ETV Bharat / business

ಬಲ್ಕ್​ ಫಿಕ್ಸೆಡ್ ಡೆಪಾಸಿಟ್​ ಮಿತಿ ಹೆಚ್ಚಿಸಿದ ಆರ್​ಬಿಐ: ಹೂಡಿಕೆದಾರರಿಗೆ ಭಾರಿ ಲಾಭ: ಅದು ಹೇಗೆ ಇಲ್ಲಿದೆ ಡೀಟೇಲ್ಸ್​​ - fixed deposit limit

ಆರ್​ಬಿಐ ಇಂದು ಬ್ಯಾಂಕುಗಳ ಬಲ್ಕ್​ ಫಿಕ್ಸೆಡ್​ ಡೆಪಾಸಿಟ್​ ಮಿತಿಯನ್ನು ಹೆಚ್ಚಿಸಿದೆ.

ಬಲ್ಕ್​ ಫಿಕ್ಸೆಡ್ ಡೆಪಾಸಿಟ್​ ಮಿತಿ ಹೆಚ್ಚಿಸಿದ ಆರ್​ಬಿಐ: ಹೂಡಿಕೆದಾರರಿಗೆ ಲಾಭ
ಬಲ್ಕ್​ ಫಿಕ್ಸೆಡ್ ಡೆಪಾಸಿಟ್​ ಮಿತಿ ಹೆಚ್ಚಿಸಿದ ಆರ್​ಬಿಐ: ಹೂಡಿಕೆದಾರರಿಗೆ ಲಾಭ (IANS)
author img

By ETV Bharat Karnataka Team

Published : Jun 7, 2024, 1:54 PM IST

ಮುಂಬೈ : ಶೆಡ್ಯೂಲ್ಡ್​ ವಾಣಿಜ್ಯ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳ ಬೃಹತ್ ಠೇವಣಿಗಳ (ಬಲ್ಕ್​ ಡೆಪಾಸಿಟ್​) ವ್ಯಾಖ್ಯಾನವನ್ನು '3 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಏಕ ರೂಪಾಯಿ ಅವಧಿ ಠೇವಣಿ' (Single Rupee term deposits of Rs 3 crore and above) ಎಂದು ಬದಲಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ ಬಿಐ) ನಿರ್ಧರಿಸಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ತಿಳಿಸಿದ್ದಾರೆ.

ಸರಳವಾಗಿ ಹೇಳುವುದಾದರೆ - ಈ ಮುನ್ನ 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಏಕ ರೂಪಾಯಿ ಅವಧಿ ಠೇವಣಿಗಳನ್ನು ಬಲ್ಕ್ ಅಥವಾ ಬೃಹತ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತಿತ್ತು. ಈಗ ಆ ಮಿತಿಯನ್ನು 3 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಬ್ಯಾಂಕುಗಳು ತಮ್ಮ ಅವಶ್ಯಕತೆಗಳು ಮತ್ತು ಆಸ್ತಿ-ಹೊಣೆಗಾರಿಕೆ ನಿರ್ವಹಣೆ (ಎಎಲ್ಎಂ) ಅಂದಾಜಿನ ಪ್ರಕಾರ ಬೃಹತ್ ಠೇವಣಿಗಳ ಮೇಲೆ ವಿಭಿನ್ನ ಬಡ್ಡಿದರಗಳನ್ನು ನಿಗದಿ ಮಾಡುವ ವಿವೇಚನೆಯನ್ನು ಹೊಂದಿರಲಿವೆ.

ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳ ಬೃಹತ್ ಠೇವಣಿ ಮಿತಿಯನ್ನು 2019 ರಲ್ಲಿ '2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಏಕ ರೂಪಾಯಿ ಅವಧಿ ಠೇವಣಿಗಳು' ಎಂದು ಬದಲಾಯಿಸಲಾಗಿತ್ತು. ಪರಿಶೀಲನೆಯ ನಂತರ ಈ ಮಿತಿಯನ್ನು ಈಗ ಹೆಚ್ಚಿಸಲಾಗಿದೆ ಎಂದು ಆರ್​ಬಿಐ ಗವರ್ನರ್ ಹೇಳಿದರು.

