ETV Bharat / business

ಶೇ 97.5ರಷ್ಟು 2 ಸಾವಿರ ಮುಖಬೆಲೆಯ ನೋಟುಗಳು ಮರಳಿವೆ: ಆರ್​ಬಿಐ - ಆರ್​ಬಿಐ

ಶೇ 97.5 ರಷ್ಟು 2000 ರೂಪಾಯಿ ಮುಖಬೆಲೆಯ ನೋಟುಗಳು ಮರಳಿ ಬಂದಿವೆ ಎಂದು ಆರ್​ಬಿಐ ಹೇಳಿದೆ.

97.5% of Rs 2,000 banknotes returned
97.5% of Rs 2,000 banknotes returned
author img

By ETV Bharat Karnataka Team

Published : Feb 1, 2024, 7:54 PM IST

ಮುಂಬೈ: ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳ ಒಟ್ಟು ಮೌಲ್ಯ 2024ರ ಜನವರಿ 31ರ ವಹಿವಾಟಿನ ಅಂತ್ಯಕ್ಕೆ 8,897 ಕೋಟಿ ರೂಪಾಯಿಗೆ ಇಳಿದಿದೆ. ಹೀಗಾಗಿ ಮೇ 19, 2023 ರ ವೇಳೆಗೆ ಚಲಾವಣೆಯಲ್ಲಿದ್ದ 2,000 ರೂ.ಮುಖ ಬೆಲೆಯ ನೋಟುಗಳ ಪೈಕಿ ಶೇಕಡಾ 97.50 ರಷ್ಟು ನೋಟುಗಳು ಹಿಂತಿರುಗಿವೆ ಎಂದು ಆರ್​ಬಿಐ ಗುರುವಾರ ತಿಳಿಸಿದೆ.

ಮೇ 19, 2023 ರಂದು ವ್ಯವಹಾರದ ಕೊನೆಯಲ್ಲಿ ಚಲಾವಣೆಯಲ್ಲಿದ್ದ 2,000 ರೂ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂ. ಆಗಿತ್ತು. 2,000 ರೂ.ಗಳ ನೋಟುಗಳನ್ನು ಮೇ 19, 2023 ರಿಂದ ರಿಸರ್ವ್ ಬ್ಯಾಂಕಿನ (ಆರ್​ಬಿಐ ವಿತರಣಾ ಕಚೇರಿಗಳು) 19 ವಿತರಣಾ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಅಕ್ಟೋಬರ್ 9, 2023 ರಿಂದ ಆರ್​ಬಿಐ ವಿತರಣಾ ಕಚೇರಿಗಳು ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ವ್ಯಕ್ತಿಗಳು / ಸಂಸ್ಥೆಗಳಿಂದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿವೆ. ಇದಲ್ಲದೇ, ದೇಶದೊಳಗಿನ ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ದೇಶದ ಅಂಚೆ ಕಚೇರಿಗಳಿಂದ ಇಂಡಿಯಾ ಪೋಸ್ಟ್ ಮೂಲಕ ಯಾವುದೇ ಆರ್​ಬಿಐ ವಿತರಣಾ ಕಚೇರಿಗಳಿಗೆ 2,000 ರೂ.ಗಳ ನೋಟುಗಳನ್ನು ಕಳುಹಿಸುತ್ತಿದ್ದಾರೆ ಎಂದು ಆರ್​ಬಿಐ ತಿಳಿಸಿದೆ.

ಅಹ್ಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತಾ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿನ 19 ಆರ್​ಬಿಐ ಕಚೇರಿಗಳು ಬ್ಯಾಂಕ್ ನೋಟುಗಳನ್ನು ವಿನಿಮಯ ಮಾಡಿ ಕೊಡುತ್ತಿವೆ ಅಥವಾ ಠೇವಣಿ ಮಾಡುತ್ತಿವೆ. 2016ರ ನವೆಂಬರ್ ನಲ್ಲಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ 2000 ರೂಪಾಯಿ ನೋಟುಗಳನ್ನು ದೇಶದಲ್ಲಿ ಚಲಾವಣೆಗೆ ತರಲಾಗಿತ್ತು.

2,000 ರೂ.ಗಳನ್ನು ಹಿಂಪಡೆಯಲಾಗುತ್ತಿದ್ದರೂ ಈ ನೋಟುಗಳು ಕಾನೂನುಬದ್ಧ ಕರೆನ್ಸಿಯಾಗಿ ಮುಂದುವರಿಯುತ್ತವೆ ಮತ್ತು ಜನರು ದೇಶದ ಯಾವುದೇ ಅಂಚೆ ಕಚೇರಿ ಮೂಲಕ ಕರೆನ್ಸಿಯನ್ನು ಠೇವಣಿ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಮುನ್ನ ಸ್ಪಷ್ಟಪಡಿಸಿತ್ತು. ಕಳೆದ ವರ್ಷದ ಮೇ 19 ರಂದು "ಕ್ಲೀನ್ ನೋಟ್ ಪಾಲಿಸಿ" ಯ ಭಾಗವಾಗಿ ಆರ್​ಬಿಐ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು.

ಇದನ್ನೂ ಓದಿ : ಕೇಂದ್ರ ಬಜೆಟ್‌: ನೇರ, ಪರೋಕ್ಷ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.