ETV Bharat / business

ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 168 ಅಂಕ ಇಳಿಕೆ, ಇಂಟ್ರಾಡೇಯಲ್ಲಿ ವರ್ಷದ ಗರಿಷ್ಠಕ್ಕೇರಿದ 184 ಷೇರುಗಳು - STOCK MARKET TODAY

ಬುಧವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಇಳಿಕೆಯೊಂದಿಗೆ ಕೊನೆಗೊಂಡವು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Oct 9, 2024, 5:46 PM IST

ಮುಂಬೈ: ಬುಧವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಕುಸಿದರೂ, ಇನ್ಫೋಸಿಸ್, ದಿವಿಸ್ ಲ್ಯಾಬ್ಸ್, ಸಿಪ್ಲಾ, ನೌಕ್ರಿ ಮತ್ತು ಟ್ರೆಂಟ್ ಸೇರಿದಂತೆ 184 ಷೇರುಗಳು ಬಿಎಸ್ಇಯಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ ತಮ್ಮ ಹೊಸ ಒಂದು ವರ್ಷದ ಗರಿಷ್ಠ ಮಟ್ಟವನ್ನು ತಲುಪಿದವು. ಬಾಷ್, ಕೊಫೋರ್ಜ್, ಡಿಕ್ಸನ್ ಟೆಕ್ನಾಲಜೀಸ್, ಇಪ್ಕಾ ಲ್ಯಾಬೊರೇಟರೀಸ್, ಪೇಜ್ ಇಂಡಸ್ಟ್ರೀಸ್, ಪಾಲಿಕ್ಯಾಬ್ ಇಂಡಿಯಾ, ಟೊರೆಂಟ್ ಫಾರ್ಮಾ ಮತ್ತು ಟೊರೆಂಟ್ ಪವರ್ ಇಂದಿನ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದ ಷೇರುಗಳಲ್ಲಿ ಸೇರಿವೆ.

ಸೆನ್ಸೆಕ್ಸ್ 168 ಪಾಯಿಂಟ್ ಅಥವಾ ಶೇಕಡಾ 0.21 ರಷ್ಟು ಕುಸಿದು 81,467.10 ರಲ್ಲಿ ಕೊನೆಗೊಂಡರೆ, ನಿಫ್ಟಿ50 31 ಪಾಯಿಂಟ್ ಅಥವಾ ಶೇಕಡಾ 0.12 ರಷ್ಟು ಕುಸಿದು 24,981.95 ರಲ್ಲಿ ಕೊನೆಗೊಂಡಿತು.

30 ಷೇರುಗಳ ಪ್ಯಾಕ್ ಸೆನ್ಸೆಕ್ಸ್​ನಲ್ಲಿ 15 ಷೇರುಗಳು ಕುಸಿದವು. ಸೆನ್ಸೆಕ್ಸ್​ನಲ್ಲಿ ಐಟಿಸಿ, ನೆಸ್ಲೆ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಹೆಚ್ಚು ನಷ್ಟ ಅನುಭವಿಸಿದವು. ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ವಿಭಾಗಗಳು ಲಾಭದೊಂದಿಗೆ ಕೊನೆಗೊಂಡವು. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ಶೇಕಡಾ 1.06 ರಷ್ಟು ಏರಿಕೆ ಕಂಡರೆ, ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 1.21 ರಷ್ಟು ಏರಿಕೆಯಾಗಿದೆ.

ಮಧ್ಯಮ ಮತ್ತು ಸಣ್ಣ ಕ್ಯಾಪ್ ವಿಭಾಗಗಳಲ್ಲಿನ ಲಾಭದಿಂದಾಗಿ, ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ ಇದ್ದ 459.5 ಲಕ್ಷ ಕೋಟಿ ರೂ.ಗಳಿಂದ ಸುಮಾರು 462.2 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದರಿಂದ ಹೂಡಿಕೆದಾರರು ಒಂದೇ ದಿನದ ವಹಿವಾಟಿನಲ್ಲಿ 2.7 ಲಕ್ಷ ಕೋಟಿ ರೂ.ಗಳಷ್ಟು ಶ್ರೀಮಂತರಾಗಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಪ್ರಮುಖ ಬಡ್ಡಿದರಗಳನ್ನು ಬದಲಾಯಿಸದೆ ಯಥಾಸ್ಥಿತಿಯಲ್ಲಿ ಮುಂದುವರಿಸಿರುವುದರ ಮಧ್ಯೆ ರೂಪಾಯಿ ಬುಧವಾರ ಯುಎಸ್ ಡಾಲರ್ ವಿರುದ್ಧ ಕೇವಲ 1 ಪೈಸೆ ಏರಿಕೆಯಾಗಿ 83.96 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ ಅಮೇರಿಕನ್ ಕರೆನ್ಸಿಯ ವಿರುದ್ಧ 83.92 ಕ್ಕೆ ಪ್ರಾರಂಭವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 5 ಪೈಸೆ ಏರಿಕೆಯಾಗಿದೆ. ಮಂಗಳವಾರ (ಅಕ್ಟೋಬರ್ 8, 2024) ಯುಎಸ್ ಡಾಲರ್ ವಿರುದ್ಧ ರೂಪಾಯಿ 3 ಪೈಸೆ ಏರಿಕೆಯಾಗಿ 83.97 ಕ್ಕೆ ತಲುಪಿತ್ತು.

ಇದನ್ನೂ ಓದಿ: 10 ನೇ ಸಲವೂ ರೆಪೋ ರೇಟ್​​ನಲ್ಲಿ ಇಲ್ಲ ಯಾವುದೇ ಬದಲಾವಣೆ : ಗೃಹ ಸಾಲದ ಮೇಲಿಲ್ಲ ಹೆಚ್ಚಿನ ಬಡ್ಡಿ ಹೊರೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.