ETV Bharat / business

ಟಾಟಾ ಗ್ರೂಪ್​ನ ಬೃಹತ್​​​​​​​​​​​​​​​​ ಬೆಳವಣಿಗೆಗೆ ರತನ್​ ಪಾತ್ರ ಹಿರಿದು; ಹೀಗಿದೆ ಅವರ ಅಭಿವೃದ್ಧಿಯ ಪರ್ವ

ರತನ್​ ಟಾಟಾ ಅವರ ಉದ್ಯಮದ ವಿಜಯ ಮತ್ತು ಅವರ ಕಾರ್ಯ ಪರಂಪರೆಗಳ ನಡೆ ಕುರಿತ ಒಂದು ಪುಟ್ಟ ಪರಿಚಯ ಇಲ್ಲಿದೆ.

author img

By ETV Bharat Karnataka Team

Published : 3 hours ago

ratan-naval-tata-passes-away-how-he-transformed-tata-group-a-timeline
ರತನ್​ ಟಾಟಾ (ಎಎನ್​ಐ)

ಹೈದರಾಬಾದ್​: ಟಾಟಾ ಗ್ರೂಪ್​ ಅನ್ನು ದೇಶದ ಅತಿ ದೊಡ್ಡ ಬ್ರಾಂಡ್​ ಮಾಡುವಲ್ಲಿ ರತನ್​ ಟಾಟಾ ಪ್ರಮುಖ ಪಾತ್ರವಹಿಸಿದ್ದರು. ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಕೆಮಿಕಲ್ಸ್​ಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ರತನ್​ ಟಾಟಾ ಅವರು ವ್ಯವಹಾರ ಕುಶಾಗ್ರಮತಿ, ದೂರದೃಷ್ಟಿ ಹೊಂದಿದ್ದರು. ದೇಶಕ್ಕೆ ಅಪಾರ ಕೊಡುಗೆ ನೀಡಿದ ರತನ್​ ಟಾಟಾ ಬುಧವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರತನ್​ ಟಾಟಾ ಅವರ ಉದ್ಯಮದ ವಿಜಯ ಮತ್ತು ಅವರ ಕಾರ್ಯ ಪರಂಪರೆಗಳ ನಡೆ ಕುರಿತ ಒಂದು ಪುಟ್ಟ ಪರಿಚಯ ಇಲ್ಲಿದೆ.
ಟಾಟಾ ಸಾಗಿ ಬಂದ ಹಾದಿ:

