ETV Bharat / business

ಇಳಿಕೆಯತ್ತ ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 264 ಅಂಕ ಕುಸಿತ, 26,179ಕ್ಕೆ ತಲುಪಿದ ನಿಫ್ಟಿ - STOCK MARKET TODAY

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರ ಇಳಿಕೆಯೊಂದಿಗೆ ಕೊನೆಗೊಂಡಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IAns)
author img

By ETV Bharat Karnataka Team

Published : Sep 27, 2024, 6:23 PM IST

ಮುಂಬೈ: ಭಾರತದ ಎರಡು ಪ್ರಮುಖ ಇಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಇಳಿಕೆಯೊಂದಿಗೆ ಇಂದಿನ ವ್ಯವಹಾರ ಮುಗಿಸಿದವು. ಬೆಳಗಿನ ವಹಿವಾಟಿನಲ್ಲಿ ಸೂಚ್ಯಂಕಗಳು ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದವು. ನಂತರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್​ಇ) 264 ಅಂಕ ಇಳಿಕೆಯಾಗಿ 85,572 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ಇಂಟ್ರಾ-ಡೇ ವಹಿವಾಟಿನಲ್ಲಿ ಹೊಸ ದಾಖಲೆಯ ಗರಿಷ್ಠ 85,978 ಕ್ಕೆ ಏರಿಕೆಯಾಗಿತ್ತು. ಮತ್ತೊಂದೆಡೆ, ಎನ್ಎಸ್ಇ ನಿಫ್ಟಿ 50 ಸಾರ್ವಕಾಲಿಕ ಗರಿಷ್ಠ 26,277 ಕ್ಕೆ ತಲುಪಿತ್ತು. ನಂತರ ಇದು 37 ಅಂಕ ಕುಸಿದು 26,179 ರಲ್ಲಿ ಕೊನೆಗೊಂಡಿತು.

ಈ ಷೇರುಗಳಿಗೆ ಲಾಭ, ಇವುಗಳಿಗೆ ನಷ್ಟ: 30 ಷೇರುಗಳ ಸೆನ್ಸೆಕ್ಸ್​ನಲ್ಲಿ ಸನ್ ಫಾರ್ಮಾ, ರಿಲಯನ್ಸ್, ಟೈಟಾನ್, ಎಚ್​ಸಿಎಲ್ ಟೆಕ್, ಬಜಾಜ್ ಫಿನ್ ಸರ್ವ್, ಏಷ್ಯನ್ ಪೇಂಟ್ಸ್ ಲಾಭ ಗಳಿಸಿದವು. ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಏರ್ ಟೆಲ್, ಎಚ್​ಡಿಎಫ್​ಸಿ ಬ್ಯಾಂಕ್, ಕೋಟಕ್ ಬ್ಯಾಂಕ್, ಎಲ್ &ಟಿ ನಷ್ಟ ಅನುಭವಿಸಿದವು. ವಿಶಾಲ ಮಾರುಕಟ್ಟೆಗಳಲ್ಲಿ, ನಿಫ್ಟಿ ಮಿಡ್ ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.15 ಮತ್ತು ಶೇಕಡಾ 0.10 ರಷ್ಟು ನಷ್ಟದೊಂದಿಗೆ ಕೊನೆಗೊಂಡವು.

ವಲಯವಾರು ಲೆಕ್ಕ ಹೀಗಿದೆ; ಬ್ಯಾಂಕ್ ನಿಫ್ಟಿ, ಮೀಡಿಯಾ, ನಿಫ್ಟಿ ಪ್ರೈವೇಟ್ ಬ್ಯಾಂಕ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇಕಡಾ 1 ಕ್ಕಿಂತ ಹೆಚ್ಚು ನಷ್ಟದೊಂದಿಗೆ ಕೊನೆಗೊಂಡವು. ಇದಕ್ಕೆ ವ್ಯತಿರಿಕ್ತವಾಗಿ, ನಿಫ್ಟಿ ತೈಲ ಮತ್ತು ಅನಿಲ ಸೂಚ್ಯಂಕವು ಇತರ ವಲಯ ಸೂಚ್ಯಂಕಗಳನ್ನು ಮೀರಿಸಿ, ಶೇಕಡಾ 2.37 ರಷ್ಟು ಹೆಚ್ಚಾಗಿದೆ. ಏತನ್ಮಧ್ಯೆ, ಪಿಎಸ್​ಯು ಬ್ಯಾಂಕ್, ಫಾರ್ಮಾ, ಲೋಹ ಮತ್ತು ಐಟಿ ಸೂಚ್ಯಂಕಗಳು ಶೇಕಡಾ 1.15 ರಷ್ಟು ಲಾಭವನ್ನು ದಾಖಲಿಸಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಗಳ ಮಂದಗತಿ ಮತ್ತು ಅಮೆರಿಕನ್ ಕರೆನ್ಸಿಗೆ ತಿಂಗಳಾಂತ್ಯದ ಬೇಡಿಕೆಯ ಹೆಚ್ಚಳದ ಮಧ್ಯೆ ರೂಪಾಯಿ ಶುಕ್ರವಾರ ಯುಎಸ್ ಡಾಲರ್ ವಿರುದ್ಧ 4 ಪೈಸೆ ಕುಸಿದು 83.70 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 83.64 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ ಗರಿಷ್ಠ 83.62 ಮತ್ತು ಕನಿಷ್ಠ 83.71 ರ ನಡುವೆ ಚಲಿಸಿತು. ರೂಪಾಯಿ ಅಂತಿಮವಾಗಿ ಡಾಲರ್ ವಿರುದ್ಧ 83.70 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 4 ಪೈಸೆ ನಷ್ಟವಾಗಿದೆ.

ಇದನ್ನೂ ಓದಿ : ಪ್ರಯಾಣಿಕರಿಗೆ ಖುಷಿ ಸುದ್ದಿ: ದೀಪಾವಳಿ ಹಬ್ಬದ ಸೀಸನ್​ನಲ್ಲಿ 5,975 ವಿಶೇಷ ರೈಲು ಸಂಚಾರ - SPECIAL TRAINS

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.