ನವದೆಹಲಿ: ದಂತೆರಸ್ ಹಾಗೂ ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸುವ ಸಂಪ್ರದಾಯವಿದೆ. ಆದರೆ, ಏರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇದು ಕೊಂಚ ಯೋಚಿಸುವ ವಿಚಾರವಾಗಿದೆ. ಈ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಹಿಂದೆ ಕೇವಲ ಹಬ್ಬದ ಸಂಭ್ರಮ ಮಾತ್ರವಲ್ಲ, ಭೌಗೋಳಿಕ ರಾಜಕೀಯ, ಅಮೆರಿಕ ಚುನಾವಣೆ ಹಾಗೂ ಇತ್ತೀಚಿಗೆ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಬಡ್ಡಿ ಕಡಿತದ ವಿಚಾರಗಳು ಕೂಡ ಪ್ರಭಾವ ಬೀರುತ್ತಿವೆ.
ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡಲು ಪ್ರಾರಂಭಿಸದಾಗಿನಿಂದ ಅಮೆರಿಕದ ಮಾರುಕಟ್ಟೆಯಲ್ಲಿ 200 ಡಾಲರ್ನಿಂದ ನಿರಂತರವಾಗಿ ಚಿನ್ನದ ದರ ಏರಿಕೆ ಕಾಣುತ್ತಿದೆ. ಫಲಿತಾಂಶವಾಗಿ ಭಾರತದ ಮಾರುಕಟ್ಟೆಯಲ್ಲೂ ಕೂಡ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದೆ. ಅದರಲ್ಲೂ ಬೆಳ್ಳಿ ಕೆಜಿಗೆ 1,01,000 ಆಗುವ ಮೂಲಕ ಹೊಸ ದಾಖಲೆ ಬರೆದಿದ್ದರೆ, ಇಂದು ಚಿನ್ನದ ದರ 10 ಗ್ರಾಂಗೆ 79,470 ರೂ ಇದೆ.
ಕೈಗಾರಿಕ ವಲಯದಲ್ಲಿನ ಬೇಡಿಕೆ ಹೆಚ್ಚಳ ಕೂಡ ಬೆಳ್ಳಿ ದರದ ಏರಿಕೆ ಹಿಂದಿನ ಕಾರಣವಾಗಿದೆ. ಚೀನಾ ಬಡ್ಡಿ ದರ ಕಡಿತವು ಬೆಳ್ಳಿಯ ಬಳಕೆಯನ್ನು ಹೆಚ್ಚಿಸುವ ಕೈಗಾರಿಕಾ ಚಟುವಟಿಕೆಗಳನ್ನು ಹೆಚ್ಚಿಸಲು ಕಾರಣವಾಗಿದೆ. ಬೇಡಿಕೆ ಮತ್ತು ಪೂರೈಕೆ ನಡುವಿನ ಅಸಮತೋಲನವು ಕೂಡ ಈ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಭವಿಷ್ಯದಲ್ಲಿ ಕೂಡ ಈ ಏರಿಕೆ ಮುಂದುವರೆಯುವ ಸಾಧ್ಯತೆಗಳಿವೆ.
ದಂತೆರಸ್ಗೆ ಬೆಳ್ಳಿ ಖರೀದಿ: ದೀಪಾವಳಿ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಕೊಳ್ಳುವುದು ಶುಭ ಎಂದು ನಂಬಲಾಗಿದೆ. ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿಯ ಖರೀದಿಯು ಮುಂಬರುವ ದಿನದಲ್ಲಿ ಲಾಭ ನೀಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದರೂ, ಬೆಳ್ಳಿ ದರ ಕೊಂಚ ಕಡಿಮೆ ಇದೆ. ಸದ್ಯ ಇದು 49.50 ಡಾಲರ್ ಬೆಲೆ ಹೊಂದಿದ್ದು, ಪ್ರತಿ ಔನ್ಸ್ಗೆ 34- 35 ಡಾಲರ್ ಇದೆ. ಅಲ್ಲದೇ ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿಯ ಬೆಳವಣಿಗೆಗೆ ಹೆಚ್ಚಿದೆ ಎಂದು ಸೂಚಿಸುತ್ತದೆ.