  • 1937: ಸೂನು ಮತ್ತು ನೇವಲ್ ಟಾಟಾ ದಂಪತಿಗೆ ರತನ್ ಟಾಟಾ ಜನಿಸಿದರು.
  • 1955: 17 ನೇ ವಯಸ್ಸಿನಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯಕ್ಕೆ (ಇಥಾಕಾ, ನ್ಯೂಯಾರ್ಕ್, ಅಮೆರಿಕ.) ದಾಖಲು. ಅಲ್ಲಿಯೇ ಏಳು ವರ್ಷಗಳ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಕೋರ್ಸ್​​ನಲ್ಲಿ ಅಧ್ಯಯನ.
  • 1962: ವಾಸ್ತುಶಿಲ್ಪದಲ್ಲಿ ಸ್ನಾತಕೋತ್ತರ ಪದವಿ.
  • 1962: ರತನ್ ಟಾಟಾ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ 1962 ರಲ್ಲಿ ಟಾಟಾ ಗ್ರೂಪ್‌ಗೆ ಸೇರ್ಪಡೆ. ಲಾಸ್ ಏಂಜಲೀಸ್‌ನಲ್ಲಿ ಜೋನ್ಸ್ ಮತ್ತು ಎಮ್ಮನ್ಸ್ ಅವರೊಂದಿಗೆ ಸ್ವಲ್ಪ ಕಾಲ ಕೆಲಸ ಮಾಡಿದ ಅನುಭವ.
  • ಟಾಟಾ ಇಂಡಸ್ಟ್ರೀಸ್‌ನಲ್ಲಿ ಸಹಾಯಕರಾಗಿ ಟಾಟಾ ಗ್ರೂಪ್‌ಗೆ ಸೇರಿದ ಅವರು, ವರ್ಷದ ನಂತರ ಟಾಟಾ ಇಂಜಿನಿಯರಿಂಗ್ ಮತ್ತು ಲೊಕೊಮೊಟಿವ್ ಕಂಪನಿಯ (ಈಗಿನ ಟಾಟಾ ಮೋಟಾರ್ಸ್) ಜೆಮಶೆಡ್​​ಪುರ ಘಟಕದಲ್ಲಿ ಆರು ತಿಂಗಳ ತರಬೇತಿ ಪಡೆದರು.
  • 1963: ತರಬೇತಿ ಕಾರ್ಯಕ್ರಮಕ್ಕಾಗಿ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿ, ಅಥವಾ ಟಿಸ್ಕೊ (ಈಗ ಟಾಟಾ ಸ್ಟೀಲ್) ಗೆ ಸ್ಥಳಾಂತರಗೊಂಡರು
  • 1965: ಟಿಸ್ಕೊನ ಇಂಜಿನಿಯರಿಂಗ್ ವಿಭಾಗದಲ್ಲಿ ತಾಂತ್ರಿಕ ಅಧಿಕಾರಿಯಾಗಿ ನೇಮಕ.
  • 1969: ಆಸ್ಟ್ರೇಲಿಯಾದಲ್ಲಿ ಟಾಟಾ ಗ್ರೂಪ್‌ನ ಪ್ರತಿನಿಧಿಯಾಗಿ ಕೆಲಸ.
  • 1970: ಭಾರತಕ್ಕೆ ಹಿಂತಿರುಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗೆ ಸೇರಿದರು. ನಂತರ ಹೊಸ ಸಾಫ್ಟ್‌ವೇರ್ ಸಂಸ್ಥೆ ಪ್ರಾರಂಭಿಸಿದರು.
  • 1971: ಟಾಟಾ 1971 ರಲ್ಲಿ ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್‌ನ ಪ್ರಭಾರ ನಿರ್ದೇಶಕರಾಗಿ ನೇಮಕಗೊಂಡರು.
  • 1974: ಟಾಟಾ ಸನ್ಸ್‌ನ ಮಂಡಳಿಗೆ ನಿರ್ದೇಶಕರಾಗಿ ಸೇರ್ಪಡೆ.
  • 1975: ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಸುಧಾರಿತ ನಿರ್ವಹಣಾ ಕಾರ್ಯಕ್ರಮ ಪೂರ್ಣಗೊಳಿಸಿದರು.
  • 1981: ಟಾಟಾ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ಆಯ್ಕೆ, ಇಲ್ಲಿ ಹೈಟೆಕ್ ವ್ಯವಹಾರಗಳಲ್ಲಿ ಹೊಸ ಉದ್ಯಮಗಳ ಪ್ರವರ್ತಕರಾಗಿ ರೂಪುಗೊಂಡರು.
  • 1983: ರತನ್ ಟಾಟಾ ಉಪ್ಪಿನ ಬ್ರ್ಯಾಂಡ್ ಪ್ರಾರಂಭಿಸಿದರು - ಟಾಟಾ ಸಾಲ್ಟ್, ಭಾರತದ ಮೊದಲ ರಾಷ್ಟ್ರೀಯ ಬ್ರಾಂಡ್ ಉಪ್ಪು ಆಗಿದ್ದು, ಆಯೋಡೈಸ್ಡ್ ವ್ಯಾಕ್ಯೂಮ್ ಉಪ್ಪನ್ನು ಪರಿಚಯಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಹೊಂದಿದೆ. ಆ ಸಮಯದಲ್ಲಿ ಬ್ರ್ಯಾಂಡ್ ಮಾಡದ ಮತ್ತು ಪ್ಯಾಕ್ ಮಾಡದ ಉಪ್ಪು ಜನಪ್ರಿಯವಾಗಿತ್ತು.
  • 1986: ರತನ್ ಟಾಟಾ ಅವರು ಏರ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡರು. ಅವರು 1989 ರಲ್ಲಿ ಕೆಳಗಿಳಿಯುತ್ತಾರೆ.
  • ಮಾರ್ಚ್ 25, 1991: ರತನ್ ಟಾಟಾ ಟಾಟಾ ಸನ್ಸ್‌ ಮತ್ತು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿ ನೇಮಕಗೊಂಡರು

ಟಾಟಾ ಸನ್ಸ್‌ ಅಧ್ಯಕ್ಷರಾಗಿ ಮಾಡಿದ ಕೆಲಸಗಳು:

