ETV Bharat / business

ಮಸಾಲೆ ಪದಾರ್ಥಗಳ ರಫ್ತು ದಾಖಲೆಯ ಏರಿಕೆ: ಕೆಂಪು ಮೆಣಸಿನಕಾಯಿ ರಫ್ತು ಶೇ 15ರಷ್ಟು ಹೆಚ್ಚಳ - Indias spices exports - INDIAS SPICES EXPORTS

ಭಾರತದಿಂದ ಮಸಾಲೆ ಪದಾರ್ಥಗಳ ರಫ್ತು ಸಾರ್ವಕಾಲಿಕ ಎತ್ತರಕ್ಕೆ ತಲುಪಿದೆ.

ಮಸಾಲೆ ಪದಾರ್ಥಗಳು
ಮಸಾಲೆ ಪದಾರ್ಥಗಳು (IANS (ಸಾಂದರ್ಭಿಕ ಚಿತ್ರ))
author img

By ETV Bharat Karnataka Team

Published : Jun 18, 2024, 5:11 PM IST

ನವದೆಹಲಿ: ಭಾರತದ ಸಾಂಬಾರು ಪದಾರ್ಥಗಳು ಮತ್ತು ಸಾಂಬಾರು ಉತ್ಪನ್ನಗಳ ರಫ್ತು 2023-24ರ ಹಣಕಾಸು ವರ್ಷದಲ್ಲಿ ದಾಖಲೆಯ 4.46 ಬಿಲಿಯನ್ ಡಾಲರ್​ನಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಮೆಣಸು, ಏಲಕ್ಕಿ ಮತ್ತು ಅರಿಶಿನದಂತಹ ಕೆಲ ಪದಾರ್ಥಗಳ ಬೆಲೆಗಳು ಏರಿಕೆಯಾಗಿದ್ದರಿಂದ ಮತ್ತು ಪ್ರಮಾಣ ಹೆಚ್ಚಾಗಿದ್ದರಿಂದ ಈ ಬೆಳವಣಿಗೆ ಕಂಡುಬಂದಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಮಸಾಲೆ ಮಂಡಳಿಯು ನೀಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2023-24ರ ಹಣಕಾಸು ವರ್ಷದಲ್ಲಿ ದೇಶದಿಂದ 36,958.80 ಕೋಟಿ ರೂ.ಗಳ (4.46 ಬಿಲಿಯನ್ ಡಾಲರ್) ಮೌಲ್ಯದ 15,39,692 ಟನ್​ಗಳಷ್ಟು ಸಾಂಬಾರು ಪದಾರ್ಥಗಳು ಮತ್ತು ಮಸಾಲೆ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.

ಚೀನಾ ಮತ್ತು ಬಾಂಗ್ಲಾದೇಶದಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಕೆಂಪು ಮೆಣಸಿನಕಾಯಿ ರಫ್ತು 2024 ರ ಹಣಕಾಸು ವರ್ಷದಲ್ಲಿ ದಾಖಲೆಯ 1.5 ಬಿಲಿಯನ್ ಡಾಲರ್​ಗೆ ತಲುಪಿದೆ. ಇದು ಹಿಂದಿನ ವರ್ಷದ 1.3 ಬಿಲಿಯನ್ ಡಾಲರ್​ಗಿಂತ ಶೇಕಡಾ 15 ರಷ್ಟು ಹೆಚ್ಚಾಗಿದೆ.

ಸಾಂಬಾರು ಪದಾರ್ಥಗಳ ಮಂಡಳಿಯ ಅಂಕಿ ಅಂಶಗಳ ಪ್ರಕಾರ, ಕೆಂಪು ಮೆಣಸಿನಕಾಯಿ ರಫ್ತು ಪ್ರಮಾಣವು 2024 ರ ಹಣಕಾಸು ವರ್ಷದಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿ ಹಿಂದಿನ ವರ್ಷ ಇದ್ದ 5.24 ಲಕ್ಷ ಟನ್​ಗಳಿಂದ 6.01 ಲಕ್ಷ ಟನ್​ಗಳಿಗೆ ತಲುಪಿದೆ. 1.5 ಬಿಲಿಯನ್ ಡಾಲರ್ ಮೌಲ್ಯದ ಕೆಂಪು ಮೆಣಸಿನಕಾಯಿಯನ್ನು ರಫ್ತು ಮಾಡಲಾಗಿದ್ದು, ಇದು ಭಾರತದ ಒಟ್ಟು ಸಾಂಬಾರು ಪದಾರ್ಥಗಳ ರಫ್ತಿನ ಶೇಕಡಾ 34 ರಷ್ಟಿದೆ.