ದೇಶಿಯ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಈಗಾಗಲೇ ಕೆಜಿಗೆ 1 ಲಕ್ಷ ದಾಟಿದೆ. ಅಂತಾರಾಷ್ಟ್ರೀಯ ದರದಲ್ಲಿ ಏರಿಕೆ ಕಂಡರೆ ದೇಶಿಯ ಮಾರುಕಟ್ಟೆಯಲ್ಲಿ ಬೆಳ್ಳಿ ಕೆಜಿಗೆ 1.25 ಲಕ್ಷ ಆದರೂ ಆಶ್ಚರ್ಯವಿಲ್ಲ.
ಹೂಡಿಕೆ ತಂತ್ರಗಾರಿಕೆ: ಅನೂಜ್ ಗುಪ್ತಾ ಪ್ರಕಾರ, ಚಿನ್ನ ಮತ್ತು ಬೆಳ್ಳಿಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವುದು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ರೀತಿ ಇರಲಿದೆ. ಇದು ದೀರ್ಘಾವಧಿಯ ದೃಷ್ಟಿಯನ್ನು ಹೊಂದಿದ್ದು, ಉತ್ತಮ ಆದಾಯದ ಸಲಹೆ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ 1 ಗ್ರಾಂನಿಂದಲೂ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಬಹುದಾಗಿದೆ.
ಮಾರುಕಟ್ಟೆಯ ಏರಿಳಿತಗಳ ಲಾಭವನ್ನು ಪಡೆಯಲು ತಜ್ಞರು ಏಕರೂಪದ ಮೊತ್ತಕ್ಕಿಂತ ಹೆಚ್ಚಾಗಿ ಹೆಚ್ಚುತ್ತಿರುವ ಹೂಡಿಕೆಗಳನ್ನು ಮಾಡುವುದು ಉತ್ತಮ ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಅಲ್ಲದೇ ಗ್ರಾಹಕರು ಆಭರಣಗಳಿಗಿಂತ ನೇರ ಚಿನ್ನದ ಖರೀದಿಗೆ ಆದ್ಯತೆ ನೀಡುವ ಪ್ರವೃತ್ತಿಯೂ ಹೆಚ್ಚುತ್ತಿದೆ.
ರಿಯಾಯಿತಿ ದರ: ಚಿನ್ನ ಮತ್ತು ಬೆಳ್ಳಿ ದರ ಹೆಚ್ಚುತ್ತಿದ್ದಂತೆ ಚಿಲ್ಲರೆ ಅಭರಣಕಾರರು, ಗ್ರಾಹಕರ ಆಕರ್ಷಣೆಗೆ ಅನೇಕ ರಿಯಾಯಿತಿಯನ್ನು ನೀಡುತ್ತಾರೆ. ಬೆಲೆ ಏರಿಕೆ ನಡುವೆ ಶೇಕಡಾ 5 ರಿಂದ 10 ರವರೆಗೆ ರಿಯಾಯಿತಿ ನೀಡುವುದರಿಂದ ಕೊಳ್ಳುವ ಗ್ರಾಹಕರಿಗೂ ಉತ್ತಮ ಅವಕಾಶ ನೀಡುತ್ತಾರೆ.
ಇದನ್ನೂ ಓದಿ: ₹750 ಏರಿಕೆಯೊಂದಿಗೆ 80 ಸಾವಿರ ದಾಟಿದ ಚಿನ್ನ, ₹1 ಲಕ್ಷ ಸನಿಹದಲ್ಲಿ ಕೆಜಿ ಬೆಳ್ಳಿ!