  1. 1999: ಫೋರ್ಡ್ ಮೋಟಾರ್ಸ್ ರತನ್ ಟಾಟಾ ಮತ್ತು ಅವರ ತಂಡವನ್ನು ತಿರಸ್ಕರಿಸಿತ್ತು. ನಂತರ ಫೋರ್ಡ್ ಮೋಟಾರ್ಸ್‌ನಿಂದ ಜಾಗ್ವಾರ್-ಲ್ಯಾಂಡ್ ರೋವರ್ (ಜೆಎಲ್‌ಆರ್) ಖರೀದಿಸುವ ಮೂಲಕ ರತನ್​ ಟಾಟಾ ತಿರುಗೇಟು ನೀಡಿದ್ದರು.
  2. 2000: 2000: ರತನ್ ಟಾಟಾ ಅವರು ಭಾರತ ಸರ್ಕಾರದಿಂದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ಪಡೆದರು. ಅದೇ ವರ್ಷ, ಟಾಟಾ ಟೀ ಜಾಗತಿಕ ಟೀ ಬ್ರ್ಯಾಂಡ್ ಟೆಟ್ಲಿ ಗ್ರೂಪ್ ಅನ್ನು 271 ಮಿಲಿಯನ್ ಯುರೋಗಳಿಗೆ ಸ್ವಾಧೀನಪಡಿಸಿಕೊಂಡಿತು. ಅವರ ನಾಯಕತ್ವದಲ್ಲಿ, ಟಾಟಾ ಗ್ರೂಪ್‌ನ ಬೆಳವಣಿಗೆ ಮತ್ತು ಜಾಗತೀಕರಣದ ಚಾಲನೆಯು ವೇಗವನ್ನು ಪಡೆದುಕೊಂಡಿತು. ಕೋರಸ್, ಜಾಗ್ವಾರ್ ಲ್ಯಾಂಡ್ ರೋವರ್, ಬ್ರನ್ನರ್ ಮಾಂಡ್, ಜನರಲ್ ಕೆಮಿಕಲ್ ಕೈಗಾರಿಕಾ ಉತ್ಪನ್ನ ಸೇರಿದಂತೆ ಹಲವಾರು ಉನ್ನತ ಉತ್ಪನ್ನಗಳನ್ನು ಟಾಟಾ ಸ್ವಾಧೀನ ಪಡಿಸಿಕೊಂಡು ವಿದೇಶಗಳಲ್ಲೂ ತನ್ನ ಛಾಪು ಮೂಡಿಸಿತು.
  3. 2004: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿಮಾಡಲಾಯಿತು. ಕಂಪನಿ ಮಾರ್ಕೆಟ್​​ಕ್ಯಾಪ್​ ದತ್ತಾಂಶದ ಪ್ರಕಾರ, ಈ ಐಟಿ ಸಂಸ್ಥೆಯು 183.36 ಬಿಲಿಯನ್​ ಡಾಲರ್​​ ಮೌಲ್ಯದ್ದಾಗಿದೆ.
  4. 2006: TataSky ಅನ್ನು ಪ್ರಾರಂಭಿಸುವ ಮೂಲಕ ಟಾಟಾ ಡೈರೆಕ್ಟ್-ಟು-ಹೋಮ್ (ಡಿಟಿಎಚ್​​) ದೂರದರ್ಶನ ವ್ಯವಹಾರವನ್ನು ಪ್ರವೇಶಿಸಿತು. ಈ ವ್ಯಾಪಾರವು ಈಗ ದೂರದರ್ಶನ ನೆಟ್‌ವರ್ಕ್ ವಿತರಣಾ ವಲಯದಲ್ಲಿ ಅತಿ ದೊಡ್ಡ ಸಂಸ್ಥೆಯಾಗಿ ಬೆಳವಣಿಗೆ ಹೊಂದಿದೆ.
  5. 2008: ಪೋರ್ಡ್​​ನಿಂದ ಟಾಟಾ ಮೋಟಾರ್ಸ್ ಜಾಗ್ವಾರ್-ಲ್ಯಾಂಡ್ ರೋವರ್ ಅನ್ನು ಫೋರ್ಡ್ 2.5 ಬಿಲಿಯನ್​ ಡಾಲರ್​ಗೆ ಖರೀದಿಸಿತು. ಆರ್ಥಿಕ ಸಂಕಷ್ಟ, ಕಠಿಣ ಸ್ಪರ್ಧೆ ಮತ್ತು ಗುಣಮಟ್ಟದ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಪೋರ್ಡ್​ ಅನ್ನು ಟಾಟಾ ರಕ್ಷಿಸಿತು. ಇದೇ ವರ್ಷ ರತನ್ ಟಾಟಾ ಅವರು ಭಾರತ ಸರ್ಕಾರದಿಂದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದರು. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಕಾರು ಲಭ್ಯವಾಗಲು 1 ಲಕ್ಷ ಬೆಲೆಯ ಟಾಟಾ ನ್ಯಾನೋವನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡರು.
  6. ಡಿಸೆಂಬರ್ 2012: ಟಾಟಾ ಗ್ರೂಪ್‌ನೊಂದಿಗೆ 50 ವರ್ಷಗಳ ಕಾಲ ಕಳೆದ ನಂತರ ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನಕ್ಕೆ ರತನ್ ಟಾಟಾ ರಾಜೀನಾಮೆ ನೀಡಿ, ಟಾಟಾ ಸನ್ಸ್‌ನ ಗೌರವಾಧ್ಯಕ್ಷರಾಗಿ ನೇಮಕಗೊಂಡರು.
  7. 2022: ಟಾಟಾ ಸನ್ಸ್‌ನ ಹಂಗಾಮಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಒಂದು ದಶಕದ ಬಳಿಕ ಅವರು ಟಾಟಾ ಗ್ರೂಪ್​ಗೆ ಏರ್​ ಇಂಡಿಯಾವನ್ನು ಭಾರತ ಸರ್ಕಾರದಿಂದ ಮರಳಿ ತಂದರು. ಏರ್​ ಇಂಡಿಯಾ ವಶಕ್ಕೆ ಪಡೆಯಲು ಟಾಟಾ ಗ್ರೂಪ್​ ಸರ್ಕಾರ 18.000 ಕೋಟಿ ಪಾವತಿಸಿತು.

ಇದನ್ನೂ ಓದಿ: ಉದ್ಯಮ ಸಾಮ್ರಾಜ್ಯದ ಸೂರ್ಯ ಅಸ್ತಂಗತ: ಟಾಟಾ ಗ್ರೂಪ್​​ನ ದಿಗ್ಗಜ ರತನ್​ ಟಾಟಾ ಇನ್ನಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.