ಕೆಡಿಯಾ ಅಡ್ವೈಸರಿ ಪ್ರಕಾರ, ಚೀನಾ 2024ರ ಹಣಕಾಸು ವರ್ಷದಲ್ಲಿ 4,123 ಕೋಟಿ ರೂ.ಗಳ ಮೌಲ್ಯದ 1.79 ಲಕ್ಷ ಟನ್ ಗಳಷ್ಟು ಭಾರತೀಯ ಕೆಂಪು ಮೆಣಸಿನಕಾಯಿಯನ್ನು ಆಮದು ಮಾಡಿಕೊಂಡಿದೆ.

ಇದು 2023ರ ಹಣಕಾಸು ವರ್ಷದಲ್ಲಿ 3,408 ಕೋಟಿ ರೂ.ಗಳ ಮೌಲ್ಯದ 1.57 ಲಕ್ಷ ಟನ್​ಗಳಿಂದ ಪರಿಮಾಣದಲ್ಲಿ ಶೇಕಡಾ 14 ರಷ್ಟು ಹೆಚ್ಚಳ ಮತ್ತು ಮೌಲ್ಯದಲ್ಲಿ ಶೇಕಡಾ 21 ರಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ. ಬಾಂಗ್ಲಾದೇಶಕ್ಕೆ ಮೆಣಸಿನಕಾಯಿ ರಫ್ತು 2024ರ ಹಣಕಾಸು ವರ್ಷದಲ್ಲಿ ಶೇಕಡಾ 67 ರಷ್ಟು ಏರಿಕೆಯಾಗಿದ್ದು, 90,570 ಟನ್​ಗಳಿಗೆ ತಲುಪಿದೆ. ಹಿಂದಿನ ವರ್ಷ ಇದು 53,986 ಟನ್​ಗಳಷ್ಟಿತ್ತು.

"ಭಾರತದ ಕೆಂಪು ಮೆಣಸಿನಕಾಯಿ ರಫ್ತು 2024 ರ ಹಣಕಾಸು ವರ್ಷದಲ್ಲಿ ದಾಖಲೆಯ ಎತ್ತರವನ್ನು ತಲುಪಿದೆ. ಪ್ರಮುಖ ಆಮದು ರಾಷ್ಟ್ರಗಳಿಂದ ಹೆಚ್ಚುತ್ತಿರುವ ಬೇಡಿಕೆಯಿಂದ ರಫ್ತು ಪ್ರಮಾಣ ಹೆಚ್ಚಾಗಿದೆ. ವಿಶೇಷವಾಗಿ ಚೀನಾ ಮತ್ತು ಬಾಂಗ್ಲಾದೇಶಗಳಿಗೆ ಭಾರತದ ಕೆಂಪು ಮೆಣಸಿನಕಾಯಿಯ ರಫ್ತು ಹೆಚ್ಚಾಗುತ್ತಿರುವುದು ವಿಶ್ವಾದ್ಯಂತ ಭಾರತೀಯ ಮಸಾಲೆಗಳಿಗೆ ಹೆಚ್ಚುತ್ತಿರುವ ಮಾನ್ಯತೆ ಮತ್ತು ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಕೆಡಿಯಾ ಅಡ್ವೈಸರಿ ಹೇಳಿದೆ.

ಇದನ್ನೂ ಓದಿ : ವಿಶ್ವದ 3ನೇ ಅತಿದೊಡ್ಡ ಹಣಕಾಸು ಕ್ಷೇತ್ರವಾಗಿ ಬೆಳೆದ ಭಾರತದ ಬ್ಯಾಂಕೇತರ ವಲಯ: ಎಸ್​ಬಿಐ ವರದಿ - INDIAS NBFC SECTOR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.