ETV Bharat / business

ಇದೇ ಮೊದಲ ಬಾರಿಗೆ 75 ಸಾವಿರ ದಾಟಿದ ಸೆನ್ಸೆಕ್ಸ್​: ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿದ ನಿಫ್ಟಿ - Stock Market

ಭಾರತದ ಷೇರು ಮಾರುಕಟ್ಟೆಗಳು ಬುಧವಾರ ಮತ್ತೊಂದು ಸಾರ್ವಕಾಲಿಕ ಏರಿಕೆಯೊಂದಿಗೆ ಕೊನೆಗೊಂಡಿವೆ.

author img

By ETV Bharat Karnataka Team

Published : Apr 10, 2024, 5:36 PM IST

Sensex settles above 75,000-mark for first time, Nifty closes at record high

ಮುಂಬೈ: ಎಫ್ ಎಂಸಿಜಿ, ಇಂಧನ ಮತ್ತು ಲೋಹದ ಷೇರುಗಳಲ್ಲಿನ ಲಾಭದಿಂದಾಗಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ 354 ಪಾಯಿಂಟ್ ಗಳ ಏರಿಕೆ ಕಂಡು ಮೊದಲ ಬಾರಿಗೆ ದಾಖಲೆಯ 75,000 ಗಡಿ ದಾಟಿದ್ದು, ವಿಶಾಲ ನಿಫ್ಟಿ ಕೂಡ ಬುಧವಾರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 354.45 ಪಾಯಿಂಟ್ಸ್ ಅಥವಾ ಶೇಕಡಾ 0.47 ರಷ್ಟು ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 75,038.15 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಸೂಚ್ಯಂಕವು 421.44 ಪಾಯಿಂಟ್ ಅಥವಾ ಶೇಕಡಾ 0.56 ರಷ್ಟು ಏರಿಕೆ ಕಂಡು 75,105.14 ಕ್ಕೆ ತಲುಪಿತ್ತು. ಎನ್ಎಸ್ಇ ಸೂಚ್ಯಂಕ ನಿಫ್ಟಿ 111.05 ಪಾಯಿಂಟ್ಸ್ ಅಥವಾ ಶೇಕಡಾ 0.49 ರಷ್ಟು ಏರಿಕೆ ಕಂಡು 22,753.80 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 132.95 ಪಾಯಿಂಟ್ ಅಥವಾ ಶೇಕಡಾ 0.58 ರಷ್ಟು ಏರಿಕೆ ಕಂಡು 22,775.70 ಕ್ಕೆ ತಲುಪಿತ್ತು.

ಪ್ರಮುಖ ಸೂಚ್ಯಂಕಗಳು ಮಂಗಳವಾರ ಇಂಟ್ರಾ-ಡೇ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದವು. ಸೆನ್ಸೆಕ್ಸ್​ನಲ್ಲಿ ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಭಾರ್ತಿ ಏರ್ ಟೆಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನೆಸ್ಲೆ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಮಾರುತಿ, ಎಚ್ ಡಿಎಫ್ ಸಿ ಬ್ಯಾಂಕ್, ಲಾರ್ಸನ್ ಅಂಡ್ ಟೂಬ್ರೊ ಮತ್ತು ಮಹೀಂದ್ರಾ & ಮಹೀಂದ್ರಾ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಮಂಗಳವಾರ 593.20 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಅಂಕಿಅಂಶಗಳು ತಿಳಿಸಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಟೋಕಿಯೊ ಮತ್ತು ಶಾಂಘೈ ಇಳಿಕೆಯಲ್ಲಿ ಕೊನೆಗೊಂಡರೆ, ಹಾಂಗ್ ಕಾಂಗ್ ಮಾರುಕಟ್ಟೆ ಏರಿಕೆಯಲ್ಲಿ ಕೊನೆಗೊಂಡಿತು. ದಕ್ಷಿಣ ಕೊರಿಯಾದ ಮಾರುಕಟ್ಟೆಗಳು ಚುನಾವಣೆಯ ಕಾರಣದಿಂದ ಮುಚ್ಚಲ್ಪಟ್ಟಿದ್ದವು. ಯುರೋಪಿಯನ್ ಮಾರುಕಟ್ಟೆಗಳು ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದವು. ವಾಲ್ ಸ್ಟ್ರೀಟ್ ಮಂಗಳವಾರ ಲಾಭದೊಂದಿಗೆ ಕೊನೆಗೊಂಡಿತು. ಜಾಗತಿಕ ತೈಲ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.18 ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 89.58 ಡಾಲರ್​ಗೆ ತಲುಪಿದೆ.

ಬಿಎಸ್ಇ ಬೆಂಚ್ ಮಾರ್ಕ್ ಮಂಗಳವಾರ 58.80 ಪಾಯಿಂಟ್ ಅಥವಾ ಶೇಕಡಾ 0.08 ರಷ್ಟು ಕುಸಿದು 74,683.70 ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ ಮಂಗಳವಾರ 23.55 ಪಾಯಿಂಟ್ಸ್ ಅಥವಾ ಶೇಕಡಾ 0.10 ರಷ್ಟು ಕುಸಿದು 22,642.75 ಕ್ಕೆ ತಲುಪಿತ್ತು.

ಇದನ್ನೂ ಓದಿ: ವಿದೇಶಗಳಲ್ಲಿ ಭಾರತೀಯರಿಂದ 109 ಯುನಿಕಾರ್ನ್​ ಸ್ಟಾರ್ಟ್​ಅಪ್​ಗಳ ಸ್ಥಾಪನೆ: ವರದಿ - UNICORN STARTUPS

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.