲು ಪ್ರಸ್ತಾಪಿಸಲಾಗಿದ್ದು, ಇದು ವಾಹನ ಉದ್ಯಮದಲ್ಲಿ ಗಮನಾರ್ಹ ಬೇಡಿಕೆಯನ್ನು ಸೃಷ್ಟಿಸಲಿದೆ.

ವರದಿಯ ಪ್ರಕಾರ, 15 ವರ್ಷಗಳನ್ನು ಮೀರಿದ ದ್ವಿಚಕ್ರ ವಾಹನಗಳು, ಪ್ರಯಾಣಿಕರ ವಾಹನಗಳು ಮತ್ತು ಲಘು ವಾಣಿಜ್ಯ ವಾಹನಗಳ (ಎಲ್​ಸಿವಿ) ಬಳಕೆ ಸೀಮಿತವಾಗಿರುವುದರಿಂದ ಇವುಗಳ ಗುಜರಿ ಪ್ರಮಾಣ ಕಡಿಮೆಯಾಗಿರಲಿದೆ. ಆಗಸ್ಟ್ 31 ರವರೆಗೆ, ನೋಂದಾಯಿತ ವಾಹನ ಗುಜರಿ ಕೇಂದ್ರಗಳಿಗೆ (ಆರ್​ವಿಎಸ್ಎಫ್​ಗಳು) ಕೇವಲ 44,803 ಖಾಸಗಿ ಸ್ಕ್ರ್ಯಾಪ್ ಅರ್ಜಿಗಳು ಮತ್ತು 41,432 ಸರ್ಕಾರಿ ಸ್ಕ್ರ್ಯಾಪ್ ಅರ್ಜಿಗಳು (ರಕ್ಷಣಾ / ಮುಟ್ಟುಗೋಲು ಸ್ಕ್ರ್ಯಾಪ್ ಅರ್ಜಿಗಳು ಸೇರಿದಂತೆ) ಸಲ್ಲಿಕೆಯಾಗಿವೆ.

ಗುಜರಿ ವಾಹನಗಳ ನಿರ್ವಹಣೆಯ ಮೂಲಸೌಕರ್ಯಕ್ಕಾಗಿ ಭಾರತದಲ್ಲಿ ಪ್ರಸ್ತುತ ದೇಶಾದ್ಯಂತ 117 ಆರ್​ವಿಎಸ್ಎಫ್​ ಕೇಂದ್ರಗಳಿವೆ. ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ ಮತ್ತೆ 50 ರಿಂದ 70 ಆರ್​ವಿಎಸ್ಎಫ್​ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

"ವಾಹನ ಸ್ಕ್ರ್ಯಾಪೇಜ್ ನೀತಿಯು ದೀರ್ಘಾವಧಿಯಲ್ಲಿ ಅನೇಕ ಪ್ರಯೋಜನಗಳನ್ನು ನೀಡಲಿದೆ. ಹಳೆಯ ಮಾಲಿನ್ಯಕಾರಕ ವಾಹನಗಳು ಸ್ಕ್ರ್ಯಾಪ್ ಆಗುವುದರಿಂದ ವಾಯುಮಾಲಿನ್ಯ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದು ಹೊಸ ವಾಹನಗಳ ಅಳವಡಿಕೆಗೆ ಉತ್ತೇಜನ ನೀಡುತ್ತದೆ ಹಾಗೂ ಈ ಮೂಲಕ ವಾಹನ ಮಾರುಕಟ್ಟೆಯನ್ನು ಹೆಚ್ಚಿಸುತ್ತದೆ" ಎಂದು ಐಸಿಆರ್​ಎ ಕಾರ್ಪೊರೇಟ್ ರೇಟಿಂಗ್ಸ್​ನ ಎಸ್​ವಿಪಿ ಮತ್ತು ಕೊ-ಗ್ರೂಪ್ ಮುಖ್ಯಸ್ಥ ಕಿಂಜಲ್ ಶಾ ಹೇಳಿದರು.

ಸ್ಕ್ರ್ಯಾಪೇಜ್ ಪಾಲಿಸಿ ಫ್ರೇಮ್ ವರ್ಕ್ ಅಡಿಯಲ್ಲಿ ಲೋಹಗಳ ಮರುಬಳಕೆಯ ಮೂಲಕ ಆಟೋಮೋಟಿವ್ ಮೂಲ ಉಪಕರಣ ತಯಾರಕರ (ಒಇಎಂ) ಸ್ಕ್ರ್ಯಾಪ್ ಆಮದು ಮತ್ತು ಕಚ್ಚಾ ವಸ್ತುಗಳ ವೆಚ್ಚಗಳಲ್ಲಿ ಗಣನೀಯ ಕಡಿತವಾಗಬಹುದು ಎಂದು ರೇಟಿಂಗ್ ಏಜೆನ್ಸಿ ಹೇಳಿದೆ. ಮಾರ್ಚ್ 2021 ರಲ್ಲಿ ಭಾರತದಲ್ಲಿ ಘೋಷಿಸಲಾದ ಸ್ವಯಂಪ್ರೇರಿತ ವಾಹನ ಫ್ಲೀಟ್ ಆಧುನೀಕರಣ ಕಾರ್ಯಕ್ರಮ ಅಥವಾ ಸ್ಕ್ರ್ಯಾಪೇಜ್ ನೀತಿಯನ್ನು ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ.

ಇದನ್ನೂ ಓದಿ : ಈರುಳ್ಳಿ ಬಳಿಕ ಬೆಳ್ಳುಳ್ಳಿ ದರವೂ ಏರಿಕೆ; ಕೆ.ಜಿಗೆ 400 ರೂಪಾಯಿ! - Garlic Price increased

ETV Bharat Logo

Copyright © 2025 Ushodaya Enterprises Pvt. Ltd., All Rights Reserved.