ಈ ಕ್ರಮವನ್ನು ಜಾರಿಗೆ ತರಲು ಅಗತ್ಯವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. ಹಾಗೆಯೇ ಆರ್​ಆರ್​ಬಿಗಳಿಗೆ ಅನ್ವಯವಾಗುವಂತೆ ಸ್ಥಳೀಯ ಪ್ರದೇಶ ಬ್ಯಾಂಕುಗಳ ಬೃಹತ್ ಠೇವಣಿ ಮಿತಿಯನ್ನು '1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಏಕ ರೂಪಾಯಿ ಅವಧಿ ಠೇವಣಿಗಳು' ಎಂದು ವ್ಯಾಖ್ಯಾನಿಸಲು ಪ್ರಸ್ತಾಪಿಸಲಾಗಿದೆ ಎಂದು ದಾಸ್ ತಿಳಿಸಿದರು.

2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಬ್ಯಾಂಕ್ ಎಫ್​ಡಿಯನ್ನು ಪ್ರಸ್ತುತ ಬೃಹತ್ ಎಫ್​ಡಿ ಎಂದು ಪರಿಗಣಿಸಲಾಗುತ್ತದೆ. ಇದರರ್ಥ 2 ಕೋಟಿ ರೂ.ಗಳಿಂದ 3 ಕೋಟಿ ರೂ.ಗಳವರೆಗಿನ ಬ್ಯಾಂಕ್ ಎಫ್​ಡಿಯನ್ನು ಶೀಘ್ರದಲ್ಲೇ ಬೃಹತ್ ಎಫ್​ಡಿ ಬದಲಿಗೆ ರಿಟೇಲ್ ಎಫ್​ಡಿ ಎಂದು ಪರಿಗಣಿಸಲಾಗುತ್ತದೆ.

ರಿಟೇಲ್​ ಎಫ್​ಡಿಗಳಿಗೆ ಹೋಲಿಸಿದರೆ ಬ್ಯಾಂಕುಗಳು ಸಾಮಾನ್ಯವಾಗಿ ಬೃಹತ್ ಎಫ್​ಡಿಗಳ ಮೇಲೆ ಕಡಿಮೆ ಬಡ್ಡಿ ದರಗಳನ್ನು ನೀಡುತ್ತವೆ. ಬೃಹತ್ ಠೇವಣಿಗಳ ಮೇಲಿನ ಮಿತಿಯನ್ನು ಹೆಚ್ಚಿಸುವ ನಿರ್ಧಾರದ ನಂತರ, ಎಫ್​ಡಿ ಹೂಡಿಕೆದಾರರು ಹೆಚ್ಚಿನ ಬಡ್ಡಿದರ ಗಳಿಸುವ ಸಾಧ್ಯತೆಯಿದೆ. ಸಾಲ ಮಾರುಕಟ್ಟೆಯಲ್ಲಿನ ನಗದು ಲಭ್ಯತೆಯನ್ನು ಅವಲಂಬಿಸಿ ಬ್ಯಾಂಕುಗಳು ನಿರ್ದಿಷ್ಟ ಅವಧಿಗಳಲ್ಲಿ ಬೃಹತ್ ಎಫ್​ಡಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ಆದಾಗ್ಯೂ, ಈ ಮಿತಿಯು ಪ್ರತ್ಯೇಕ ನೀತಿಯನ್ನು ಹೊಂದಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ.

ಇದನ್ನೂ ಓದಿ : ಈ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ: ಗೃಹ ಸಾಲದ ಮೇಲಿನ ಬಡ್ಡಿದರಲ್ಲೂ ಇಲ್ಲ ಯಾವುದೇ ಬದಲಾವಣೆ! - Repo Rate Unchanged

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.